ಮುದ್ದೆಬಿಹಾಲ್

ಶುಲ್ಕ ವಸೂಲಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿ

ಶುಲ್ಕ ವಸೂಲಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿ


ಶುಲ್ಕ ವಸೂಲಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿ 

ಮುದ್ದೇಬಿಹಾಳ 23: ಯಾವೂದೇ ಒಂದು ನೈಯಾಪೈಸೆ ಪಡೆದುಕೊಳ್ಳದೇ ಪಡಿತರ ವಿತರಿಸಬೇಕೆಂದು ಸರಕಾರ ಆದೇಶವಿದ್ದರೂ ಪಟ್ಟಣದಲ್ಲಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿಯೊಬ್ಬರಿಗೂ 10 ರೂ. ಶುಲ್ಕ ಪಡೆದು ಪಡಿತರ ಧಾನ್ಯ ವಿತರಿಸುತ್ತಿದ್ದಾರೆ. ಕಾರಣ ಸರಕಾರದ ಆದೇಶವನ್ನು ಉಲ್ಲಂಘಿಸಿ ಹಣ ಪಡೆಯತ್ತಿರುವ ಇಂತಹ ನ್ಯಾಯಬೆಲೆೆ ಅಂಗಡಿಗಳನ್ನು ರದ್ದುಗೊಳಿಸಬೇಕು ಎಲ್ಲೇ ಆಗಲಿ ಯಾವೂದೇ ಹಣ ಪಡೆಯದೇ ಪಡಿತರ ವಿತರಿಸಬೇಕು ಎಂದು ಸರಕಾರದ ಗ್ರಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಹುಸೇನಬಾಷಾ ಸಾಲಿಮನಿ(ಪಿಂಟೂ) ತಹಶೀಲ್ದಾರವರಿಗೆ ಒತ್ತಾಯಿಸಿದ್ದಾರೆ.  

ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಅನ್ನಭಾಗ್ಯ ಸೇರಿದಂತೆ ಐದು ಪಂಚಗ್ಯಾರಂಟಿಗಳನ್ನು ನೀಡುವ ಮೂಲಕ ಉತ್ತಮ ಜನಪರ ಬಡವರ ಪರವಾದ ಆಡಳಿತ ನಡೆಸುತ್ತಿದೆ. ಅಂತ್ಯೋದಯಕ್ಕೆ ಪಡಿತರ ಹೊಂದಿದ ಕುಟುಂಬದ ಪ್ರತಿಯೊಬ್ಬರಿಗೂ 14 ಕಿಲೋ ಜೋಳ, 21 ಕಿಲೋ ಅಕ್ಕಿ,  ಪಿಎಲ್ ಕಾರ್ಡ ಹೊಂದಿದ ಕುಟುಂಬಗಳಿಗೆ ಪ್ರತಿಯೊಬ್ಬರಿಗೆ 3 ಕಿಲೋ ಅಕ್ಕಿ 2 ಕಿಲೋ ಜೋಳ, ಪಡಿತರ ಧಾನ್ಯ ನೀಡುವ ಮೂಲಕ ಬಡವರ ಹೊಟ್ಟೆ ತುಂಬಿಸುತ್ತಿದೆ. 

ಆದರೇ ಸರಕಾರಕ್ಕೆ ಮುಜುಗರಕ್ಕೀಡಾಗುವಂತೆ ಮಾಡುವುದಲ್ಲದೇ ಸರಕಾರದ ಹೆಸರಿಗೆ ಮಸಿ ಬಳಿಯಲು ಕುತಂತ್ರ ಮಾಡುತ್ತಿರುವ ಕೆಲ ನ್ಯಾಯಬೆಲೆ ಅಂಗಡಿ ಮಾಲಿಕರು ಪ್ರತಿಯೊಂದು ಪಡಿತರ ಕಾರ್ಡಗೆ 10 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾ ಮತ್ತು ಆಹಾರ ನೀರೀಕ್ಷಕ ಅಧಿಕಾರಿಗಳು ಮತಕ್ಷೇತ್ರದ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಣ ಪಡೆಯುತ್ತಿರುವುದು ಕಂಡುಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಯನ್ನು ರದ್ದು ಗೊಳಿಸುವುದಲ್ಲಿ ಮಾಲಿಕರ ಮೇಲೆ ಕಾನೂನು ರಿತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ