ಕಹಿ ನುಂಗಿ ಸಿಹಿ ಹಂಚಿದ ಮಹಾತಾಯಿ ನಾಗರತ್ನಾ
-ಪ್ರವೀಣ ಗಿರಿ, ಚ. ಕಿತ್ತೂರ
ನನ್ನ ಕಾಲೇಜು ದಿನಗಳಲ್ಲಿ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕಾಮ್ ಅವರ ಜೀವನ ಆಧಾರಿತ, ನಟಿ ಪ್ರಿಯಂಕಾ ಛೋಪ್ರಾ ಅಭಿನಯದ ಚಲನಚಿತ್ರ ನೋಡಿ ಒಂದು ಕ್ಷಣ ಮೂಕವಿಸ್ಮಿತನಾಗಿದ್ದೆ. ಅಬ್ಬಾ! ಎಂತಹ ಪ್ರೇರಣಾದಾಯ ಚಲನಚಿತ್ರ ಅದಾಗಿತ್ತು. ಅದ್ಬುತವೇ ಸರಿ.
ಒಂದು ಹೆಣ್ಣು ಮಗಳು ಮನಸ್ಸು ಮಾಡಿದರೇ ಈ ಜಗತ್ತಿಗೆ ತಾನು ಯಾರು? ಎಂದು ತೋರಿಸಬಲ್ಲಳು ಮತ್ತು ಅಂದುಕೊಂಡಿದ್ದನ್ನು ಅಷ್ಟೇ ಸುಲಭವಾಗಿ ಸಾಧಿಸಬಲ್ಲಳು ಕೂಡ ಎಂಬುದನ್ನು ಮೇರಿ ಕಾಮ್ ಹಿಂದಿ ಚಲನಚಿತ್ರದ ನಿದರ್ೇಶಕ ಆ ಬಾಕ್ಸರ್ ಹೆಣ್ಣುಮಗಳೊಬ್ಬಳ ಜೀವನದ ಕಥೆಯನ್ನು ಪರದೆಯ ಮೇಲೆ ಅತ್ಯಂತ ನೀಟಾಗಿ ತೋರಿಸಿದ್ದರು. ಅಂದು ಆ ಚಲನಚಿತ್ರವನ್ನು ನೋಡಿ ಒದ್ದೆಗಣ್ಣಿನಿಂದ ಥೇಟರ್ನಿಂದ ಹೊರಬಿದ್ದ ಪ್ರತಿಯೊಬ್ಬರೂ ಚಲನಚಿತ್ರದ ಕುರಿತು 'ಭೇಷ್ ಎಂದಷ್ಟೇ ಪ್ರತಿಕ್ರಿಯಿಸಿದ್ದರು.
ಆ ಚಲನಚಿತ್ರದ ಕುರಿತು ಹೆಚ್ಚಿಗೆ ಮಾತನಾಡಲು ಮನಸ್ಸಿರಲಿಲ್ಲಂತಲ್ಲ ಬದಲಾಗಿ ಮೇರಿ ಕಾಮ್ ಅವರ ಸಾಧನೆಯನ್ನು ವಣರ್ಿಸಲು ಪದಗಳಿರಲಿಲ್ಲವೆಂದು. ಇಂದು ಮೇರಿ ಕಾಮ್ ಚಲನಚಿತ್ರ ಮತ್ತು ಅವರ ಛಲದ ಬದುಕು ಮತ್ತೊಮ್ಮೆ ನನಗೆ ನೆನಪಾಗಲು ಕಾರಣ ಕುಂದಾನಗರಿ ಬೆಳಗಾವಿಯ ನಾಗರತ್ನಾ ಸುನೀಲ ರಾಮಗೌಡ ಅವರು.
ಹೌದು. ತಾನು ಮಾಡದ ತಪ್ಪಿಗೆ ಎಚ್ಐವಿ ಎಂಬ ಮಹಾಮಾರಿ ಸೊಂಕು ತನಗೆ ಅಂಟಿಕೊಂಡಿದ್ದರೂ ಅದಕ್ಕೆ ಡೊಂಟ್ ಕೇರ್ ಎಂದು ಸಾವಿಗೆ ಸವಾಲೊಡ್ಡಿ ಬದುಕುತ್ತಿರುವ ರಾಣಿ ಚನ್ನಮ್ಮ ನಾಡಿನ ದಿಟ್ಟ ಮಹಿಳೆ. ಕೇವಲ ತಾನೊಬ್ಬಳೇ ಬದುಕುವುದಲ್ಲದೇ ತನ್ನಂತೆಯೇ ಈ ಎಚ್ಐವಿ ಎಂಬ ಮಹಾಮಾರಿ ಸೊಂಕಿನಿಂದ ಬಳಲುತ್ತಿರುವ ಅದೆಷ್ಟೋ ಸೊಂಕು ಪೀಡಿತ ಮಕ್ಕಳಿಗೆ, ವಿಧವೆಯರಿಗೆ ಇಂದಿನ ಈ ದುಬಾರಿ ಯುಗದಲ್ಲಿಯೂ ಉಚಿತವಾಗಿ ಆಹಾರ, ವಸತಿ, ಶಿಕ್ಷಣ ಕೊಟ್ಟು ಅವರನ್ನು ಸಾಕಿ ಸಲಹುತ್ತಿದ್ದಾರೆ. ಇದು ಸಾಮಾನ್ಯವಾದ ಸಂಗತಿಯಲ್ಲ. ಈ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ನಾಗರತ್ನಾ ಸಿಸ್ಟರ್ ಅಚ್ಚು ಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.
ಸೊಂಕು ಪೀಡಿತ ಮಕ್ಕಳ ಪಾಲಿನ ಅಮ್ಮ ಆಗಿರುವ ನಾಗರತ್ನಾ ಅವರು, ಆಶ್ರಯ ಎಂಬ ಹೆಸರಿನ ಸಂಸ್ಥೆಯೊಂದನ್ನು ಕಟ್ಟಿದ್ದಾರಲ್ಲದೇ ತಮ್ಮನ್ನು ತಾವು ಇಂತಹ ಎಚ್ಐವಿ ಸೊಂಕು ಪೀಡಿತ ಮಕ್ಕಳ ಜೀವನವನ್ನು ರೂಪಿಸುವ ಮಹತ್ತರವಾದ ಕಾರ್ಯಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅದರೊಟ್ಟಿಗೆ ಅನೇಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಮತ್ತು ಹಲವು ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿಯೂ ಬ್ಯೂಸಿ ಆಗಿದ್ದಾರೆ. ಶಾಲಾ-ಕಾಲೇಜು ಮಕ್ಕಳಿಗೆ ಎಚ್ಐವಿ ಸೊಂಕಿನ ಕುರಿತು ಜಾಗೃತಿ ಮೂಡಿಸುವ ಕಾಯರ್ಾಗಾರವನ್ನು ನಡೆಸುತ್ತಿರುತ್ತಾರೆ.
ನಾಗರತ್ನಾ ಅವರ ಉದ್ದೇಶವಿಷ್ಟೇ ಎಚ್ಐವಿ ಸೊಂಕು ಪೀಡಿತರನ್ನು ನೋಡುವ ಸಮಾಜದ ದೃಷ್ಟಿಕೋನ ಸಂಪೂರ್ಣ ಬದಲಾಗಬೇಕು ಅವರಿಗೂ ಎಲ್ಲರಂತೆ ಭೂಮಿ ಮೇಲೆ ಬದುಕುವ ಹಕ್ಕಿದೆ ಎಂದು ಮನವರಿಕೆ ಮಾಡಿಕೊಡುವುದು. ಈ ಕಾರ್ಯವನ್ನು ನಾಗರತ್ನಾ ನಿರಂತರವಾಗಿ ಮಾಡುತ್ತಿದ್ದಾರೆಯೂ ಕೂಡ. ಇಂತಹ ಛಲಗಾತಿಯ ಈ ಮಹತ್ತರವಾದ ಸಾಧನೆಯನ್ನು ನೋಡಿದರೆ ಎಂತವರ ಹೃದಯವೂ ಮಿಡಿಯುತ್ತದೆ. ಈ ಹಿಂದೆ ಇವರನ್ನು ಕಂಡು ದೂರ ಸರಿಯುತ್ತಿದ್ದ ಅದೆಷ್ಟೋ ಜನರು, ಸದ್ಯ ಇವರ ಈ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಲು ಮುಂದೆ ಬರುತ್ತಿದ್ದಾರೆ ಎಂಬುದು ಖುಷಿ ಸಂಗತಿ.
ವೈದ್ಯರು ಎಚ್ಐವಿ ಸೊಂಕು ತಗುಲಿದೆ ಎಂಬ ವಿಷಯವನ್ನು ಸೊಂಕು ತಲುಲಿದ ಪೀಡಿತನಿಗೆ ತಿಳಿಸುತ್ತಿದ್ದಂತೆಯೇ ಸ್ಥಳದಲ್ಲಿ ಕುಸಿಯುತ್ತಾರೆ ಅಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿ ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಾರೆ. ಆದರೆ ಅಂದು ವೈದ್ಯರು ಎಚ್ಐವಿ ಸೊಂಕು ನಿಮಗೆ ಅಂಟಿಕೊಂಡಿದೆ ಎಂದು ದೃಢಪಡಿಸಿದ ಆ ದಿನ ನಾಗರತ್ನಾ ಸ್ವಲ್ಪ ಅಳುಕಿದ್ದರೂ ನಂತರದ ದಿನಗಳಲ್ಲಿ ಧೈರ್ಯದಿಂದ ಎದ್ದು ನಿಂತವರು. ಅಂದು ನಾಗರತ್ನಾ ಸಹ ಉಳಿದವರಂತೆ ಮಾನಸಿಕವಾಗಿ ಕುಗ್ಗಿ ಕುಸಿದು ಹೋಗಿದ್ದರೇ ಇಂದು ಅದೆಷ್ಟೋ ಎಚ್ಐವಿ ಸೊಂಕು ಪೀಡಿತ ಮಕ್ಕಳು ಅಮ್ಮನಿಲ್ಲದೇ ಅನಾಥರಾಗುತ್ತಿದ್ದರು ದೇವರೇ ಬಲ್ಲ! ತನಗೆ ಬಂದಿರುವ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ ಸಾವಿಗೆ ಸವಾಲು ಹಾಕಿ ಬದುಕುವುದಲ್ಲವೇ ಒಂದು ಹೆಣ್ಣಿನ ನಿಜವಾದ ಸಾಧನೆ.
ಎಲ್ಲಿ ತನಗೆ ಹುಟ್ಟುವ ಮಗುವಿಗೆ ಎಚ್ಐವಿ ಸೊಂಕು ತಗಲುತ್ತದೆ ಎಂದು ಮಮ್ಮಲು ಮರುಗಿದ್ದ ಮಾತೃ ಹೃದಯಿ ನಾಗರತ್ನಾ ಅವರ ಮಡಿಲಿಗೆ ದೇವರಿಂದು ಸುಮಾರು 11 ಮಕ್ಕಳನ್ನು ನೀಡಿದ್ದಾನೆ. ಇಂದು ನಾಗರತ್ನಾ ಆ ಮಕ್ಕಳೊಂದಿಗೆ ತನ್ನ ಸ್ವಂತ ಮಗನಿಗಿಂತಲೂ ಹೆಚ್ಚಿಗೆ ಸಮಯವನ್ನು ಕಳೆಯುತ್ತಿರುವುದಲ್ಲದೇ ಸ್ವಂತ ಮಗುವಿಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇದಲ್ಲವೇ ನಿಜವಾದ ತಾಯಿಯ ಪ್ರೀತಿ ಮತ್ತು ವಾತ್ಸಲ್ಯ.
ಇದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಎಲ್ಲರಂತೆ ಜೀವನದ ಕುರಿತು ಸಾಕಷ್ಟು ಕನಸನ್ನು ಕಟ್ಟಿಕೊಂಡಿದ್ದ ನಾಗರತ್ನಾ, ಕಿತ್ತು ತಿನ್ನುವ ಬಡತನದ ಮಧ್ಯೆಯೂ ಹತ್ತನೇಯ ತರಗತಿವರೆಗೂ ಓದಿದವರು. ಈ ವೇಳೆಯಲ್ಲಿ ಹೇಗಾದರೂ ಸರಿ ಭಾರತೀಯ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ಕನಸನ್ನು ಹೊತ್ತುಕೊಂಡಿದ್ದರು. ಆದರೆ ಅಷ್ಟೊತ್ತಿಗಾಗಲೇ ತಂದೆ-ತಾಯಿ ನೋಡಿದ ವರನೊಂದಿಗೆ ನಾಗರತ್ನಾ ಸಪ್ತಪದಿ ತುಳಿದು, ಹೊಸ ಸಂಸಾರದ ನೊಗವನ್ನು ಹೊತ್ತು ಬೆಳಗಾವಿಗೆ ಬಂದು ನಿಂತಾಗಿತ್ತು. ಜೀವನದಲ್ಲಿ ಸಾಕಷ್ಟು ಕಷ್ಟ-ಕಾರ್ಪಣ್ಯಗಳನ್ನು ಕಂಡ ನಾಗರತ್ನಾ ಅವರ ಮತ್ತೊಂದು ಜೀವನದ ಅಧ್ಯಾಯ ಶುರುವಾಗಿದ್ದು ಇಲ್ಲಿಂದಲೇ.
ಎಲ್ಲವೂ ಸರಿಯಿದೆ. ಸಂಸಾರವೂ ಚೆನ್ನಾಗಿ ನಡೆಯುತ್ತಿದೆ ಎಂದು ಸಂತೋಷದಿ ಕಾಲ ಕಳೆಯುತ್ತಿರುವಾಗಲೇ ಯಾರಿಗೋ ರಕ್ತ ನೀಡುವ ಸಂದರ್ಭದಲ್ಲಿ ತನ್ನ ಗಂಡನಿಗೆ ಎಚ್ಐವಿ ಸೊಂಕು ತಗಲಿದ್ದ ವಿಷಯ ಅರಿವಿಗೆ ಬರುತ್ತದೆ. ಗಂಡನಿಂದ ನಾಗರತ್ನಾ ಅವರಿಗೆ ಈ ಸೊಂಕು ತಾಗಲು ಸಮಯ ತೆಗೆದುಕೊಂಡಿರಲಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆಯೇ ಈ ದಂಪತಿ ಅಳುಕಲಿಲ್ಲ. ವೈದ್ಯರೊಬ್ಬರ ಸಲಹೆ ಮೇರೆಗೆ ಹೇಗಾದರೂ ಸರಿ ನಮಗೆ ಬಂದಿರುವ ಈ ಕಷ್ಟವನ್ನು ಮೆಟ್ಟಿ ನಿಲ್ಲಬೇಕು. ನಾವು ಸಹ ಬೇರೆಯವರಂತೆ ಬದುಕಲೇ ಬೇಕೆಂದು ನಿರ್ಧರಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಲು ಆರಂಭಿಸಿದರು. ನಾಗರತ್ನಾ ದಂಪತಿ ಯಾವಾಗ ನಾವು ಬದುಕಬೇಕೆಂದು ಪಾಸಿಟಿವ್ ಆಗಿ ಯೋಚಿಸಿ ಹೆಜ್ಜೆ ಇಟ್ಟಿದ್ದರೂ ಈ ನಿಧರ್ಾರವೇ ಅವರನ್ನು ಗೆಲ್ಲಿಸಿ ಬಿಟ್ಟಿತ್ತು. ಇನ್ನರ್ಧ ವೈದ್ಯರು ನೀಡುವ ಚಿಕಿತ್ಸೆ ಅವಲಂಭಿಸಿತ್ತು.
ಹೀಗೆ ನಾಗರತ್ನಾ ಅವರು ಮಾಡದ ತಪ್ಪಿಗೆ ಮಹಾಮಾರಿ ಎಚ್ಐವಿ ಸೊಂಕಿಗೆ ಅಂಟಿಕೊಂಡಿದ್ದರೂ ಹಣೆಬರಹವನ್ನು ದೂಷಿಸದೇ ಇಂದು ಆಶ್ರಯ ಸಂಸ್ಥೆ ಸ್ಥಾಪಿಸಿ, ಎಚ್ಐವಿ ಸೊಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ಇವರ ಈ ದಿಟ್ಟ ಕಾರ್ಯಕ್ಕೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿ ಸೇರಿವೆ. ಮುಂದಿನ ದಿನಗಳಲ್ಲಿಯೂ ನಾಗರತ್ನಾ ಅವರ ಕಷ್ಟ ಕಾರ್ಪಣ್ಯಗಳು ದೂರಾಗಿ ಇಂತಹ ನೂರಾರು ಅನಾಥ ಮಕ್ಕಳ ಕುರಿತಾದ ಅವರ ಸೇವೆ ನಿರಂತರವಾಗಿ ಹೀಗೆ ನಡೆಯಲಿ.
ಹ್ಯಾಟ್ಸ್ ಆಫ್ ಸಿಸ್ಟರ್..!