ಮುದ್ದೆಬಿಹಾಲ್

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿ ಎಸ್ ನಾಡಗೌಡ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿ ಎಸ್ ನಾಡಗೌಡ ನಾಮಪತ್ರ ಸಲ್ಲಿಕೆ

ಮುದ್ದೇಬಿಹಾಳ: ಸಧ್ಯ ವಿಧಾನ ಸಭಾ ಚುನಾವಣೆ ಪ್ರಯುಕ್ತ ಮುದ್ದೇಬಿಹಾಳ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಮಾಜಿ ಸಚಿವ ಸಿ ಎಸ್ ನಾಡಗೌಡ (ಅಪ್ಪಾಜಿ)ಅವರು ಸೋಮವಾರ ಆರಾಧ್ಯ ದೇವರಾದ ಅಯ್ಯನಗುಡಿ ಗಂಗಾದರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಲತವಾಡದ  ಕಾಳಿಕಾದೇವಿ  ಹಾಗೂ ಸಜ್ಜಲಗುಡ್ಡ ಶರಣಮ್ಮನವರ ದೇವಸ್ಥಾನಕ್ಕೆ ತೆರಳಿ ದರ್ಶನಾನುಗ್ರಹ ಪಡೆದು ಮುದ್ದೇಬಿಹಾಳ ಪಟ್ಟಣದ ಇಂದಿರಾವೃತ್ತದಿಂದ ಮುಖ್ಯ ಬಜಾರ ಮಾರ್ಗವಾಗಿ  ತೆರೆದ ವಾಹನದ ಮೂಲಕ ಚಲಿಸಿ 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ  ಕುಟುಂಭ ಸಮೇತ  ಬ್ರಹತ್ ಮೆರವಣಿಗೆ ರೋಡ ಶೋ ನಡೆಸುವ ಮೂಲಕ ಹುಡ್ಕೋ ಬಡಾವಣೆಯಲ್ಲಿರುವ ಚುನಾವಣಾ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿ ಚಂದ್ರಕಾಂತ ಪವಾರ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಜನರು ನೆಮ್ಮದಿಯಿಂದ ಜೀವನ ಮಾಡುವಂತಿಲ್ಲ ಪೆಟ್ರೋಲ್ ಹಾಗೂ ಡಿಸೇಲ್ ಧರ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಮಾಡುವ ಮೂಲಕ ಜನ ವಿರೋಧಿ ಸರಕಾರವಾಗಿಬಿಟ್ಟಿದೆ.

ಈ ಇಂತಹ ಜನ ವಿರೋಧಿ ರೈತ ವಿರೋಧಿ ಸರಕಾರವನ್ನು ಕಿತ್ತೋಗೆದು ಬಡವರ, ಸಾಮಾನ್ಯ ಜನರ ದೀನ ದಲಿತರ ಪರವಾದ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಕಾಂಗ್ರೇಸ್ ಸರಕಾರವನ್ನು ಅಧಿಕಾರಕ್ಕೆ ತರಲು ಜನರು ಈ ಗಾಗಲೇ ತೀರ್ಮಾನಿಸಿದ್ದಾರೆ. ಅದರಂತೆ ಮತಕ್ಷೇತ್ರದಲ್ಲಿನ  ಬಿಜೆಪಿ ಶಾಸಕರ ದುರಾಡಳಿ ಹಾಗೂ ಬ್ರಷ್ಟಾಚಾರಕ್ಕೆ ಈ ಭಾಗದ ಜನರು ತತ್ತರಿಸಿಹೊಗಿದ್ದಾರೆ ಹಾಗಾಗಿ ಮತಕ್ಷೇತ್ರದಲ್ಲಿನ ಜನರು  ಶಾಂತಿ ನೆಮ್ಮದಿಯಿಂದರಲು ಹಾಗೂ ಬ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಆಶಿರ್ವಾ ದ ಮಾಡಬೇಕು ಎಂದರು.

ಸಧ್ಯ ನಾಮಪತ್ರ ಸಲ್ಲಿಸುವ ವೇಳೆ ಸೇರಿದ ಜನರನ್ನು ನೋಡಿದರೇ ಹಿಂದೇಂದು ಇಷ್ಟೋಂದು ಜನ ಬಾಗವಹಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಉಹೇಗೂ ಮೀರಿ ಈ ಬಾರಿ ಸುಮಾರು 25 ಸಾವಿರಕ್ಕಿಂತ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಹಿರಿಯ ಮುಖಂಡರು ಸ್ವಯಂ ಪ್ರೇರಿತವಾಗಿ ನಾಮಪತ್ರ ಸಲ್ಲಿಕೆಯಲ್ಲಿ ಬಾಗವಹಿಸಿದ್ದಾರೆ ಅವರೆಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ ಮಾತ್ರವಲ್ಲದೇ ಕಾರ್ಯಕರ್ತರು. ಮುಖಂಡರು ತಮ್ಮ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ವಾಡರ್ುಗಳಲ್ಲಿ ಪ್ರಸ್ತುತ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ಬಗ್ಗೆ ಹಾಗೂ ಈ ಹಿಂದೆ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳ ಹಾಗೂ ಸಾಧನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದರು. 

ಈ ವೇಳೆ ಸಿ ಎಸ್ ನಾಡಗೌಡ ಅವರ ಧರ್ಮಪತ್ನಿ ಸುವಣರ್ಾ ನಾಡಗೌಡ, ಪುತ್ರಿ ಪಲ್ಲವಿ ನಾಡಗೌಡ, ಅಳಿಯ ಆದಿತ್ಯ ಶೆಟ್ಟಿ, ಹಿರಿಯ ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಕೆ ಬಿರಾದಾರ, ಹಿರಿಯ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಎಂ ಬಿ ನಾವದಗಿ, ಶಾಂತಗೌಡ ಪಾಟೀಲ(ನಡಹಳ್ಳಿ) ರಾಯನಗೌಡ ತಾತರಡ್ಡಿ, ಗೋವಾ ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದಣ್ಣ ಮೇಟಿ, ಬಾಲಾಜಿ ಶುಗರ್ಸ್ ಎಂ ಡಿ ವೆಂಕಟೇಶಗೌಡ ಪಾಟೀಲ, ನಿವೃತ್ತ ಡಿವೈಎಸ್ಪಿ ಎಸ್ ಎಸ್ ಹುಲ್ಲೂರ, ಅಸ್ಕಿ ಪೌಂಡೇಷನ್ ಅಧ್ಯಕ್ಷ ಸಿ ಬಿ ಅಸ್ಕಿ,  ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗಫೂರಸಾಬ ಮಕಾಂದಾರ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ವೀರಶೈವ ಲಿಂಗಾಯತ್ ಸಮಾಜದ ಅಧ್ಯಕ್ಷ ಪ್ರಭುರಾಜು ಕಲಬುರ್ಗಿ , ಸುಧೀರ ನಾವದಗಿ, ಗಣ್ಯ ಉದ್ಯಮಿ ಶರಣು ಸಜ್ಜನ, ಸಂಗು ಬಿರಾದಾರ, ಮಲ್ಲಿಕಾರ್ಜುನ ನಾಡಗೌಡ, ಕಾಮರಾಜ ಬಿರಾದಾರ, ಪಿಂಟು ಸಾಲಿಮನಿ, ಶ್ರೀಕಾಂತ ಚಲವಾದಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪ್ರಶಾಂತ ಕಾಳೇ, ಪುರಸಭೆ ಅಧ್ಯಕ್ಷೇ ಪ್ರತಿಭಾ ಅಂಗಡಗೇರಿ, ಮಹಾಂತೇಶ ಬೂದಿಹಾಳಮಠ,  ತಾಲೂಕಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೇ ಶೋಭಾ ಶಳ್ಳಗಿ ಸೇರಿದಂತೆ ಹಲವರು ಇದ್ದರು 

ಸುದ್ದಿ ಓದಿ