ಅ. 7ರಿಂದ ಶ್ರೀದೇವಿ ಶರನ್ನವರಾತ್ರೋತ್ಸವ ಆರಂಭ
ಲೋಕದರ್ಶನ ವರದಿ
ಬಳ್ಳಾರಿ 06: ಸೃಷ್ಟಿ-ಸ್ಥಿತಿ-ಲಯಗಳಿಗೆ ಮೂಲ ಕಾರಣಳಾದ ಪ್ರಕೃತಿ ಶಕ್ತಿಯ ಆರಾಧನೆಗೆ ಕಲ್ಯಾಣಸ್ವಾಮಿ ಮಠವು ಸನ್ನದ್ಧವಾಗಿದ್ದು ಅ.7ರಿಂದ ಅ. 15ರವರೆಗೆ ಶಕ್ತಿದೇವತೆಯ ನವವಿಧ ರೂಪದಲ್ಲಿ ಆಚರಿಸಲು ಶ್ರದ್ಧಾಭಕ್ತಿಯ ಸಿದ್ಧತೆಗಳು ನಡೆದಿವೆ.
ಈ ಕುರಿತು ಕಮ್ಮರಚೇಡು ಕಲ್ಯಾಣಸ್ವಾಮಿ ಸಂಸ್ಥಾನಮಠದ ಪೂಜ್ಯ ಶ್ರೀಗಳು ಪ್ರಕಟನೆ ನೀಡಿದ್ದು, ಸಾಂಪ್ರದಾಯಿಕ ಸರಳ ಶರನ್ನವರಾತ್ರಿ ಹಬ್ಬದ ಆಚರಣೆ ನಿಮಿತ್ತ ಶ್ರೀದೇವಿ ಪುರಾಣ ಪ್ರವಚನ ಹಾಗೂ ದಸರಾ ಮಹೋತ್ಸವಗಳು ಶ್ರೀಮಠದಲ್ಲಿ ವಿಜೃಂಭಣೆಯಿಂದ ಜರುಗಲಿವೆ. ಮಠಾಧೀಶರ ಧರ್ಮ ಪರಿಷತ್ತಿನ ಪೂಜ್ಯರು ಹಾಗೂ ನಾಡಿನ ಹರ-ಗುರು-ಚರ ಮೂರ್ತಿಗಳು ದಿವ್ಯ ಸಾನಿಧ್ಯವಹಿಸಲಿದ್ದಾರೆ. ಕಂಪ್ಲಿಯ ಪ್ರಭುಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಸಿರಿಗೇರಿ ಹಿರೇಹಾಳು ಮಠ ಪಾಠಶಾಲೆಯ ಬಸವರಾಜಸ್ವಾಮಿ ವಾಚನಕಾರರಾಗಿ, ಬಳ್ಳಾರಿಯ ರಾಘವೇಂದ್ರ ಅವರ ತಬಲಾ ಸಾಥ್ ನೊಂದಿಗೆ ಧಾರ್ಮಿಕ ಹಾಗೂ ಪ್ರವಚನದಂತಹ ಆಚರಣೆಗಳು ನಡೆಯಲಿವೆ.
ಅ. 12ರಂದು ಮಂಗಳವಾರ ಸಂಜೆ 6ಗಂಟೆಗೆ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಅ. 14ರಂದು ಪುರಾಣ ಮಂಗಲ ನಡೆಯಲಿದೆ. ಅ. 15ರಂದು ನಡೆವ ವಿಜಯದಶಮಿಯಂದು ಸಂಜೆ ನಗರದ ಎಲ್ಲ ಪ್ರಮುಖ ದೇವಾಲಯಗಳಿಂದ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದ ಜೊತೆಗೆ ಶ್ರೀಮಠದ ಆವರಣದಲ್ಲಿರುವ ಬನ್ನಿ ಮಹಾಂಕಾಳಿ ಸನ್ನಿಧಿಯಲ್ಲಿ ಬನ್ನಿ ಮುಡಿಯುವ, ಬನ್ನಿ ವಿನಿಯೋಗಿಸುವ ಕಾರ್ಯಕ್ರಮಗಳು ಪೂಜ್ಯ ಕಲ್ಯಾಣ ಶ್ರೀಗಳ ಸಮ್ಮುಖದಲ್ಲಿಯೇ ಜರುಗಲಿವೆ. ಭಕ್ತರು ಕಡ್ಡಾಯವಾಗಿ ಕೋವಿಡ್-19 ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ. ಶ್ರೀಮಠದ ಆವರಣದಲ್ಲಿ ಅಂದಾಜು 2ಕೋಟಿ ರೂ.ವೆಚ್ಚದಲ್ಲಿ ತ್ರಿವಿಧ ದಾಸೋಹ ಭವನ ಪ್ರಗತಿಯಲ್ಲಿದ್ದು ಭಕ್ತರು ತ್ರಿಕರಣಪೂರ್ವಕ ಸೇವೆ ಮಾಡಲು ವಿನಂತಿಸಲಾಗಿದೆ. ಶ್ರೀಮಠಕ್ಕೆ ಸಂಬಂಧಿಸಿದಂತೆ ಬಳ್ಳಾರಿ, ಶಿಡಿಗಿನಮೊಳ, ಕಲ್ಯಾಣದುರ್ಗ, ರಾಯದುರ್ಗ, ನಿಂಬಗಲ್ಲು, ಆದವಾನಿ ಚೌಕಿಮಠದಲ್ಲಿ ಶ್ರೀದೇವಿ ಪುರಣಾದಲ್ಲಿ ಪೂಜೆ, ಪ್ರಸಾದ ಮಾಡಿಸುವ ಭಕ್ತರು 94831 45441 ಅಥವಾ 96208 47831 ಈ ಸಂಖ್ಯೆಗೆ ಸಂಪರ್ಕಿಸಬಹುದು.
ಸಾರಿಗೆ ಇಲಾಖೆ, ಪರಿಶಿಷ್ಟ ಕಲ್ಯಾಣ ವರ್ಗಗಳ ಇಲಾಖೆ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಇ.ತುಕಾರಾಮ್, ಪಿ.ಟಿ.ಪರಮೇಶ್ವರ ನಾಯಕ್, ಜಿ.ಕರುಣಾಕರರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರ್ಪ, ಸಂಸದ ವೈ.ದೇವೇಂದ್ರ್ಪ, ಮಾಜಿ ಸಂಸದ ವಿಎಸ್ ಉಗ್ರ್ಪ, ಮಾಜಿ ಶಾಸಕ ಎನ್.ಸೂರ್ಯನಾರಾಯಣರೆಡ್ಡಿ, ಟಿಎಚ್ ಸುರೇಶ್ ಬಾಬು, ಎಂ.ದಿವಾಕರಬಾಬು, ನಿರಂಜನ ನಾಯ್ಡು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲನ್ನ, ಮಾಜಿ ಅಧ್ಯಕ್ಷ ದಮ್ಮೂರು ಶೇಖರ್, ಎಪಿಎಂಸಿ ಅಧ್ಯಕ್ಷ ಉಮೇಶ್ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು, ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಸಂಘಟನೆಗಳ ಪದಾಧಿಕಾರಿಗಳು, ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು, ಕಲಾವಿದರು, ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಪತ್ರಿಕಾ ಮಾಧ್ಯಮದವರು ಒಳಗೊಂಡಂತೆ ಎಲ್ಲ ಸರ್ವಧರ್ಮೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ಸದ್ಭಕ್ತರು ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀಮಠದಿಂದ ಕೋರಲಾಗಿದೆ.