ಹುಕ್ಕೇರಿ

ಸೈಬರ ವಂಚನೆಗಳ ಬಗ್ಗೆ ಎಚ್ಚರವಹಿಸಿ: ರಾಕೇಶ

ಸೈಬರ ವಂಚನೆಗಳ ಬಗ್ಗೆ ಎಚ್ಚರವಹಿಸಿ: ರಾಕೇಶ

ಸೈಬರ ವಂಚನೆಗಳ ಬಗ್ಗೆ ಎಚ್ಚರವಹಿಸಿ: ರಾಕೇಶ 


ಹುಕ್ಕೇರಿ 24: ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಅಪರಿಚಿತ ಲಿಂಕಗಳು, ಓಟಿಪಿ, ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಬಾರದು, ಅನುಮಾನಾಸ್ಪದ ಕರೆ ಮತ್ತು ಸಂದೇಶಗಳು ಬಂದರೆ 1930 ಕರೆಮಾಡಿ ಪರಿಹರಿಸಿಕೊಳ್ಳಿ ಎಂದು ರಾಜ್ಯ ಸೈಬರ್ ಸೆಕ್ಯೂರಿಟಿ ಫೌಂಢೇಶನನ ರಾಜ್ಯ ಸಂಯೋಜಕ ರಾಕೇಶ ಕಾವೇರಿ ಅಭಿಪ್ರಾಯ ಪಟ್ಟರು. 

ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಕೇಂದ್ರದ ಫಲಾನುಭವಿಗಳಿಗೆ ಎಂಎಸ್‌ಎಂಇ ಸೈಬರ್ ಸೆಕ್ಯೂರಿಟಿ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. 

ಇನ್ನೂರ್ವ ಸಂಪನ್ಮೂಲ ವ್ಯಕ್ತಿ ಸಲಹಾಗಾರ ಸುಗಂಧಾ ಅಲ್ಲಟ್ಟಿ ಮಾತನಾಡಿ. ಇನ್‌ಸ್ಟಾಗ್ರಾಂ, ಫೇಸ್ಬುಕ್, ಮತ್ತಿತರ ಸಾಮಾಜಿಕ ಜಾಲತಾಣಗಳ ಸಮರ​‍್ಕ ಬಳಕೆ ಮಾಡದೆ ಯುವತಿಯರು ಪ್ರೇಮಪ್ರಕರಣಗಳ ಜಾಲಕ್ಕೆ ಸಿಲುಕಿ ಸಾಗಾಣಿಕೆ, ವೇಶ್ಯಾವಾಟಿಕೆ, ಬಾಲ್ಯವಿವಾಹದಂತಹ ಸಮಸ್ಯೆಗಳಿಗೆ ಬಲಿಪಶುವಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆಮಾಡಬೇಕು ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದೆಂದರು. ಕೇಂದ್ರದ ಅಧೀಕ್ಷಕಿ ದ್ರಾಕ್ಷಾಯಣಿ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂದಾಕಿನಿ ಹಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ