ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 02: ಕನ್ನಡ ಕಲೆ, ಸಾಹಿತ್ಯ ಸಂಸ್ಕೃತಿ ಮೌಲ್ಯ ಹೆಚ್ಚಿಸಿ ಬೆಳಸಿದ ಸಂತ ಕನಕದಾಸರು, ಸರ್ವಜ್ಞ, ಶರೀಫ ಶಿವಯೋಗಿಗಳು ಹಾಗೂ ಸುಧಾಮೂರ್ತಿ ಯಂತಹ ಸಾಧಕರನ್ನು ಸಮರ್ಥವಾಗಿ ಬೆಳಸಿದ ಕನ್ನಡ ನಾಡು ಪುಣ್ಯ ಭೂಮಿ ಎಂದು ಡಾವಣಗೆರೆ ಕಲಾಕುಂಜ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶಣೈ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್.ಬಿ.ಬಿ.ಎಂ.ಡಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣ ಪ್ರಮಾಣದ ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಂಕಪಟ್ಟಿ ಮಾನದಂಡವಲ್ಲ. ನಮ್ಮಲ್ಲಿ ನಮ್ಮ ನಾಡಿನ ಕಲೆ ಸಾಹಿತ್ಯ. ಪರಂಪರೆ ನಮ್ಮ ಶಿಕ್ಷಣದಲ್ಲಿ ಬರಬೇಕು. ಸಂಸ್ಥೆ ಸ್ಥಾಪನೆ ಮಾಡಿ ಕನ್ನಡ ಕೌಸ್ತುಭ ಹಾಗೂ ರಾಜ್ಯಮಟ್ಟದಲ್ಲಿ ಸರಸ್ವತಿ ಪುರಸ್ಕಾರ ಗೌರವ ನೀಡಲಾಗುತ್ತಿದೆ. ಇದುವರೇಗೂ 36 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕೃರಿಸಲಾಗಿದೆ. ಸರ್ಕಾರ ದ ಅನುದಾನಕ್ಕೆ ಕೈಯೊಡ್ಡದೇ ದುಡಿಮೆಯ ಬಂಡವಾಳದಲ್ಲಿ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸುವರನ್ನು ಗೌರವಿಸಿದ್ದೇವೆ. ನೆರೆಯ ಕೇರಳದಲ್ಲೂ ್ಲ ಕನ್ನಡ ಶಿಕ್ಷಣ ಭಾಷೆಯ ಕಂಪು ಕಂಡಿದ್ದು ಅಲ್ಲಿಯೂ ಸಂಸ್ಥೆ ಮೂಲಕ ವಿದ್ಯಾರ್ಥಿಗಳನ್ನು ಪುರಸ್ಕೃರಿಸಲಾಗಿದೆ ಎಂದರು. ಬಯಲಾಟ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಕ್ರೀಡೆಗಳು, ಆಕರ್ಷಕ ದೇಶೀಯ ವೇಷಭೂಷಣಗಳು. ನಮ್ಮ ನಾಡಿನ ಮಹಿಳೆಯರ ಸಂಸ್ಕೃತಿ ಪ್ರದರ್ಶನ ಹೀಗೆ ಹೀಗೆ ಹಲವಾರು ಆಯಾಮಗಳಲ್ಲಿ ಸಂಸ್ಥೆ ಕೆಲಸ ನಿರ್ವಹಿಸಿ ಮಾನವೀಯ ಮೌಲ್ಯ ಬೆಳಸಿದೆ ಆದರೇ ನಮಗೆ ಯವೂದೇ ಜಾತಿಬಂಧನವಿಲ್ಲ ಎಂದರು.
ಪ್ರಾಚಾರ್ಯ ಆರ್.ಎಸ್. ಭಟ್ಟ್ ಮಾತನಾಡಿ, ಸಂಸ್ಥೆಯಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆಪ್ರತಿಭಾಪುರಸ್ಕಾರ ದೊರೆತಿದೆ. ಕಾರ್ಯಕ್ರಮ ಆಕರ್ಶಕ ಮತ್ತು ಮಕ್ಕಳಲ್ಲಿ ಸ್ಫೂರ್ತಿದಾಯಕವೂ ಆಗಿದೆ. ಉತ್ತಮ ಶಿಕ್ಷಕರಿಂದ ಮಕ್ಕಳಿಗೆ ಪರಿಕ್ಷಾ ಪೂರ್ವ ತರಬೇತಿ ಮಾರ್ಗದರ್ಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಿವೃತ್ತ ಪ್ರಾಚಾರ್ಯ ಜಿ.ಎನ್. ಯಲಿಗಾರ ಮಾತನಾಡಿ, ಮಕ್ಕಳು ಪ್ರತಿಬಾನ್ವಿತರಾಗಿ ಶಾಲೆ ಶಿಕ್ಷಕರು ಹಾಗೂ ಪಾಲಕರಿಗೆ ಕೀರ್ತಿ ತರಬೇಕೆಂದರು. ತಾಲೂಕು ಶಿಕ್ಷಣ ಸಮೀತಿ ಅಧ್ಯಕ್ಷ ಎನ್.ಆರ್. ಮಾಮ್ಲೇದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಶಿಕ್ಷಣ ಸಮಿತಿ ಉಪಾಧ್ಯಕ್ಷ ದತ್ತಣ್ಣ ವೆರ್ಣೇಕರ, ಕಾರ್ಯದರ್ಶಿ ಎಸ್.ಪಿ ಜೋಶಿ, ಕಲಾಕುಂಜ ಸಂಸ್ಥೆಯ ಮಹಿಳಾವಿಭಾಗದ ಅಧ್ಯಕ್ಷಣಿ ಜೋತಿ ಗಣೇಶ ಶಣ್ಯೈ ಉಪಪ್ರಾಚಾರ್ಯ ಕ.ೆಬಿ. ಚನ್ನಪ್ಪ ವೇದಿಕೆಯಲ್ಲಿದ್ದರು. ಶಿಕ್ಷಕಿ ಗೀತಾ ಮಾದರ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು