ಅ.13ರಂದು ಬೃಹತ್ ಸಮಾವೇಶ
ಸಿರುಗುಪ್ಪ10: ಅ. 13ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದ ಬೃಹತ್ ಸಮಾವೇಶ ಸಿರುಗುಪ್ಪ -ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಅಬ್ಬರ ಜೋರಾಗಿರುವ ಬೆನ್ನಲ್ಲೇ ಬಿಜೆಪಿ ಬಲವರ್ಧನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಕ್ಟೋಬರ್ 11 ರಿಂದ ಈ ಉಭಯ ನಾಯಕರು ಕೊಪ್ಪಳ ರಾಯಚೂರು ವಿಜಯನಗರ ಬಳ್ಳಾರಿ ಬೀದರ್ ಯಾದಗಿರಿ ಕಲಬುರಗಿ ಬೆಳಗಾವಿ ಗದಗ ಧಾರವಾಡ ಹಾವೇರಿ ಉತ್ತರ ಕನ್ನಡ ಚಿಕ್ಕಮಗಳೂರು ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಅಕ್ಟೋಬರ್ 13ರಂದು ಸಿರುಗುಪ್ಪ ನಗರದ ತಾಲ್ಲೂಕಾ ಕ್ರೀಡಾ ಮೈದಾನದಲ್ಲಿ ಈ ಇಬ್ಬರ ನಾಯಕರಿಂದ ಬೃಹತ್ ಸಮಾವೇಶ ಬಹಿರಂಗ ಸಭೆ ನಡೆಯಲಿದೆ ಎಂದು ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರು ತಿಳಿಸಿದ್ದಾರೆ .