ಬಳ್ಳಾರಿ

ಬಾಲಕ ನಾಪತ್ತೆ; ಪತ್ತೆಗೆ ಮನವಿ

ಬಾಲಕ ನಾಪತ್ತೆ; ಪತ್ತೆಗೆ ಮನವಿ

ಬಳ್ಳಾರಿ 13: ನಗರದ ಕಂಟೋನ್‌ಮೆಂಟ್‌ನ ಸರ್ಕಾರಿ ಬಾಲಕರ ಬಾಲ ಮಂದಿರದ ಅಪ್ರಾಪ್ತ ವಯಸ್ಕ ಆಕಾಶ್ ಎನ್ನುವ 13 ವರ್ಷದ ಬಾಲಕ ಆ.09 ರಂದು ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. 

ಚಹರೆ: ಅಂದಾಜು 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಸಾಧಾರಣ ಕಪ್ಪು ಮೈಬಣ್ಣ, ಮೆಳ್ಳೆಗಣ್ಣು ಹೊಂದಿದ್ದು, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕೆಂಪು ಬಣ್ಣದ ಟಿ-ಶರ್ಟ್‌ ಧರಿಸಿರುತ್ತಾನೆ. 

ಬಾಲಕನ ಬಗ್ಗೆ ಸುಳಿವು ಸಿಕ್ಕಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿಐ ಮೊ.9480803047, ಪಿಎಸ್‌ಐ ಮೊ.94808203085 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂ.08392-240731 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ