ಮಹಲಿಂಗಪುರ

ದಶಾವತಾರ ವೇಷ ಧರಿಸಿ ವೈಕುಂಠವನ್ನೇ ಧರೆಗಿಳಿಸಿದ ಮಕ್ಕಳು.

ದಶಾವತಾರ ವೇಷ ಧರಿಸಿ ವೈಕುಂಠವನ್ನೇ ಧರೆಗಿಳಿಸಿದ ಮಕ್ಕಳು.

ಮಹಾಲಿಂಗಪುರ: ಸ್ಥಳೀಯ ಜೆಸಿ ಶಾಲೆಯ ಮಕ್ಕಳು ಕೃಷ್ಣನ ದಶಾವತಾರ ವೇಷ ಧರಿಸಿ ಗಮನ ಸೆಳೆದರು. ಲಕ್ಷ್ಮೀನಾರಾಯಣನಾಗಿ ಚಿರಾಗ ಮಂಟೂರ ಮತ್ತು ಸಾನ್ವಿ ಕುಳ್ಳೊಳ್ಳಿ, ವರಾಹನಾಗಿ ಖುಷಿ ಜಕಾತಿಮಠ, ನರಸಿಂಹನಾಗಿವ ವೈಷ್ಣವಿ ಚನ್ನಿ, ಪರಶುರಾಮನಾಗಿ ಆರ್ಯನ್ ಹಟ್ಟಿ, ಬಲರಾಮನಾಗಿ ಸಾಯಿರಾಮ ಬಡಿಗೇರ, ವಾಮನನಾಗಿ ಪ್ರಜ್ವಲ ಹುದ್ದಾರ, ಮತ್ಸ್ಯ ವೇಷದಲ್ಲಿ ಮೆಹಕ್ ಬಿಸ್ತಿ, ಕೂರ್ಮನಾಗಿ ದಾನೇಶ ಕಾಲತಿಪ್ಪಿ, ರಾಮ ಸೀತೆಯರಾಗಿ ಸಾತ್ವಿಕ ಯರಗಟ್ಟಿಕರ ಮತ್ತು ಆರಾಧ್ಯ ಹೂಗಾರ, ಕಲ್ಕಿಯಾಗಿ ಅತೀಶ್ ಹುಣಶ್ಯಾಳ ವೇಷ ಧರಿಸಿ ಗಮನ ಸೆಳೆದರು. ಶಿಕ್ಷಕರಾದ ಪ್ರೀತಿ ಕಲ್ಯಾಣಿ, ಬಾನು ಕೆ.ಎಂ. ತೃಪ್ತಿ ಕುಳ್ಳೊಳ್ಳಿ, ಲಕ್ಷ್ಮಿ ಬಿದರಿ ಮಾರ್ಗದರ್ಶನ ಮಾಡಿದ್ದರು. 

****ನಮ್ಮ ಶಾಲೆಯ ಮುದ್ದು ಮಕ್ಕಳು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೈಕುಂಠವನ್ನೇ ಧರೆಗಿಳಿಸಿ ನಮ್ಮನ್ನು ಪಾವನಗೊಳಿಸಿದ್ದಾರೆ ಮುದ್ದು ಮಕ್ಕಳಿಗೆ ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಗುರುಮಾತೆಯರಿಗೆ ಕೃತಜ್ಞತೆಗಳು

- ಶಿವಾನಂದ ತಿಪ್ಪಾ,

ಸಂಸ್ಥೆಯ ಉಪಾಧ್ಯಕ್ಷ 

ಸುದ್ದಿ ಓದಿ