ಶಿಗ್ಗಾವ್

ವಿದ್ಯುತ್ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡುವಲ್ಲಿ ವಿಳಂಬ ಧೋರಣೆ: ಮಣ್ಣಣ್ಣವರ

ವಿದ್ಯುತ್ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡುವಲ್ಲಿ ವಿಳಂಬ ಧೋರಣೆ: ಮಣ್ಣಣ್ಣವರ

ಲೋಕದರ್ಶನ ವರದಿ

ಶಿಗ್ಗಾವಿ 11: ಹೆಸ್ಕಾಂ ಕಂಪನಿಯಲ್ಲಿ ಸರ್ಕಾರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಆದೇಶವಿದ್ದರೂ ಕೆಲವು ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಸರ್ಕಾರದ ಆದೇಶದಂತೆ ವಿದ್ಯುತ್ ಗುತ್ತಿಗೆದಾರರಿಗೆ 5 ಲಕ್ಷಗಳವರೆಗಿನ ಸಾಮಾಗ್ರಿ ಸಹಿತ ತುಂಡುಗುತ್ತಿಗೆ ನೀಡುವಲ್ಲಿ ವಿಳಂಬ ಧೋರಣೆ ಹಾಗೂ ಪ್ಯಾಕೇಜ್ ಟೆಂಡರು ರದ್ದು ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಕೇಂದ್ರ ಸಮಿತಿ ಸದಸ್ಯ ಇಂಧನ ಸಚಿವ ಸುನಿಲ್ ಕುಮಾರಗೆ ಮನವಿ ಮಾಡಿದ್ದಾರೆ.

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಇಂಧನ ಸಚಿವ ಸುನಿಲ್ಕುಮಾರ್ ಡಿ 16 ರಂದು ಬೆಂಗಳೂರಿನಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರ ಸಭೆ ಕರೆದಿದ್ದು ಅತ್ಯಂತ ಪ್ರಮುಖವಾಗಿ ಈಗಾಗಲೇ ಸರಕಾರ ಮತ್ತು ಇಂಧನ ಇಲಾಖೆಯ ಆದೇಶವಿದ್ದರೂ  5 ಲಕ್ಷದೊಳಗಿನ ಎಲ್ಲಾ ತರನಾದ ಕಾಮಗಾರಿಗಳನ್ನು ಟೋಟಲ್ ಟರ್ಕ  ಮುಖಾಂತರ ಆಯಾ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ ಮುಖಾಂತರ ಸ್ಥಳೀಯ ಗುತ್ತಿಗೆದಾರರಿಗೆ ನೀಡುವ ಅವಕಾಶ ಇದ್ದರು ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಪಾಲನೆಯಾಗುತ್ತಿಲ್ಲ ಇದನ್ನು ತಕ್ಷಣ ಜಾರಿಗೊಳಿಸಬೇಕು ಜೊತೆಗೆ ಪ್ಯಾಕೇಜ್ ಟೆಂಡರ್ ರದ್ದು ಮಾಡಿ ಸಣ್ಣಪುಟ್ಟ ಗುತ್ತಿಗೆದಾರರಿಗೆ ಉದ್ಯೋಗಾವಕಾಶ ಮಾಡಿಕೊಡಬೇಕು 2) ಸಕರ್ಾರದ ಎಲ್ಲ ಇಲಾಖೆಗಳ ವಿದ್ಯುತ್ ಕಾಮಗಾರಿ ಕೆಲಸಗಳನ್ನು ಸಿವಿಲ್ ಕಾಮಗಾರಿ ಕೆಲಸಗಳಿಂದ ಬೇರ್ಪಡಿಸಿ ವಿದ್ಯುತ್ ಕಾಮಗಾರಿ ಕೆಲಸಗಳನ್ನು ವಿದ್ಯುತ್ ಗುತ್ತಿಗೆದಾರರಿಗೆ ಕೆಲಸ ಸಿಗುವಂತೆ ಆದೇಶಿಸಬೇಕು  4 )  ಒಬ್ಬೊಬ್ಬ ಅಧಿಕಾರಿ ಅವರಿಗೆ ತಿಳಿದಂತೆ ನೂತನ ವಿದ್ಯುತ್ ಪಡೆಯುವ ಗ್ರಾಹಕರಿಗೆ ಅಭಿವೃದ್ಧಿ ಶುಲ್ಕ. ಕೆ ಇ ಆರ್ ಸಿ.ನಿಯಮ ಉಲ್ಲಂಘಿಸಿ ಹಣ ಬರಿಸಿಕೊಳ್ಳುತ್ತಿದ್ದಾರೆ ಕೆಇಆರ್ಸಿ ಆದೇಶದಂತೆ ಹಣ ಬರೆಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಮಾಡಬೇಕು  ಎಸ್ಕಾಂಗಳಲ್ಲಿ ನೂತನ ಹಾಗೂ ಎಲ್ಲಾತರನಾದ ವಿದ್ಯುತ್ ಸಂಪರ್ಕ ಕಲ್ಪಿಸಲು ಸರಳಿಕರಣಗೊಳಿಸಬೇಕು ಇದರಿಂದ ಸಾವಿರಾರು ವಿದ್ಯುತ್ ಗುತ್ತಿಗೆದಾರರ ಹಾಗೂ ಲಕ್ಷಾಂತರ ಕಾರ್ಮಿಕರ ಪರಿವಾರಕ್ಕೆ ಉದ್ಯೋಗಾವಕಾಶ ಲಭಿಸಿ ಅನುಕೂಲವಾಗುತ್ತದೆ ಎಂದು ಕನರ್ಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಕೇಂದ್ರ ಸಮಿತಿಯ ಸದಸ್ಯ ಮಂಜುನಾಥ್ ಮಣ್ಣಣ್ಣವರ ತಿಳಿಸಿದ್ದಾರೆ.

ಸುದ್ದಿ ಓದಿ