ಮಹಲಿಂಗಪುರ

ನಿರ್ಮಲ ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ದೇವ ಮಾನವ ಕನಕದಾಸರು : ಶೇಖರ ಅಂಗಡಿ

ನಿರ್ಮಲ ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ದೇವ ಮಾನವ  ಕನಕದಾಸರು : ಶೇಖರ ಅಂಗಡಿ

ನಿರ್ಮಲ ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ದೇವ ಮಾನವ  ಕನಕದಾಸರು : ಶೇಖರ ಅಂಗಡಿ 

ಮಹಾಲಿಂಗಪುರ 18: ನಿರ್ಮಲ ಭಕ್ತಿಯಿಂದ ಆ ದೇವರನ್ನು ಒಲಿಸಿಕೊಂಡ ಶ್ರೇಷ್ಠ ಕನಕದಾಸರ ಮಹಿಮೆ ಅಪಾರ ಕನಕದಾಸರನ್ನು ಬರೀ ಕುರುಬ ಸಮುದಾಯಕ್ಕೆ ಸೀಮಿತ ಮಾಡಬಾರದು, ಮಹಾತ್ಮರಿಗೆ ಜಾತಿ ಇಲ್ಲ ಅವರು ಜಾತಿ ವ್ಯವಸ್ಥೆ ಮೀರಿ ಬೆಳೆದು ವಿಶ್ವ ಮಾನವರಾದವರು ಅವರ ಜಯಂತಿಯನ್ನು ವರ್ಷಕೊಮ್ಮೆ ಮಾಡದೇ ಮಹಾತ್ಮರ ಜಯಂತಿಗಳು ನಿತ್ಯ ನೂತನವಾಗಿ ಆಚರಿಸುವಂತಾಗಬೇಕು ಆಗಲೇ ಆಚರಣೆಗೆ ಅರ್ಥ ಮತ್ತು ಗೌರವ ಬರುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶೇಖರ ಅಂಗಡಿ ಹೇಳಿದರು.  

  ನಗರದ ಆಯಿಲ್ ಮಿಲ್ ಪ್ಲಾಟಿನಲ್ಲಿರುವ ಕನಕದಾಸ ಬ್ಯಾಂಕಿನಲ್ಲಿ ನಡೆದ ಕನಕದಾಸರ 537 ನೇ ಜಯಂತಿಯನ್ನು ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಸಿ ಮಾತನಾಡಿದ ಅವರು ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಉಸಿರಾಡುವ ಗಾಳಿ ಯಾವ ಕುಲ,ಕತ್ತಲೆ ಹೋಗಲಾಡಿಸುವ ಬೆಳಕು ಯಾವ ಕುಲ, ಕುಡಿಯುವ ನೀರು ಯಾವ ಕುಲ, ತಿನ್ನುವ ಅನ್ನ ಯಾವ ಕುಲ ಇವುಗಳಿಗೆ ಹೇಗೆ ಜಾತಿ ಇಲ್ಲವೋ ಹಾಗೆ ಭೂಮಿ ಮೇಲೆ ಹುಟ್ಟಿದ ಮನುಷ್ಯರೆಲ್ಲಾ ಒಂದೇ ಕುಲ ಮನುಜ ಕುಲ ಎಂದು ಸಾರಿದರು ಮನುಜ ಕುಲದಲ್ಲಿ ಹುಟ್ಟಿ ಭಕ್ತಿಯಿಂದಲೇ ಪ್ರತ್ಯಕ್ಷ ದೇವರನ್ನು ಕಂಡವರು ಯಾರಾದರೂ ಇದ್ದರೇ ಅವರೆ ವಿಶ್ವ ಮಾನವ ಭಕ್ತ ಶೇಷ್ಠ ಕನಕದಾಸರು ಎಂದರು. 

ನಂತರ ಮಾತನಾಡಿ ಪುರಸಭೆ ಮಾಜಿ ಅಧ್ಯಕ್ಷರಾದ ಜಿ ಎಸ್ ಗೊಂಬಿ ಅವರ ತಂದೆಯ ಮರಣ ನಂತರ ತಿಮ್ಮಪ್ಪ ಬಾಡ ಜಿಲ್ಲೆಗೆ ದೊರೆಯಾದ. ಒಂದು ದಿನ ಅವರು ಭೂಮಿಯನ್ನು ಅಗೆಯುತ್ತಿದ್ದಾಗ ಅವರಿಗೆ ಚಿನ್ನ ತುಂಬಿದ ಏಳು ಕೋಪರಿಗೆಗಳು (ದೊಡ್ಡ ಹಂಡೆ ) ಸಿಕ್ಕಿದವು.ಅವರು ಸಿಕ್ಕ ಎಲ್ಲ ಚಿನ್ನವನ್ನು ದಾನ ಧರ್ಮ ಕಾರ್ಯಗಳಾದ ಕೆರೆ ಕಟ್ಟೆ ನಿರ್ಮಾಣ, ದೇವಸ್ಥಾನ, ಧರ್ಮ ಛತ್ರಗಳ ನಿರ್ಮಾಣ ಮಾಡಿದರು ಇದನ್ನು ನೋಡಿದ ಜನರು ಅವರನ್ನು ಕನಕದಾಸ (ಕನಕ ಎಂದರೆ ಚಿನ್ನ )ಎಂದು ಕರೆಯತೋಡಗಿದರು.ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಭವ್ಯ ಇತಿಹಾಸವಿದೆ ಎಂದರು.  

ನಂತರ ಮಾತನಾಡಿದ ತೇರದಾಳ ಬ್ಲಾಕ್ ಕಾಂಗ್ರೆಸ್ ಮುಖಂಡ ಮಲ್ಲಪ್ಪಾ ಸಿಂಗಾಡಿ ಕನಕದಾಸರಿಗೆ ಕಲಿಯುಗದ ಶ್ರೀಮಂತ ಭಕ್ತರ ಕಾಮದೇನು ಕಲಿಯುಗದ ಭಗವಂತ ತಿರುಪತಿ ತಿಮ್ಮಪ್ಪನು ಕೂಡಾ ಸಾಕ್ಷಾತ್ ದರ್ಶನ ಕೊಟ್ಟಿದ್ದರು. ಉಡುಪಿಯ, ಶ್ರೀ ಕೃಷ್ಣ ಕಿಂಡಿ ಕಡೆ ಮುಖ ತಿರುಗಿಸಿ ದರ್ಶನ ಕೊಟ್ಟಿದು ಇತಿಹಾಸ,ಅದು ಇಂದು ಕನಕನ ಕಿಂಡಿ ಎಂದೇ ಹೆಸರು ಪಡೆದಿದ್ದು ಇತಿಹಾಸ,ಯಮನ ಕೋಣವನ್ನೇ ದರೇಗಿಸಿದ ಮಹಾ ಭಕ್ತ ಕನಕದಾಸರು ನೂರಾರು ವರ್ಷ ಬದುಕಿದ ಅವರು ಒಟ್ಟು 316 ಕೀರ್ತನೆಗಳನ್ನು ರಚಿಸಿದ್ದಾರೆ, ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನುಕುಲದ ಶ್ರೇಷ್ಠ ಸಂದೇಶಗಳಿವೆ ಎಂದರು. 

ಪುರಸಭೆಯಲ್ಲಿ :  ಪುರಸಭೆಯಲ್ಲಿ ಕನಕದಾಸರ 537 ನೇ ಜಯಂತಿಯನ್ನು ಕನಕದಾಸರ ಆವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ಪುರಸಭೆ ಅಧ್ಯಕ್ಷರಾದ ಯಲ್ಲಣ್ಣಗೌಡ ಪಾಟೀಲ ಮಾತನಾಡಿ ವರಕವಿಗಳು ಕಿರ್ತನಕಾರರು ಎನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು, ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ನಿರ್ಮೋಹಿಯಾಗಿ ಇಹದಲ್ಲಿ ಇದ್ದು, ಪರವನ್ನು ಗೆದ್ದ ಮಹಾನ ಸಂತ್ ಸರ್ವಕಾಲಿಕ ಸತ್ಯ ಸಾರಿ ವಿಶ್ವದ ಮಹಾತ್ಮ ವಿಶ್ವ ಸಂತ್ ಕನಕದಾಸರ ಕೊಡುಗೆ ಅಪಾರ ಅವರ ನಾಮ ಬಲವೇ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು. 

ಈ ಸಂಧರ್ಭದಲ್ಲಿ ಮುಖಂಡರಾದ  ಪುರಸಭೆ ಸದಸ್ಯರಾದ ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಮಹಾಲಿಂಗಪ್ಪ ಜಕ್ಕಣ್ಣವರ,ಮಹಾಲಿಂಗ ಸನದಿ,ಭೀಮಪ್ಪ ಸಂಶಿ , ಮಹೇಶ ಇಟಕನ್ನವರ, ಗಂಗಾಧರ ಮೇಟಿ, ಭೀಮಪ್ಪ ಸಂಶಿ, ಚಂದ್ರ​‍್ಪ ದೋಣಿ , ಶ್ರೀಶೈಲ ಕಾರಜೋಳ,ಜೊತೆಪ್ಪ ಕಪರಟ್ಟಿ ಪರಸಪ್ಪ ಬಂಡಿ, ಆನಂದ ಸನದಿ,ಶ್ರೀಶೈಲ ಕಳ್ಯಾಗೋಳ,ಶ್ರೀಶೈಲ ಅವಟಿ,ಕರೆಪ್ಪ ಮೇಟಿ, ಚಂದ್ರು ಸಂಶಿ ,ಯಲ್ಲಪ್ಪ ಪಟ್ಟಣಕೋಡಿ ಪ್ರಭು ಹುಬ್ಬಳ್ಳಿ, , ಮಹಾಲಿಂಗ ಮಾಳಿ, ಮಲ್ಲಪ್ಪ ಸೈದಾಪುರ, ವಿಠಲ ಸಂಶಿ,ಮಲ್ಲಪ್ಪ ಮಳಲಿ , ಕರೆಪ್ಪ ಹುಣಶೀಕಟ್ಟಿ,ಬಸಪ್ಪ ಬಂಡಿ, ಪ್ರಭು ಹುಣಶೀಕಟ್ಟಿ (ಪೂಜಾರಿ ), ರಾಜೇಶ ಭಾವಿಕಟ್ಟಿ, ಚನ್ನಪ್ಪ ರಾಮೋಜಿ ಸೇರಿದಂತೆ ಹಲವರು ಇದ್ದರು. ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮವನ್ನು ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು. 



ಸುದ್ದಿ ಓದಿ