ಚರಮೂರ್ತೇಶ್ವರ ಮಠದಲ್ಲಿ ನಡೆದ ದಶ ವರ್ಷಾಚರಣೆಯ ನಾಟ್ಯ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 21: ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಜನಪ್ರೀಯ ಭರತ ನಾಟ್ಯ ಶ್ರೀಮಂತ ಕಲೆಯಾಗಿ ಗುರುತಿಸಿಕೊಂಡ ನೃತ್ಯ, ಮಕ್ಕಳಿಗೆ ಸುಸಂಸ್ಕೃತ ಬದುಕು ಕೊಡುವ ವೈಯಕ್ತಿಕ ಪ್ರತಿಭೆ ಅನಾವರಣಗೊಳಿಸವ ನಮ್ಮ ಸಂಸ್ಕೃತಿಯ ಭಾಗ ಎಂದು ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ, ಚಂದ್ರಪ್ಪ ಸೊಬಟಿ ಹೇಳಿದರು.
ಸುಜನಿ ನಾಟ್ಯ ಶಾಲೆ ದಶವಾರ್ಷಿಕೋತ್ಸವ ಅಂಗವಾಗಿ ಗಂಜಿಗಟ್ಟಿ ಚರಮೂರ್ತೇಶ್ವರ ಮಠದಲ್ಲಿ ನಡೆದ ದಶವರ್ಷಾಚರಣೆಯ ನಾಟ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ.ಬಿ ಯಲಿಗಾರ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ ನಮ್ಮ ದೇಶದ ಸಂಸ್ಕೃತಿಯ ಭಾಗವಾದ ಪ್ರಾಚೀನ ಕಾಲದ ನಳಂದ, ತಕ್ಷಶಿಲೆಯಂತಹ ವಿಶ್ವವಿದ್ಯಾಲಯದ ಸಂಗ್ರಹದ ದಾಖಲೆಗಳು ಪರಕೀಯರ ದಾಳಿಗೆ ಸುಟ್ಟು ನಾಶವಾದವು. ನಮ್ಮಲ್ಲಿ ಪಾರಂಪರಿಕ ಅಲೆಯನ್ನು ಅಳಿಸಲು ಯಾರಿಂದಲೂ ಆಗಿಲ್ಲ. ಅಳಿದಷ್ಟು ಬೆಳೆಯುತ್ತಲೇ ಹೋದ ಕಲೆಯ ಜನಮನ್ನಣೆ ವಿಶ್ವವಿಖ್ಯಾತವಾಗಿದೆ ಗುರುವನ್ನು ಮೀರಿಸುವ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಬೆಳೆದು ಬರಲಿ ಹಾರೈಸಿದರು.
ಜೆ.ಸಿ.ಐ ಅಧ್ಯಕ್ಷ ಡಿ.ಆರ್ ತೋಟಗೇರ ಮಾತನಾಡಿ, ಪ್ರಸಕ್ತ ದಾಸೋಹದಲ್ಲಿ ಜ್ಞಾನದಾಸೋಹ ಅತ್ಯಂತ ಶ್ರೇಷ್ಠವಾದದ್ದು. ಭರತ ನಾಟ್ಯದಲ್ಲಿ ದೇವಿಯ ಅಲಂಕಾರವಿದೆ. ಸೌಂಧರ್ಯವಿದೆ. ಸಂಗೀತದ ಕಲೆಯ ಅಭಿರುಚಿಯಿದೆ. ಶರೀರ ಹಾಗೂ ಮಾನಸಿಕ ಸಮತೋಲನೆಯ ಕಲ್ಪನೆಯಡಿ ಆತ್ಮವನ್ನು ಪರಮಾತ್ಮನಡೆಗೆ ಅಭಿವ್ಯಕ್ತ ಕಾಣುತ್ತದೆ ಎಂದರು.
ವಿದೂಷಿ ಸುನಿತಾ ಜಗನ್ತಾಥ ಪೂಜಾರಿ ಪ್ರಾಸ್ಥಾವಿಕ ಮಾತನಾಡಿ. ನಾಟ್ಯ ತರಬೇತಿ ಶಾಲೆ ಬೆಳೆದು ಹತ್ತು ವಸಂತಗಳನ್ನು ಪೂರೈಸಿದೆ. ಜಿಲ್ಲೆಯ ಹಲವಾರು ರಾಷ್ಟ್ರೀಯ ಹಬ್ಬಗಳಲ್ಲಿ, ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನ ನೀಡಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭೆ ಅನಾವರ್ಣಗೊಳಿ ಪ್ರಶಸ್ತಿ ಪಡೆದಿದ್ದಾರೆ. ಶಿಗ್ಗಾವಿ ಪಟ್ಟಣದ ಮಕ್ಕಳ ಪಾಲಕರು ಹಿರಿಯರು ತರಬೇತಿ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನು ಕಳಿಸಿ ಬಹಳಷ್ಟು ಸಹಕಾರ ನೀಡಿದ್ದು ಸಂತಸ ಹಾಗೂ ತೃಪ್ತಿ ನೀಡಿದೆ ಎಂದರು.
ಗಂಜೀಗಟ್ಟಿ ಚರಮೂರ್ತೇಶ್ವರ ಶ್ರೀಮಠದ ವೈಜನಾಥ ವಲಿಂಗಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದ ವೇದಿಕೆಯಲ್ಲಿ ನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಗೌರವ ಕಾಣಿಕೆ ನೀಡಿ ಗೌರವಿಸಲಾಯಿತು