ಮಹಲಿಂಗಪುರ

ಢವಳನಾಥ ಶಾಲೆ 16 ನೇ ವರ್ಷವೂ ಖೋಖೋದಲ್ಲಿ ಪ್ರಥಮ.

ಢವಳನಾಥ ಶಾಲೆ 16 ನೇ ವರ್ಷವೂ ಖೋಖೋದಲ್ಲಿ ಪ್ರಥಮ.

ಮಹಾಲಿಂಗಪುರ: ಶನಿವಾರ ನಡೆದ ಮಹಾಲಿಂಗಪುರ ಪ್ರಾಥಮಿಕ ವಲಯಮಟ್ಟದ ಕ್ರೀಡಾಕೂಟದಲ್ಲಿ ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಹಿರಿಯ ಪ್ರಾಥಮಿಕ ಶಾಲೆ ಬಾಲಕರ ಖೋ ಖೋ ಪಂದ್ಯದಲ್ಲಿ ಸಚಿನ್ ಮಹಾದೇವ ಖಿಲಾರಿ ನಾಯಕತ್ವದ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ, ಸತತ 16 ನೇ ವರ್ಷವೂ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಯಿತು.

ಸ್ಥಳೀಯ ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ಸದರಿ ಶಾಲೆಯ ಪೃಥ್ವಿ ಸಂಗಪ್ಪ ಶಿವಪುರ ನಾಯಕತ್ವದ ಬಾಲಕಿಯರ ತಂಡವೂ ಜಯಶಾಲಿಯಾಗಿ ತಾಲೂಕಾ ಹಂತಕ್ಕೆ ಪ್ರವೇಶಿಸಿತು. ವೈಯಕ್ತಿಕ ವಿಭಾಗದಲ್ಲಿ ಸೌಮ್ಯ ಶಿವಾನಂದ ಪಟ್ಟೇದ ಅಡೆತಡೆ ಓಟದಲ್ಲಿ ಪ್ರಥಮ, ಉದ್ದಜಿಗಿತದಲ್ಲಿ ದ್ವಿತೀಯ, ಪೃಥ್ವಿ ಸಂಗಪ್ಪ ಶಿವಾಪೂರ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದ ಪ್ರಯುಕ್ತ ದೈಹಿಕ ಶಿಕ್ಷಕ ಸಿ.ವಿ.ದಾದನಟ್ಟಿ ಹಾಗೂ ವಿಜಯಶಾಲಿಯಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಪಿ.ಜಿ.ಬಂಗಿ ಹಾಗೂ ಸದಸ್ಯರು, ಮುಖ್ಯಗುರು ಕೆ.ಜಿ.ನೇಗಿನಹಾಳ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ