ಇಂಡಿ ತಾಲೂಕಿನಾದ್ಯಂತ ಸಂಭ್ರಮದಿಂದ ಚನ್ನಮ್ಮ ಜಯಂತಿ ಆಚರಣೆ
ಇಂಡಿ ತಾಲೂಕಿನಾದ್ಯಂತ ಸಂಭ್ರಮದಿಂದ ಚನ್ನಮ್ಮ ಜಯಂತಿ ಆಚರಣೆ
ಇಂಡಿ 23: ತಾಲೂಕಿನಾದ್ಯಂತ ಪ್ರಥಮ ಸ್ವಾತಂತ್ರ್ಯ ಹೋರಾಟಗಾರತಿ, ಕಿತ್ತೂರು ರಾಣಿ ಚೆನ್ನಮ್ಮ ನವರ 200 ನೇ ವಿಜಯೋತ್ಸವ ಹಾಗೂ 246 ನೇ ಜಯಂತಿ ಉತ್ಸವವನ್ನು ಇಂಡಿ ತಾಲೂಕಿನ ಎಲ್ಲೆಡೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇಂಡಿ ಮಿನಿ ವಿಧಾನಸೌಧ ಆವರಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಮೊಟ್ಟ ಮೊದಲ ಸೋಲಿನ ರುಚಿ ತೋರಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರಂತಾ ಮಹನಿಯರ ಚರಿತ್ರೆಗಳನ್ನು ಓದಿ ತಿಳಿದುಕೊಂಡು ಇಂದಿನ ಯುವಕರು ದೇಶ ಅಭಿಮಾನ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಇಂಡಿ ತಶೀಲದಾರ ಎಸ್ ಬಿ ಕಡಕಬಾವಿ, ಶಿರಸ್ತೇದಾರ್ ಎಚ್ ಎಚ್ ಮುಜಗೊಂಡ, ಬಸವರಾಜ ರಾವೂರ, ಕಂದಾಯ ನೀರೀಕ್ಷಕರಾದ ಎಚ್ ಎಚ್ ಗುನ್ನಾಪೂರ, ಇಂಡಿ ತಾಲೂಕು ಪಂಚಾಯಿತಿ ಮ್ಯಾನೇಜರ್ ಮುರುಗೇಶ್ ನಾರಾಯಪೂರ, ಹಾಗೂ ಇಂಡಿ ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷರಾದ ವಿ ಎಚ್ ಬಿರಾದಾರ, ಹಾಗೂ ಸಮಾಜದ ಯುವಕರು, ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಹಾಗೂ ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೂಡಾ ವೀರರಾಣಿ ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ, ಅವರು ಪೂಜೆ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಇಂಡಿ ತಾಲೂಕಿನ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ, ಇಲಾಖೆ ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಹಾಗೂ ಶಾಲೆ ಕಾಲೇಜು ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಆಚರಣೆ ಮಾಡಲಾಯಿತು.