ಬ್ಯಾಡ್ಗಿ

ಬ್ಯಾಡಗಿ ಬೈಕ್ ಕಳ್ಳನ ಬಂಧನ

ಬ್ಯಾಡಗಿ  ಬೈಕ್ ಕಳ್ಳನ ಬಂಧನ


ಬ್ಯಾಡಗಿ 21:  ಬ್ಯಾಡಗಿ ಪಟ್ಟಣದ ಪೋಲಿಸರು ಬೈಕ್ ಕಳ್ಳನೊಬ್ಬನನ್ನು ಬಂಧಿಸಿ ಐದು ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದ ಬಸವರಾಜ ತಂದೆ ವಯಾಗಪ್ಪ ಬಾವಳ್ಳಿಯವರ ಎಂಬಾತನನ್ನು ಬಂಧಿತ ಆರೋಪಿ ಈತನಿಂದ ಐದು ಬೈಕ್ ವಶ ಪಡಿಸಲಾಗಿದೆ. ಪಟ್ಟಣದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸೆ.5 ರಂದು ಒಂದು ಮೋಟಾರ್ ಸೈಕಲ್ ಕಳ್ಳತನವಾಗಿತ್ತು. ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗಾಗಿ ಪೋಲಿಸ್ ಅಧೀಕ್ಷಕಿ ಯಶೋಧ ವಂಟಗೋಡಿ, ಹೆಚ್ಚುವರಿ ಅಧೀಕ್ಷಕ ಲಕ್ಷ್ಮಣ್ ಶಿರಕೋಳ, ಡಿಎಸ್ಪಿ ಗಿರಿಮಲ್ಲ ತಳಕಟ್ಟಿ, ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಬಿ.ಚಿಕ್ಕಣ್ಣನವರಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಭಾರತಿ ಕುರಿ, ಎನ್‌.ಕೆ.ನಿಂಗೇನಹಳ್ಳಿ ನೇತೃತ್ವದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಲೋಕೇಶ್ ಲಮಾಣಿ, ಗುಡ್ಡಪ್ಪ ಹಳ್ಳೂರ, ಹಿದಾಯತ್ ದೊಡ್ಡ ಮುಲ್ಲಾ, ರಘು ಕಾಟೇನಹಳ್ಳಿ, ಅಶೋಕ ಹರಮಗಟ್ಟಿ,ರಾಜು ಗೊಂದೇರ,ಮುಂಜುನಾಥ ಮುಚ್ಚಟ್ಟಿ, ಬಿ.ಎನ್‌.ಹುಲ್ಲಹಳ್ಳಿ, ಮಾರುತಿ ಹಾಲಭಾವಿ, ಸತೀಶ್ ಮಾರಿಕಟ್ಟಿ, ಶಶಿಕುಮಾರ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.ಈ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‌.ಪಿ.ಯಶೋಧ ವಂಟಗೋಡಿ ಅವರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ