ಮಹಲಿಂಗಪುರ

ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ;ಬಿಳಿಯಾನಿಸಿದ್ದ ಶ್ರೀ

ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ;ಬಿಳಿಯಾನಿಸಿದ್ದ ಶ್ರೀ

ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ;ಬಿಳಿಯಾನಿಸಿದ್ದ ಶ್ರೀ  

ಮಹಾಲಿಂಗಪುರ 03 : ಸಾಧಿಸಬೇಕೆಂದರೇ ಅದರ ಆರಂಭವೇ ಸತ್ಸಂಗ ಸಂತ ಮಹಾತ್ಮರ ಸಂಘವೇ ಸತ್ಸಂಗ. ಸತ್ಸಂಗದಿಂದ ಎಲ್ಲಾ ಸಂಶಯಗಳು ದೂರವಾಗಿ ಸತ್ಯಾ ಸತ್ಯಾತೆಗಳ ಅರಿವಾಗುತ್ತದೆ. ಸತ್ಸಂಗವನ್ನು ತಿಳಿದು ಆಚರಣೆ ಮಾಡಬೇಕು. ಆಗ ಮಾತ್ರ ಅದರ ಫಲ ಲಭ್ಯ. ಅಂದರೆ, ಮನುಷ್ಯನನ್ನು ಮಹಾದೇವನನ್ನಾಗಿ ಮಾಡುತ್ತದೆ. ಎಂದು ಜೋಕಾನಟ್ಟಿಯ ಬೀಳಯಾನಿಸಿದ್ದ ಮಹಾಸ್ವಾಮಿಗಳು ಹೇಳಿದರು.  

 ಸ್ಥಳೀಯ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರವಚನದ ನಾಲ್ಕನೇಯ ದಿನದ ಪ್ರವಚನದ ದಿವ್ಯ ಸಾನಿಧ್ಯ ವಹಿಸಿ ಅಶಿರ್ವಚನ ನೀಡಿ ಮಾತನಾಡಿ ಒಮ್ಮೆ ವಿಶ್ವಾಮಿತ್ರರು ಮಹರ್ಷಿ ವಸಿಷ್ಠರ ಆಶ್ರಮಕ್ಕೆ ಬಂದರು. ವಸಿಷ್ಠರು ವಿಶ್ವಾಮಿತ್ರರಿಗೆ ವಿಶೇಷವಾದ ಆಥಿತ್ಯಯವನ್ನು ಮಾಡಿ, ಅವರನ್ನು ಬೀಳ್ಗೊಡುವಾಗ ನಿಮಗೆ ಅರ್ಧ ಕ್ಷಣದ ಸತ್ಸಂಗದ ಫಲ ದೊರೆಯಲಿ ಎಂದು ಆಶೀರ್ವದಿಸಿದರು. ನಂತರ ಮಾತನಾಡಿದ ಶಹಪುರದ ಅವದೂತಸಿದ್ದ ಮಹಾಸ್ವಾಮಿಗಳು  

ವಿಶ್ವಾಮಿತ್ರರಿಗೆ ಅರ್ಧ ಕ್ಷಣದ ಸತ್ಸಂಗದ ಫಲದ ಕುರಿತು ಹೇಗೆಂದರೆ, ಸೂರ್ಯನಿಗೆ ಸಮನಾದ ಪ್ರತಿ ಸೂರ್ಯ ಮೇರು ಪರ್ವತಕ್ಕೆ ಸಮನಾದ ಪ್ರತಿ ಮೇರು ಪರ್ವತ ಪ್ರತೀ ಆದಿಶೇಷನಿಗೆ ಸಮನಾದ ಆದಿಶೇಷನನ್ನು ನಿರ್ಮಿಸುವ ಶಕ್ತಿ ಅರ್ಧ ಕ್ಷಣದ ಸತ್ಸಂಗದ ಫಲಕ್ಕೆ ಇದೆ ಎಂಬುದು ತಿಳಿದ ವಿಶ್ವಾ ಮಿತ್ರರು, ವಸಿಷ್ಠರ ಅಗಾಧವಾದ ಜ್ಞಾನಶಕ್ತಿಗೆ ತಲೆಬಾಗಿ ಮನಃಪೂರ್ವಕ ವಾಗಿ ವಂದಿಸಿದರು. ಸಂಘ ಎಂದರೆ ಸತ್ಯವಾದ ಸಂಗವೇ ಸತ್ಸಂಗ, ಆನಂದ ಸಂತೋಷ ನೆಮ್ಮದಿ ಸಿಗುವುದು ಮತ್ತೊಬ್ಬರಿಗೆ ಸಂತೋಷ ಕೊಟ್ಟರೆ ನಮಗೆ ಅದರ ದುಪ್ಪಟ್ಟು ಸಂತೋಷ ಸಿಗುತ್ತದೆ ಇದೆ ಸತ್ಸಂಗ. ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ವಾಗ್ಮಿ ಮಹೇಶ ಇಟಕನ್ನವರ ಸಂತೋಷದಿಂದಿದ್ದು ನಿಂತ ನೀರಾಗದೆ ಹರಿಯುವ ನದಿಯಾಗಿ ಅದರ ಗುರಿಯೇಸಮುದ್ರ ಸೇರುವುದು. ಇದೆಲ್ಲ ಭಗವಂತನ ಸೃಷ್ಟಿ ಭಗವಂತನನ್ನೇ ಸೇರುವುದು. ಗುರು- ಹಿರಿಯರು ಹೇಳುವ ಬುದ್ಧಿ ಮಾತು ಇದನ್ನೇ, ಒಳ್ಳೆಯ ಸಹವಾಸ ಮಾಡಿ ಒಳ್ಳೆಯ ಬುದ್ಧಿ ಕಲಿಯಿರಿ, ಸನ್ಮಾರ್ಗದಲ್ಲಿ ಜೀವನ ನಡೆಸಿದರೆ ಭಗವಂತ ಒಲಿಯುತ್ತಾನೆ. ಧರ್ಮ ಮಾರ್ಗದಲ್ಲೇ ನಡೆದು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡ ಅದೆಷ್ಟೋ ಮಹಾತ್ಮರ ಜೀವನ ಚರಿತ್ರೆಯನ್ನು ನಾವು ಓದಿ ಹಾಗೆ ಇರಬೇಕು ಎಂಬ ಭಾವ ನಮ್ಮೊಳಗೂ ಮೊಳಕೆ ಒಡೆಯುತ್ತದೆ ಎಂದು ಹೇಳಿದರು. 

ಇಂದಿನ ಕಾರ್ಯಕ್ರಮದಲ್ಲಿ ಮಹಾಲಿಂಗಪ್ಪ ಹೊಸೂರ, ಸಿದ್ದರಾಮ ಯರಗಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖಾಂಡಾರದ ಮಹಾಲಿಂಗಪ್ಪ ಜಕ್ಕಣ್ಣವರ, ಚಂದ್ರ​‍್ಪ ದೋಣಿ , ಗಂಗಾಧರ ಮೇಟಿ, ಕರೆಪ್ಪ ಮೇಟಿ, ಕರೆಪ್ಪ ಪೂಜಾರಿ, ಹಾಲಪ್ಪ ಪೂಜಾರಿ, ಮುತ್ತು ದಿವಾನ, ಶ್ರೀಶೈಲ್ ಅವಟಿ ಭರಮಪ್ಪ ಅವಟಿ, ಹಣಮಂತ ಅವಟಿ, ಹಣಮಂತ ಸಂಶಿ ಪರಶು ಕೊಣ್ಣೂರ, ಮಹಾನಿಂಗಪ್ಪ ಬಾಡಗಿ, ಮಹದೇವ್ ಕದ್ದಿಮನಿ, ಕಲ್ಲಪ್ಪ ಚಿಂಚಲಿ, ಸೋಮು ದಿವಾನ,ಸೇರಿ ಹಲವರು ಇದ್ದರು. ಈ ಸಂಧರ್ಭದಲ್ಲಿ ಹಲವು ಗಣ್ಯಮಾನ್ಯರನ್ನು ಸನ್ಮಾನಿಸಲಾಯಿತು. ಇಂದಿನ ಪ್ರಸಾದ ವ್ಯವಸ್ಥೆಯನ್ನು ನಾಗಪ್ಪ ದೋಣಿ ಬಂದುಗಳು ಮಾಡಿಸಿದ್ದರು. ಕಾರ್ಯಕ್ರಮವನ್ನು ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ