ಮುಸ್ಲಿಂ ಯುವಕರಿಂದ ಶರಬತ್ ವಿತರಣೆ
ಮುದ್ದೇಬಿಹಾಳ ೧೦: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಯುವಕರು ಪಟ್ಟಣದ ಧಾರ್ಮಿಕ ಧ್ವಜಗಳೊಂದಿಗೆ ಮೆರವಣಿಗೆ ನಡೆಸಿದರು.
ಪಟ್ಟಣದ ಇಂದಿರಾ ಸರ್ಕಲ್ದಿಂದ ಹಮ್ಮಿಕೊಂಡಿದ್ದ ಈ ಮೆರವಣಿಗೆಯಲ್ಲಿ ಡಿಜೆ ಹಚ್ಚಿ ಟಿಪ್ಪು ಸುಲ್ತಾನ ಕುರಿತಾಗಿ ಹಾಗೂ ಇತರೆ ಹಾಡುಗಳನ್ನು ಹಾಕಿ ನೂರಾರು ಯುವಕರು ಮೆರವಣಿಗೆಯಲ್ಲಿ ಸಾಗಿದರು.ಇದೇ ಸಮಯದಲ್ಲಿ ಯುವಕರ ತಂಡ ಸಾರ್ವಜನಿಕರಿಗೆ ಹಬ್ಬದ ನಿಮಿತ್ಯ ಶರಬತ್ ವಿತರಣೆ ಮಾಡಿತು.ಭೀರ್ಮ ಆರ್ಮಿ ಈ ಮೆರವಣಿಗೆಯನ್ನು ಆಯೋಜನೆ ಮಾಡಿತ್ತು.