ಅಡುಗೆ ಅನಿಲ ಬೆಲೆ ಏರಿಕೆ: ಕೇಂದ್ರ ಸರ್ಕಾರದ ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಖಂಡನೆಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ದರ ಏರಿಕೆ ವಿರುದ್ಧ ವೆಲ್ಫೇರ್ ಪಾರ್ಟಿ ಆಕ್ರೋಶ
ಬೆಂಗಳೂರು 10 : ಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ಅನಿಲ ಸಿಲಿಂಡರ್ಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿರುವುದನ್ನ ಸ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರು ವಕೀಲರು ತಾಹಿರ್ ಹುಸೇನ್ ಹೇಳಿದರು.ಈ ಕುರಿತು ಪತ್ರಿಕಾ ಪ್ರಕಟನೆ ನೀಡಿದ ಅವರು, ಗೃಹಬಳಕೆ ಸಿಲಿಂಡರ್ಗಳ ಬೆಲೆಯಲ್ಲಿ ರೂ.60 ರಷ್ಟು ಏರಿಕೆ ಮಾಡಿರುವುದು ಕ್ರೂರ ಕ್ರಮವಾಗಿದ್ದು, ಉಜ್ವಲ ಯೋಜನೆಯ ಬಡ ಫಲಾನುಭವಿಗಳಿಗೂ ಹೊರೆಯಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಬೆಲೆಯಲ್ಲಿ114.50 ರೂ. ರಷ್ಟು ಏರಿಕೆಯಾಗಿದೆ. ಈ ಹೆಚ್ಚಳವು ಅಂತಿಮವಾಗಿ ಗ್ರಾಹಕರ ಮೇಲೆಯೇ ಬಾಧಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚಿನ ಬೆಲೆ ಏರಿಕೆಗಳ ನಡುವೆ ನೈಜ ಆದಾಯ ಕುಗ್ಗುತ್ತಿರುವ ಸ್ಥಿತಿಯಲ್ಲಿ ಮಧ್ಯಮ ವರ್ಗ ಮತ್ತು ಕಾರ್ಮಿಕರು ದುಡಿಯುವ ಜನರ ಮೇಲೆ ಈ ನಿರ್ಧಾರ ಇನ್ನಷ್ಟು ಆರ್ಥಿಕ ಸಂಕಷ್ಟ ಹೊರಿಸಲಿದೆ ಎಂದು ಹೇಳಿದರು.ಪಶ್ಚಿಮ ಏಷ್ಯಾದ ಸಂಘರ್ಷವನ್ನು ಉಲ್ಲೇಖಿಸಿ ಅನಿಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಆದರೆ ಇದು ತನ್ನ ತಪ್ಪನ್ನು ಮುಚಿ ಹಾಕುವ ಪ್ರಯತ್ನ ಮಾತ್ರವಾಗಿದ್ದು, ಅಮೆರಿಕದ ಜಾಗತಿಕ ರಾಜಕೀಯ ಹಿತಾಸಕ್ತಿಗಳಿಗೆ ಸರಕಾರ ಮಣಿದಿರುವುದನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.ಅಡಿಗೆ ಅನಿಲಗಳ ಬೆಲೆಯಲ್ಲಿ ಮಾಡಲಾದ ಈ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ತಾಹಿರ್ ಹುಸೇನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.