ಮಾನಸಿಕ ಆತ್ಮಸ್ಥೈರ್ಯ ತುಂಬುವ ಕೇಂದ್ರಗಳೇ ದೇವಸ್ಥಾನಗಳು : ಸಿದ್ದುಗೌಡ ಪಾಟೀಲ
ಮಹಾಲಿಂಗಪುರ: ಸಮೀಪದ ರನ್ನ ಬೇಳಗಳಿಯ ಸದಾಶಿವ ನಗರದಲ್ಲಿರುವ ತುಗಲಿ ಲಕ್ಕಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಂಘ ರನ್ನ ಬೆಳಗಲಿಯ ಆಶ್ರಯದಲ್ಲಿ ಶ್ರೀ ತುಗಲಿ ಲಕ್ಕಮ್ಮದೇವಿ ದೇವಸ್ಥಾನದ ಗೋಪುರ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭ ಜರಗಿತು.
ಅರುಣ ಗೋವಿಂದ ಕಾರಜೋಳ ಭಾಜಪಾ ಯುವ ಮುಖಂಡರು ಮುಧೋಳ ರವರು ಗೋಪುರವನ್ನು ಉದ್ಘಾಟಿಸಿದರು.
ಸಿದ್ದುಗೌಡ ಪಾಟೀಲ ಪಪಂಸದಸ್ಯರು, ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಭಾರತೀಯರಿಗೆ ದೇವಸ್ಥಾನಗಳು ಶ್ರದ್ಧಾ ಕೇಂದ್ರಗಳಾಗಿವೆ.ಮಾನಸಿಕ ಆತ್ಮಸ್ಥೈರ್ಯ ತುಂಬುವ ಕೇಂದ್ರಗಳೇ ದೇವಸ್ಥಾನಗಳು.ಪ್ರತಿನಿತ್ಯ ದೇವಸ್ಥಾನಕ್ಕೆ ಭೇಟಿಕೊಟ್ಟು ಶ್ರೀ ದೇವಿಯ ದರ್ಶನ ಪಡೆದು ನಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಿದರೆ ಏನೋ ಒಂದು ದೈವಿಶಕ್ತಿ ನಮಗೆ ಹೊಸ ಚೈತನ್ಯ ಮತ್ತು ಶಕ್ತಿಯನ್ನು ತುಂಬುತ್ತದೆ. ಹಿಂದುಗಳಾದ ನಾವು ಪ್ರತಿಯೊಂದರಲ್ಲಿ ದೈವತ್ವವನ್ನು ಕಂಡುಕೊಳ್ಳುತ್ತೇವೆ.
ಆ ನಂಬಿಕೆ ಮೇಲೆ ಜೀವನವನ್ನು ಸಾರ್ಥಕ ಗೊಳಿಸಿ ವಿಶ್ವಕ್ಕೆ ಗುರುವಾಗುತ್ತಿದ್ದೇವೆ. ಆದ್ದರಿಂದ ದೇವಸ್ಥಾನದ ಪವಿತ್ರತೆ ಜೊತೆಗೆ ದೇವಿಯ ಪೂಜಾ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುವಂತಾಗಲಿ ಎಂದು ತಿಳಿಸುವುದರೊಂದಿಗೆ ಕೇವಲ ಎರಡು ವರ್ಷಗಳ ಅವಧಿ ಒಳಗೆ ಇಂತ ಒಂದು ಭವ್ಯವಾದ ಮಂದಿರವನ್ನು ಕಟ್ಟಿ ನಿಮರ್ಾಣ ಮಾಡಿದ ಶ್ರೀ ತುಗಲಿ ಲಕ್ಕಮ್ಮದೇವಿ ದೇವಸ್ಥಾನ ಜೀಣರ್ೋದ್ಧಾರ ಸಂಘದವರಿಗೆ ಅನಂತ ಅಭಿನಂದನೆಗಳು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪರಮಾನಂದ ಶಂಕ್ರಟ್ಟಿ , ಶಿವಲಿಂಗಪ್ಪ ಖಾನಟ್ಟಿ, ಚಿಕ್ಕಪ್ಪ ನಾಯಕ, ಶಿವನಗೌಡ ಪಾಟೀಲ, ಪಂಡಿತ ಪೂಜಾರಿ, ಅಶೋಕ ಸಿದ್ದಾಪುರ, ಮಹಾಲಿಂಗ ಪುರಾಣಿಕ, ಮುತ್ತಪ್ಪ ಚಿಕ್ಕಣ್ಣವರ, ಮುತ್ತಪ್ಪ ಸಿದ್ದಾಪುರ, ಮುತ್ತಪ್ಪ ಹೊಸೂರ, ರಾಮನಗೌಡ ಪಾಟೀಲ, ಯಮನಪ್ಪ ಚಂದಪ್ಪನವರ, ಗಂಗಪ್ಪ ಗುಡ್ಲಾರ, ರುದ್ರಪ್ಪ ಅಡವಿ, ಶ್ರೀಕಾಂತ ಗುಜ್ಜನ್ನವರ, ಪ್ರಕಾಶ ಚಿತ್ತರಗಿ, ಶ್ರೀಶೈಲ ಹೊಸಮನಿ, ಮಹೇಶ ಗುರವ ಉಪಸ್ಥಿತರಿದ್ದರು. ರಾಘವೇಂದ್ರ ನೀಲನ್ನವರ ಕಜಾಪ ಅಧ್ಯಕ್ಷರು ಕಾರ್ಯಕ್ರಮವನ್ನು ವಂದಿಸಿ ನಿರೂಪಿಸಿದರು