ಮಹಲಿಂಗಪುರ

ಸ್ಥಳೀಯ ಆಮ್ ಆದ್ಮಿ ಪಕ್ಷದಿಂದ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಸ್ಥಳೀಯ ಆಮ್ ಆದ್ಮಿ ಪಕ್ಷದಿಂದ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಮಹಾಲಿಂಗಪುರ : ಸ್ಥಳೀಯ ಆಮ್ ಆದ್ಮಿ ಪಕ್ಷವು ಶನಿವಾರ ಮುಂಜಾನೆ ಕಾನಿಪ ಸಂಘದ ಭವನದಲ್ಲಿ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಮಗ್ರ ತೇರದಾಳ ಮತ ಕ್ಷೇತ್ರದ ಅಭಿವೃದ್ಧಿಯ ಗ್ಯಾರಂಟಿ ಕುರಿತಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. 

ಕ್ಷೇತ್ರದ ಆಮ್ ಆದ್ಮಿ ಪಕ್ಷದ ಹುರಿಯಾಳು ಅರ್ಜುನ್ ಹಲಗಿಗೌಡರ್ ಪರವಾಗಿ ಪಕ್ಷದ ಮುಖಂಡರು ಈ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಾಜ್ಯ /ರಾಷ್ಟ್ರದಲ್ಲಿ ಭ್ರಷ್ಟಾಚಾರ ಮತ್ತು ಕೋಮು ಸಂಘರ್ಷ ಹೆಚ್ಚಾಗುತ್ತಿದ್ದು ಇದರ ನಿರ್ಮೂಲನೆಗಾಗಿ ಆಮ್ ಆದ್ಮಿ ಪಕ್ಷವು ಪಣತೊಟ್ಟು ದೆಹಲಿ ಮಾದರಿಯ ಆಡಳಿತ ನೀಡಲು ಅಣಿಯಾಗಿದೆ.ಎಲ್ಲ ಕಡೆಗಳಲ್ಲಿಯೂ ಪಕ್ಷಕ್ಕೆ ಮತದಾತರಿಂದ ಅಭೂತಪೂರ್ವ ಬೆಂಬಲದ ಪ್ರತಿಕ್ರಿಯೆ ಕಂಡುಬರುತ್ತಿದೆ. ಈ ಬಾರಿ ರಾಜ್ಯದಲ್ಲಿ ನೆಮ್ಮದಿಯ ವಾತಾವರಣದ ಹೊಸ ಶಖೆ ಆರಂಭಗೊಳ್ಳಲಿದ್ದು ರಾಜ್ಯ ಹಾಗೂ ಕ್ಷೇತ್ರದ ಜನತೆಯ ಆಶಿರ್ವಾದ ಮುಖ್ಯವಾಗಿದೆ ಎಂದರು. 

ಕ್ಷೇತ್ರದ ಪ್ರಣಾಳಿಕೆ : ಭ್ರಷ್ಟಾಚಾರ ಮತ್ತು ಲಂಚ ಮುಕ್ತ ಪಾರದರ್ಶಕ ಆಡಳಿತ, ಕೃಷಿ, ಹೈನುಗಾರಿಕೆ ಅಭಿವೃದ್ಧಿ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆ, ಕೈಮಗ್ಗ ಮತ್ತು ಪವರ್ಲೊಮ್ ನೇಕಾರರ ಅಭಿವೃದ್ಧಿ, ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸಲಾಗುವುದು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯವಸ್ಥಿತ ಮಾರುಕಟ್ಟೆ ನಿರ್ಮಾಣ, ಸ್ಪರ್ಧಾ ತ್ಮಕ ಪರೀಕ್ಷೆ, ಕರಕುಶಲ ತರಬೇತಿ ಕೇಂದ್ರ ಮತ್ತು ಗುಡಿ ಕೈಗಾರಿಕೆಗಳ ಸ್ಥಾಪನೆ, ಉಚಿತ ಡ್ರೈವಿಂಗ್ ಲೈಸೆನ್ಸ್, ಎಲ್ಲ ರಸ್ತೆಗಳ ಜೀರ್ಣೋದ್ಧಾರ ಕೆಲಸ, ಎಲ್ಲ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಕ್ಷೇತ್ರಾದ್ಯಂತ ರಿಂಗ್ ರಸ್ತೆಗಳ ಕಾಮಗಾರಿ, ಉದ್ಯಾನವನಗಳು, 

ಪತ್ರಿಕಾಗೋಷ್ಠಿಯಲ್ಲಿ ತೇರದಾಳ ಮತ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಬ್ಲಾಕ್ ಅಧ್ಯಕ್ಷ ಡಾ.ಶಂಕರ ಹುಕ್ಕೇರಿ, ನೇಕಾರ ಪ್ರಕೋಷ್ಠದ ಬಾಬು ಜಾಡರ್ ಮತ್ತು ಪದಾಧಿಕಾರಿಗಳಾದ ಮಹಾಂತೇಶ ಹಲಸಪ್ಪಗೋಳ, ಸಂತೋಷ ನಡುವಿನಕೆರೆ, ಬಸವರಾಜ ಭಜಂತ್ರಿ, ಸಂಜು ತೆಗ್ಗಿನಮಠ ಇನ್ನೂ ಹಲವರಿದ್ದರು 

ಸುದ್ದಿ ಓದಿ