ಮುದ್ದೆಬಿಹಾಲ್

ಮುದ್ನಾಳ ಗ್ರಾಮದ ಬಂಜಾರ ಸಮಾಜ ಮಹಿಳೆ ಮೇಲೆ ಅತ್ಯಾಚಾರ ಕೋಲೆ ಪ್ರಕರಣ

ಮುದ್ನಾಳ ಗ್ರಾಮದ ಬಂಜಾರ ಸಮಾಜ ಮಹಿಳೆ ಮೇಲೆ ಅತ್ಯಾಚಾರ ಕೋಲೆ ಪ್ರಕರಣ

 ಮುದ್ನಾಳ ಗ್ರಾಮದ ಬಂಜಾರ ಸಮಾಜ ಮಹಿಳೆ ಮೇಲೆ ಅತ್ಯಾಚಾರ ಕೋಲೆ ಪ್ರಕರಣ 

ಮುದ್ದೇಬಿಹಾಳ 10 : ತಾಲೂಕಿನ ಮುದ್ನಾಳ ಗ್ರಾಮದ ಬಂಜಾರ ಸಮಾಜ ಶೋಭಾ ಕಲ್ಯಾಣಕುಮಾರ ಲಮಾಣಿ ಎನ್ನುವ ಮಹಿಳೆ ಮೇಲೆ ಅತ್ಯಾಚಾರ ಕೋಲೆ ಪ್ರಕರಣ ಇಡಿ ಮನುಕುಲವೇ ತಲೆ ತಗ್ಗಿಸುವಂತಹದ್ದು ಯಾವೂದೇ ಜಾತಿ ಧರ್ಮದವರಾಗಿರಲಿ ಈ ರೀತಿ ಘಟನೆಗಳು ಮತಕ್ಷೇತ್ರದಲ್ಲಿ ನಡೆಯಕೂಡದ ಸಧ್ಯ ಈ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೋಳ್ಳುವ ಮೂಲಕ  ಕೊಲೆಯಾದ ಮೃತ ಮಹಿಳೆಯ ಕುಂಟುಂಭಕ್ಕೆ ನ್ಯಾಯ ಒದಗಿಸಬೇಕು ಎಂದು ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ತಿಳಿಸಿದ್ದಾರೆ. ಶುಕ್ರವಾರ ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು  ರಾಜ್ಯದಲ್ಲಿ ಮೂರು ವಿಧಾನ ಸಭಾ ಮತಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಚುನಾವಣಾ ಉಸ್ತುವಾರಿಯಾಗಿ ನನ್ನನ್ನು ನೇಮಕ ಮಾಡಿದ್ದಾರೆ ಜೊತೆಗೆ ಈ ಪ್ರಕರಣ ಬಗ್ಗೆ ತಡವಾಗಿ ನನಗೆ ತಿಳಿದು ಬಂದಿರುವ ಕಾರಣ ನನಗೆ ಬರಲು ಸಾಧ್ಯವಾಗಿಲ್ಲ ದಿ, 14 ರಂದು ಮುದ್ದೇಬಿಹಾಳಕ್ಕೆ ಬರುತ್ತೇನೆ ಬಳಿಕ ಪೋಲಿಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಜತೆಗೆ ಮುದ್ನಾಳ ಗ್ರಾಮಕ್ಕೆ ತೆರಳಿ ಮೃತ ಕುಟುಂಭಕ್ಕೆ ಬೇಟಿ ಮಾಡುತ್ತೇನೆ. ಕಾರಣ ಮೃತಳ ಕುಟುಂಭದವರು ಧೈರ್ಯ ತಂದುಕೊಳ್ಳಬೇಕು ನಿಮ್ಮ ಜೊತೆಗೆ ಮಾತ್ರವಲ್ಲ ಇಡೀ ಬಂಜಾರ ಸಮಾಜ ಬಾಂಧವರ ಜೊತೆಗೆ ಸದಾ ನಿಲ್ಲುತ್ತೇನೆ ಮೃತಳ ಕುಟುಂಭಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ