ಶಿಗ್ಗಾವ್

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು : ಮಣ್ಣಣ್ಣವರ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು : ಮಣ್ಣಣ್ಣವರ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು : ಮಣ್ಣಣ್ಣವರ

ಶಿಗ್ಗಾವಿ : ಕಳೆದ ಆರು ತಿಂಗಳಿನಿಂದ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಶ್ರಮ ಹಾಗೂ ಟಿಕೆಟ್‌ ಆಕಾಂಕ್ಷಿಗಳ ಒಗ್ಗಟ್ಟು ಈ ಬಾರಿ ಪಕ್ಷಕ್ಕೆ ಗೆಲುವು ತರಲಿದೆ ಎಂದು  ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 

     ಪಟ್ಟಣದ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಸಭೆ ಸೇರಿದ ಪಕ್ಷದ ಪ್ರಮುಖರು ಮತಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿವಾರು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮತದಾನ ಆಗಿರುವ ಬಗ್ಗೆ ಚರ್ಚೆ ಮಾಡಿ ಕಾಂಗ್ರೆಸ್ ಸರ್ಕಾರದ ಐತಿಹಾಸಿಕ ಪಂಚ ಗ್ಯಾರಂಟಿಗಳ ಪ್ರಭಾವ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸೇರಿ ಹಲವಾರು ಮಂತ್ರಿಗಳು ನೂರಾರು ಕೆಪಿಸಿಸಿ ಪ್ರಮುಖರು ಪಕ್ಷದ ಗೆಲುವಿಗೆ ಶ್ರಮಿಸಿದ್ದು ಬಿಜೆಪಿಯವರು ಎಷ್ಟೇ ಹಣ ಹಾಕಿದರು. ಈ ಬಾರಿ ಪಕ್ಷಕ್ಕೆ ಗೆಲುವು ತರಲಿದೆ ಎಂದರು.    ಈ ಸಂದರ್ಭದಲ್ಲಿ ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜೆ ಮುಲ್ಲಾ, ಜಾಫರ್ ಯಡಹಳ್ಳಿ, ಎಲ್ಲಪ್ಪ ಹರಿಜನ, ಶಿವಪ್ಪ ಬಂಡಿವಡ್ಡರ, ಶಂಕರ ಗಂಗಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ