ಕಥೆ ಮತ್ತು ವಿಶೇಷ ಲೇಖನಗಳು

ಆರಾಮವಿಲ್ಲದವರ ಆರೈಕೆಯನ್ನು ಅಕ್ಕರೆಯಿಂದ ಮಾಡಿ

ಆರಾಮವಿಲ್ಲದವರ ಆರೈಕೆಯನ್ನು ಅಕ್ಕರೆಯಿಂದ ಮಾಡಿ

-ಡಾ. ಹೇಮಾವತಿ ಸೊನ್ನೊಳ್ಳಿ , ಬೆಳಗಾವಿ 

    ಪುಟ್ಟ ಮೊಬೈಲ್ನಲ್ಲಿ ಗೆಮ್ಸ್ ಆಡುತ್ತಾ ಕುಳಿತಿದ್ದ ಅವನ ಅಜ್ಜಿಗೆ ಮೈಯಲ್ಲಿ ಹುಷಾರಿರಲಿಲ್ಲ ಪುಟ್ಟುಗೆ ಅಜ್ಜಿ ಬಂದು ಸ್ವಲ್ಪ ಕುಡಿಯಲು ನೀರು ತಂದು ಕೊಡು ಎಂದು ಹೇಳಿದರು ಪುಟ್ಟುಗೆ ಎಲ್ಲಿಲ್ಲದ ಕೋಪ ಬಂತು.  ಏನಜ್ಜಿ ನಿನ್ನ ಕಾಟ ನೀರು ತಂದುಕೊಡು ಅದು ತಂದು ಕೊಡು ಇದು ತಂದು ಕೊಡು ಎಂದು ಮೇಲಿಂದ ಮೇಲೆ ಕಾಡ್ತೀಯಾ ಒಂದು ಸ್ವಲ್ಪ ಕುಳಿತುಕೊಳ್ಳೋಕು ಬಿಡಲ್ಲ ನಿನಗೆ ನನ್ನನ್ನು ಮೇಲಿಂದ ಮೇಲೆ ಕರೆಯೋದು ಬಿಟ್ಟು ಬೇರೆ ಕೆಲ್ಸಾನೇ ಇಲ್ಲಾ ಎಂದು ವಟವಟಮಾಡುತ್ತಾ ನೀರು ತಂದು ಕೊಟ್ಟ ಪುಟ್ಟನ ಮಾತುಗಳನ್ನು ಕೇಳಿ ಅಜ್ಜಿಗೆ ಮನದಲ್ಲಿ  ವೇದನೆಯಾಗುತ್ತಿತ್ತು. ಅಕ್ಕರೆಯಿಂದ ಅಪ್ಪಿಕೊಂಡು ಮುದ್ದು ಮಾಡಿ ಮೊಮ್ಮಗ ಮೊಮ್ಮಗ ಎಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡುತ್ತಿದ್ದ ನನಗೆ  ಈಗ ಅಸಹಾಯಕಗಳಾಗಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಹೀಗೆ ಅನಾಥರ ತೋರಿ  ಮಾತನಾಡುವುದು  ಸರಿನಾ ಎಂದು ಅಜ್ಜಿ ಯೋಚಿಸತೊಡಗಿದಳು  ಆ ಮೇಲೆ ಅಜ್ಜಿ ಪುಟ್ಟ ಸ್ವಲ್ಪ ತಲೆ ನೋಯ್ತಾ ಇದೆ ಅಲ್ಲಿದ್ದ ಗುಳಿಗೆ ಒಂದನ್ನು ಕೊಡಪ್ಪಾ ಎಂದಳು. ನಾನೇನ ಕೊಡಲ್ಲ ನನ್ನ ಸ್ನೇಹಿತರು ಆಟ ಆಡ್ಲಿಕೆ ಕಾಯ್ತಿದಾರೆ ನಾನು ಹೋಗಬೇಕು ಎಂದವನೇ ಹೊರಟು ಹೋಗಿಬಿಟ್ಟ. ಅಜ್ಜಿಯ ಕಣ್ಣಿಂದ ದಳದಳನೆ ನೀರಿಳಿಯ ತೊಡಗಿದವು.

ಶಾಲುನ ಅತ್ತೆ ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡು ಓಡಾಡಲಾಗದೇ ಮನೆಯಲ್ಲಿ  ಹಾಸಿಗೆ ಮೇಲೆ ಮಲಗಿಕೊಂಡೇ ಇರುತ್ತಿದ್ದರು. ಮಗನ ನೌಕರಿ ಬೇರೆ ಊರಲ್ಲಿ ಇದ್ದುದರಿಂದ  ಅವನು ಯಾವಾಗಲಾದರೊಮ್ಮೆ ಬಂದು ಹೋಗುತ್ತಿದ್ದ. ಪೋನ್ ಮೂಲಕ ತಾಯಿಯ ಯೋಗಕ್ಷೇಮ ವಿಚಾರಿಸುತ್ತಿದ್ದ. ಶಾಲು ಅತ್ತೆಯ ಸೇವೆಯನ್ನು ಸರಿಯಾಗಿ ಮಾಡುತ್ತಲೇ ಇರಲಿಲ್ಲ. ಅವರ ಮೇಲೆ ಯಾವತ್ತೂ ಸಿಡಿಮಿಡಿಗೊಳ್ಳುತ್ತಿದ್ದಳು. ಹೊತ್ತಿನ ಸರಿಯಾಗಿ ಅವರಿಗೆ ಊಟ, ಉಪಚಾರ ಔಷಧಿ, ಗುಳಿಗೆಗಳನ್ನು ನೀಡುತ್ತಿರಲಿಲ್ಲ  ಹೆಂಗ ಅದಿರಿ ಆರಾಮ ಐತೇನು ಅಂತಾ ಒಂದು ದಿನವೂ ವಿಚಾರಿಸುತ್ತಿರಲಿಲ್ಲ ಕೆಲಸಾನು ಮಾಡಬೇಕು ಇವರ ಸೇವಾನು ಮಾಡಬೇಕು ಸಾಕಾಗಿ ಹೋಗೈತಿ ನನಗೆ ಎಂದು ಸದಾ  ವಟ ವಟ ಮಾಡುತ್ತಲೇ ಇರುತ್ತಿರಲಿಲ್ಲಾ ಆಜುಬಾಜು ಜನರ ಮುಂದೆ ಎಷ್ಟರ ಮಾಡುದರಿ ನಮ್ಮ ಅತ್ತಿ ಸೇವಾ ಮಾಡಿ ಮಾಡಿ ಸುಸ್ತ ಆಗತೈತಿ ನೋಡ್ರೀ ಅಂತಾ ಜೋರ ಜೋರಾಗಿ ಅವರ  ಅತ್ತೆಗೆ ಕೇಳೋ ಹಾಗೆ ಇನ್ನೂ  ಏನೇನೂ ಕೆಟ್ಟ ಶಬ್ದಗಳಿಂದ ಅತ್ತೆಯನ್ನೂ ಹೀಯಾಳಿಸುತ್ತಾ ಒದರಾಡುತ್ತಿದ್ದಳು. ಹೊಟ್ಟೆ ತುಂಬ ಊಟಾನು ಕೊಡುತ್ತಿರಲಿಲ್ಲ. ತುಂಬಾ ಕಷ್ಟದಿಂದ ದುಡಿಮೆ ಮನೆತನವನ್ನು ಒಂದು ಒಳ್ಳೆ ಹಂತಕ್ಕೆ ತಂದು ಹೀಗೆ ಹಾಸಿಗೆ ಹಿಡಿದಾಗ ಸೊಸೆಯಿಂದ ಮೋಸವಾದ ಮಾತುಗಳನ್ನು ಕೇಳುತ್ತಾ  ಒಲ್ಲದ ಮನಸ್ಸಿನಿಂದ ಉಪಚರಿಸಿಕೊಳ್ಳುವ ಪರಿಸ್ಥಿತಿ ಬಂತೆಲ್ಲಾ ಶಾಲುಳ ಅತ್ತೆಯ ಮನಸ್ಸಿಗೆ ತುಂಬಾ ವೇದನೆಯಾಗುತ್ತಿತ್ತು ಅಸಾಹಯಕ ಪರಿಸ್ಥಿತಿಯಿಂದ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದರು.

ಶಾಂತೇಶನ ತಂದೆ ಅನಾರೋಗ್ಯದಿಂದ ನಿತ್ರಾಣರಾಗಿ ಹಾಸಿಗೆಗೆ ಒರಗಿಕೊಂಡೇ ಇರುತ್ತಿದ್ದರು. ಮನೆಯಲ್ಲಿದ್ದ ಶಾಂತೇಶ ಅವನ ಹೆಂಡತಿ ಹಾಗೂ ಮಕ್ಕಳು ತುಂಬಾ ಅಸಡ್ಡೆಯಿಂದ ಅವರನ್ನು ಕಾಣುತ್ತಿದ್ದರು ಯಾರು ಅವರನ್ನು  ಕಾಳಜಿಪೂರ್ವಕವಾಗಿ ನೋಡಿಕೊಳ್ಳುತ್ತಿರಲಿಲ್ಲ ತನ್ನಲ್ಲಿ ಶಕ್ತಿ ಇರುವಾಗ ಮನೆಯ ಒಳಗಿನ ಹೊರಗಿನ ಹಾಗೂ ಮೊಮ್ಮಕ್ಕಳ ಸೇವೆಯನ್ನು ಮಾಡುತ್ತಿರುವಾಗ ಗೌರವದಿಂದ ಕಂಡ ಇವರೆಲ್ಲ ಈಗ ಶಕ್ತಿಕುಂದಿ ಹಾಸಿಗೆಗೆ ಹಿಡಿದಾಗ ಪಶುವಿಗಿಂತ ಕೇಳಾಗಿ ತನ್ನನ್ನು ಕಾಣುತ್ತಿರುವುದನ್ನು ಕಂಡ ಇವರು ಮನುಷ್ಯರೋ ಅಥವಾ ರಾಕ್ಷಸರೋ ಎಂದು ಎಂದು ಅವರಿಗೆ ಅನಿಸುತ್ತಿತ್ತು. ತಾನು ಮಾಡಿದ್ದು ಕಿಂಚೆತ್ತೂ ಅವರಿಗೆ ನೆನಪಾಗುವುದಿಲ್ಲವೇ ಎಂದವರಿಗೆ ಅನಿಸುತ್ತಿತ್ತು. ಒಂದು ತುತ್ತು ಅನ್ನ ನೀಡು ಒಂದು ಹನಿ ನೀರು ಕೊಡುವಾಗ, ಬಂದಿನಿತು, ಔಷಧಿ, ಒಂದುಗುಳಿಗೆ ಕೊಡುವಾಗ ರೇಗುತ್ತಾ ಮೂದಲಿಸುತ್ತಾ ಕೊಡುತ್ತಿದ್ದರೂ ಎಷ್ಟು ಖಚರ್ು ಮಾಡೋದು, ಎಷ್ಟು ಸೇವಾ ಮಾಡೋದು, ಇನ್ನೂ ಎಷ್ಟುದಿನ ಮಾಡೋದು, ದೇವರು ಇವುನ್ನ ಮರತ ಬಿಟ್ಟಾನೇನೂ ಹೀಗೆಲ್ಲಾ ಮನಕ್ಕೆ ಚುಚ್ಚುತ್ತಾ ಮಾತನಾಡುವುದನ್ನು ಕೇಳಿ ಇಳಿ  ವಯಸ್ಸಿನಲ್ಲಿ ಮನ ಒಡೆದು ಚೂರಾಗುತ್ತಿತ್ತು. ಆದರೆ ಏನೂ ಮಾಡಲಾಗದ ಅತಂತ್ರ ಸ್ಥಿತಿಯಲ್ಲಿ ಸುಮ್ಮನಿರುವುದೇ ಅನಿವಾರ್ಯವಾಗುತ್ತಿತ್ತು.

ಇದೇಕೆ ಹೀಗೆ ಅಂತಾ? ಮೈಗೆ ಹುಷಾರಿಲ್ಲದೆ ಮೇಲೆ ಏಳಲಾಗದವರನ್ನು ಒಳ್ಳೆ ರೀತಿಯಿಂದ ಉಪಚರಿಸುವುದು ಕರ್ತವ್ಯ ಅಲ್ಲವೇ? ಹೆಚ್ಚಿಗೆ ಉಪಚಾರ ಮಾಡಲಾಗದಿದ್ದರೂ ಮಾಡಬೇಕಾದ್ದನ್ನು ಒಲವಿನಿಂದ ಹಾಗೂ ಮಾನವೀಯತೆಯಿಂದ ಉಪಚರಿಸಬೇಕಲ್ಲವೇ? ಮಕ್ಕಳು ಹಾಗೂ ಹರೆಯದವರು ನಮ್ಮನ್ನು ಸಲಹಿದವರನ್ನು ಅವರ ಅಶಕ್ತತೆಯಲ್ಲಿ ಅವರನ್ನು ಸಲಹುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದನ್ನು ನಾವು ಯಾವಾಗಲೂ ಕಡೆಗಣಿಸಲಾಗದು. ಒಮ್ಮೆ ಹೋದವರು ಮತ್ತೆ ಬರುವರೆ? ಸೇವೆ ಮಾಡುವ ಅವಕಾಶ ಸಿಗುವುದೇ ಪುಣ್ಯ ಎಂದು ಭಾವಿಸಬೇಕು ಆ ಅವಕಾಶ ಸಿಕ್ಕಾಗ ಅದನ್ನು ನಾವು ಸೇವೆಯನ್ನು ಸರಿಯಾಗಿ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಯಾರಾದರೂ ಸತ್ತಾಗ ಸತ್ತ ಎಮ್ಮೆ ಸೇರು ತುಪ್ಪ ಅಂತ ಸೋಗಲಾಡಿತನ ಮಾಡಿ ಜೋರಾಡಿ ಅಳುತ್ತಾ ಮೊಸಳೆ ಕಣ್ಣೀರು ಸುರಿಸುವುದಕ್ಕಿಂತ ಇದ್ದಾನ ಮನಃಪೂರ್ವಕ ಒಲವಿನಿಂದ ಸೇವೆ ಮಾಡಿ ಅದು ನಿಜವಾಗಿಯೂ ಸ್ತುತ್ಯವಾದ ಕಾರ್ಯ. ಅಂದಾಗ ನಾವೆಲ್ಲ ಬೇಷ್ ಎನಿಸಿಕೊಳ್ಳಬೇಕು ಅರಾಮವಿಲ್ಲದವರ ಆರೈಕೆಯನ್ನು ಅಕ್ಕರೆಯಿಂದ ಮಾಡಿ ಎಂಬುದೇ ನನ್ನ ಹಿರಿಯಾಸೆ.

 

ಸುದ್ದಿ ಓದಿ