ಮಹಲಿಂಗಪುರ

ಚಿಮ್ಮಡ; ಸಂಭ್ರಮದ ಗಣೇಶೊತ್ಸವ: ಗ್ರಾಮಸ್ಥರಿಗೆ ಮುಂಬೈ ಮಾದೇಲಿ ಪ್ರಸಾದ

ಚಿಮ್ಮಡ; ಸಂಭ್ರಮದ ಗಣೇಶೊತ್ಸವ: ಗ್ರಾಮಸ್ಥರಿಗೆ ಮುಂಬೈ ಮಾದೇಲಿ ಪ್ರಸಾದ

ಚಿಮ್ಮಡ; ಸಂಭ್ರಮದ ಗಣೇಶೊತ್ಸವ: ಗ್ರಾಮಸ್ಥರಿಗೆ ಮುಂಬೈ ಮಾದೇಲಿ ಪ್ರಸಾದ 


ಮಹಾಲಿಂಗಪುರ 29: ಚಿಮ್ಮಡ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ಯ ವಿಘ್ಣ ನಿವಾರಕ ಗಣಪತಿ ಮೂರ್ತಿ ಪ್ರತಿಸ್ಠಾಪನೆ ಗ್ರಾಮದ ಹಲವು ಪ್ರಮುಖ ಸ್ಥಳಗಳಲ್ಲಿ ಬುಧವಾರವಿಜ್ರಂಭನೆಯಿಂದ ನಡೆಯಿತು. 

ಸ್ಥಳೀಯ ಬಾವುಸಾಹೇಬ ಮಠ, ಗಣಪತಿ ಮಂದಿರ, ಬನಶಂಕರಿ ದೇವಸ್ಥಾನ, ಜೈ ಹಣುಮಾನ ಗರಡಿಮನೆ, ಹನುಮಾನ ಮಂದಿರದ ಹತ್ತಿರ, ನೇತಾಜಿ ಸುಭಾಸ್ಚಂದ್ರ ಬೋಸ್ ಸರ್ಕಲ್ ಹತ್ತಿರ, ಬಳಗಾರ ಕ್ರಾಸ್ ಹತ್ತಿರದ ಸೀಮಿಲಕ್ಕವ್ವ ದೇವಿ ಮಂದಿರದ ಆವರಣ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ರದರ್ಶನಕ್ಕಾಗಿ ಬ್ರಹತ್ ಗಣೇಶ ಮೂರ್ತಿಗಳನ್ನು ಹಾಗು ವಿಸರ್ಜನೆಗಾಗಿ ಚಿಕ್ಕ ಮಣ್ಣಿನ ಪ್ರತಿಮೆಗಳನ್ನು ಜಾಂಝ ಪಥಕ, ಡೊಳ್ಳಿನ ಮೇಳಸೇರಿದಂತೆ ವಿವಿಧ ವಾದ್ಯವೃಂದಗಳೊಂದಿಗೆ ಮೆರವಣಿಗೆ ಮೂಲಕ ತಂದು ಪ್ರತಿಸ್ಠಾಪಿಸಲಾಯಿತು. ವಿನಾಯಕ ಗೆಳೆಯರಬಳಗದ ಯುವ ಕಾರ್ಯಕರ್ತರು ಪಟಾಕಿ ಸಿಡಿಸುವ, ಗುಲಾಲು ಎರಚುವ ಮೂಲಕ ಸಂಭ್ರಮಿಸಿದರು. 

ಮುಂಬೈ ಮಾದೇಲಿ ಪ್ರಸಾದ; ಗಣೇಶೋತ್ಸವದ ಎರಡನೇಯ ದಿನವಾದ ಗುರುವಾರ ಗ್ರಾಮದ ಬಾವುಸಾಹೇಬ ಮಠದ ಗಣೇಶೋತ್ಸವ ಸಮೀತಿಯಿಂದ ಗ್ರಾಮಸ್ಥರಿಗೆ ಮುಂಬೈ ಮಾದೇಲಿ ಪ್ರಸಾದ ಸೇವೆ ಹಮ್ಮಿಕೊಳ್ಳಲಾಗಿತ್ತು. ಸುಮಾರು ಎರಡು ಕಿಂಟಾಲ್ ಮೂವತ್ತು ಕಿಲೋ ಮಾದೇಲಿ ಹಾಗೂ ಒಂದು ಕ್ವಿಂಟಾಲ್ ಇಪ್ಪತ್ತು ಕಿಲೋ ಮಸಾಲೆ ಅನ್ನ ಸಾಂಬಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಎಲ್ಲ ಸಮಾಜ ಬಾಂಧವರು ಮುಂಬೈ ಮಾದೇಲಿ ಪ್ರಸಾದ ಸವಿದು ಪುನಿತರಾದರು. ಇನ್ನುಳಿದಂತೆ ಗಣಪತಿ ಗುಡಿ, ಹಣುಮಾನ ಮಂದಿರದ ಗಜಾನನ ಸಮೀತಿಯಿಂದ ಹಾಗೂ ಗ್ರಾಮದ ಪ್ರತಿಯೊಂದು ಗಣೇಶ ಉತ್ಸವ ಸಮೀತಿಗಳು ಪ್ರತಿದಿನ ಪ್ರಸಾದ ಸೇವೆ ಕೈಗೊಂಡು ಭಕ್ತರಿಗೆ ಉಣಬಡಿಸುವ ಮೂಲಕ ಭಕ್ತಿಭಾವ ಮೆರೆದರು.  

ಸ್ಥಳೀಯ ಬಾವುಸಾಹೇಬ ಮಠದ ಗಣೇಶೋತ್ಸವ ಸಮೀತಿಯ ಅಧ್ಯಕ್ಷ ಗಿರಮಲ್ಲಪ್ಪ ಹಟ್ಟಿ, ಉಪಾಧ್ಯಕ್ಷ ಬಸವರಾಜ ವಿಜಾಪೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರ​‍್ಪ ಪಾಲಭಾವಿ, ಬೀರ​‍್ಪ ಹಳೆಮನಿ, ಬಸವರಾಜ ಕುಂಚನೂರ, ವಸಂತ ಕರಡಿ, ಗ್ರಾ.ಪಂ. ಸದಸ್ಯ ಮನೋಜ ಹಟ್ಟಿ, ಸಂಜಯ ಯಂಕಾಚಿ, ಚನಮಲ್ಲಪ್ಪ ವಿಜಾಪೂರ, ಗಿರಮಲ್ಲಪ್ಪ ಕರಡಿ, ಸುರೇಶ ಅಥಣಿ, ಮಹಾಂತೇಶ ಧಡೂತಿ, ಅಮ್ಜದಖಾನ ಜಮಖಂಡಿ, ಪ್ರವೀನ ಮೈತ್ರಿ, ವಿಜಯ ಯಂಕಂಚಿ, ಶಂಕರ ಬಿಳ್ಳೂರ, ಮಹಾದೇವ ಮಗಳಖೋಡ ಹಾಗೂ ರುದ್ರ​‍್ಪ ಚಿಚಡಿ ಸೇರಿದಂತೆ ಹಲವಾರು ಜನ ಪ್ರಮುಖರು ಪ್ರಸಾದ ಸೇವೆಯ ಉಸ್ತುವಾರಿಗಳಾಗಿದ್ದರು. 


ಸುದ್ದಿ ಓದಿ