ಸೆ.1ರಂದು ಸಿದ್ಧಾರೂಢ ತೆಪ್ಪೋತ್ಸವ ಜಾತ್ರೆ ನಡೆಸಲು ನಿರ್ಧಾರ
ಮಹಾಲಿಂಗಪುರ: ಬರುವ ಸೆ.1ರ ಶನಿವಾರ ಜಗದ್ಗುರು ಶ್ರೀಸಿದ್ಧಾರೂಢರ 94ನೇ ಪುಣ್ಯಸ್ಮರಣೆಯ ನಿಮಿತ್ಯ 41ನೇ ವರ್ಷದ ತೆಪ್ಪೋತ್ಸವ(ಜಲರಥೋತ್ಸವ) ಜಾತ್ರೆಯನ್ನು ನಡೆಸಲು ನಿರ್ಧರಿಸಲಾಯಿತು.
ಪಟ್ಟಣದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಪೀಠಾಧಿಪತಿ ಸಹಜಾನಂದ ಸ್ವಾಮಿಜಿಯವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಟ್ರಸ್ಟ್ ಕಮಿಟಿಯ ಪೂರ್ವಭಾವಿ ಸಭೆಯಲ್ಲಿ ಸೆ.1ರಂದು ತೆಪ್ಪೋತ್ಸವ ಜಾತ್ರೆಯನ್ನು ಸಡಗರದಿಂದ ನಡೆಸಲು ತಿರ್ಮಾನಿಸಲಾಯಿತು.
ಪ್ರತಿವರ್ಷದಂತೆ ಸೆ.1ರ ತೆಪ್ಪೋತ್ಸವ ಜಾತ್ರೆಯ ನಿಮಿತ್ಯ ಸಿದ್ದಾರೂಢರ ಮೂರ್ತಿಗೆ ಅಭಿಷೇಕ, ಬುತ್ತಿಪೂಜೆ, ಮಹಿಳೆಯರಿಗೆ ಉಡಿತುಂಬುವದು, ಭಜನೆ, ಉಪಸ್ಥಿತ ಪೂಜ್ಯರಿಂದ ಪ್ರವಚನ, ಮಹಾಪ್ರಸಾದ, ಸಂಜೆ 6ಕ್ಕೆ ಸಿದ್ದಸರೋವರ ಕೆರೆಯಲ್ಲಿ ತೆಪ್ಪೋತ್ಸವ(ಜಲರಥೋತ್ಸವ) ನಡೆಸಲು ನಿರ್ಧರಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ಕಮಿಟಿಯ ಉಪಾಧ್ಯಕ್ಷ ಡಾ|ಬಿ.ಡಿ.ಸೋರಗಾಂವಿ, ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ಮೋರೆ, ಖಜಾಂಚಿ ಅಲ್ಲಪ್ಪ ಗುಂಜಿಗಾಂವಿ, ಧರ್ಮದಶರ್ಿಗಳಾದ ಮಲ್ಲಪ್ಪ ಕಟಗಿ, ಚೇತನ ಹಾದಿಮನಿ, ಮಲ್ಲಪ್ಪ ಭಾವಿಕಟ್ಟಿ, ಗೋಲೇಶ ಅಮ್ಮಣಗಿ, ಲಕ್ಕಪ್ಪ ಚಮಕೇರಿ, ಗುರುಪಾದ ಅಂಬಿ, ಸಿದ್ದಾರೂಢ ಸೇವಾಸಮಿತಿಯ ಮಹಾಂತೇಶ ಘಟ್ನಟ್ಟಿ, ಮಹಾಲಿಂಗ ಕರೆಹೊನ್ನ, ಸಿದ್ದು ಧಡೂತಿ, ಚನ್ನಬಸು ಹುರಕಡ್ಲಿ, ಚನ್ನಪ್ಪ ಚಂಡೋಲ, ಮಲ್ಲಪ್ಪ ಯಾದವಾಡ, ಚನ್ನಪ್ಪ ಗುಗವಾಡ, ಮಹೇಶ ಇಟಕನ್ನವರ, ಎಸ್.ಕೆ.ಗಿಂಡೆ, ಸಿದ್ರಾಮಯ್ಯ ಗೋಠೆ, ಸುರೇಶ ಕೋಲಾರ, ಮಹೇಶ ಬಡಿಗೇರ, ಶ್ರೀಕಾಂತ ಪರೀಟ, ಶಿವಲಿಂಗ ತೇಲಿ, ಶಿವಾನಂದ ಬಡಿಗೇರ, ಸದಾಶಿವ ಇಂಗಳಗಿ ಸೇರಿದಂತೆ ಹಲವರು ಇದ್ದರು.