ಬಿಜೆಪಿ ರಾಜ್ಯ ಕಾರ್ಯದರ್ಶಿ ಬೆಲ್ದಾಳೆ ಹೇಳಿಕೆ ಕಾಂಗ್ರೆಸ್ ಮುಳುಗುವ ದೋಣಿ ಬಿಹಾರದಲ್ಲಿ ಹಿಂದುತ್ವ, ವಿಕಾಸವಾದಕ್ಕೆ ಜಯ

ಬಿಜೆಪಿ ರಾಜ್ಯ ಕಾರ್ಯದರ್ಶಿ ಬೆಲ್ದಾಳೆ ಹೇಳಿಕೆ ಕಾಂಗ್ರೆಸ್ ಮುಳುಗುವ ದೋಣಿ ಬಿಹಾರದಲ್ಲಿ ಹಿಂದುತ್ವ, ವಿಕಾಸವಾದಕ್ಕೆ ಜಯ
BJP State Secretary Beldale's statement: Congress is a sinking boat, Hindutva, evolutionaryism win

             ಬೀದರ್  14:  ಬಿಹಾರ ರಾಜ್ಯ ಮಹಾಜ್ಞಾನಿ ಗೌತಮ ಬುದ್ಧರ ನಾಡು.  ಅಲ್ಲಿನ ಜನರು ಸಹ  ಅತ್ಯಂತ ಪ್ರಬುದ್ಧರು. ಹೀಗಾಗಿ ಮತದಾರರು ರಾಜ್ಯದ ಹಿತ, ದೇಶದ ಹಿತ, ರಾಜ್ಯದ ಸುರಕ್ಷತೆ, ದೇಶದ ಸುರಕ್ಷತೆ ಗಮನಿಸಿ ಎನ್ ಡಿಎಗೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಇದು ಹಿಂದುತ್ವ ಹಾಗೂ ವಿಕಾಸವಾದದ ಜಯವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.ಬಿಹಾರದಲ್ಲಿ ಎನ್ ಡಿಎ ಗೆಲುವಿನ ಸುನಾಮಿ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಂಭ್ರಮ ಹಂಚಿಕೊಂಡ ಅವರು, ಇದೊಂದು ಐತಿಹಾಸಿಕವಾದ ಜಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರಿಟ್ಟ ವಿಶ್ವಾಸಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದು ವ್ಯಾಖ್ಯಾನಿಸಿದರು.ಬಿಜೆಪಿ, ಜೆಡಿಯು, ಎಲ್ ಜೆಪಿ ಜಯ ಚರಿತ್ರಾರ್ಹವಾಗಿದೆ. ಮೋದಿ ಹಾಗೂ ನಿತಿಶ್ ಅವರ ಜೋಡಿ  ಮಹಾ ಮೋಡಿ ಮಾಡಿದೆ.

      243 ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಎನ್ ಡಿಎಗೆ  ನಿಚ್ಚಳ ಬಹುಮತದಿಂದ ಗೆಲ್ಲಿಸಿ, ಮಹಾ ಘಟಬಂಧನ್ ಪಕ್ಷಗಳ ಸಫಾಯಾ ಮಾಡಿದ್ದಾರೆ. ಬಿಹಾರ ಗೆಲುವು ಸರಳವಾಗಿ  ವಿಶ್ಲೇಷಣೆ ಮಾಡಬಹುದಾದರೆ ಇದು ಹಿಂದುತ್ವದ ಗೆಲುವು ಹಾಗೂ ವಿಕಾಸವಾದದ ಗೆಲುವು ಆಗಿದೆ ಎಂದು ಬೆಲ್ದಾಳೆ  ಹೇಳಿದ್ದಾರೆ.ಬಿಹಾರದ ಎಲ್ಲ ಪ್ರದೇಶಗಳಲ್ಲೂಬ ಭಗವಾ ರಾರಾಜಿಸಿದೆ. ಹಿಂದು ಮತಗಳ ಕ್ರೋಢೀಕರಣವಾಗಿರುವುದು ಸಹ ಸ್ಪಷ್ಟವಾಗಿದೆ. ಯೋಗಿಜಿ ಅವರು ಹಾಕಿದ ಬಟೆಂಗೆ ತೋ ಕಟೆಂಗೆ ಎಂಬ ಸ್ಲೋಗನ್ ಇಲ್ಲಿ ಭರಪೂರ ಕೆಲಸ ಮಾಡಿದೆ. ಮುಂದಿನ ಚುನಾವಣೆ ಬಗ್ಗೆ ಬಿಜೆಪಿ, ಎನ್ ಡಿಎಗೆ ಈ ಫಲಿತಾಂಶ ದೊಡ್ಡ ಶಕ್ತಿ ನೀಡುವ ಸಂದೇಶ ಕೊಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.ಹೊರದೇಶಗಳಿಂದ ಅಕ್ರಮವಾಗಿ ಬರುವ ನುಸುಳುಕೋರರಿಗೆ ರೆಡ್ ಕಾರ​‍್ೆಟ್ ಹಾಕಲು ಹೊರಟಿದ್ದ ಆರ್ ಕೆಡಿ, ಕಾಂಗ್ರೆಸ್ ನೇತೃತ್ವದ ಪರಿವಾರವಾದಿ ಮಹಾಘಟಬಂಧನಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್  ಹೀನಾಯ ಸೋಲನುಭವಿಸಿದೆ. ವೋಟ್ ಚೋರಿ ಎನ್ನುತ್ತ ಇಲ್ಲಸಲ್ಲದ ಹೇಳಿಕೆ ನೀಡುತ್ತ ಹೊರಟ  ಮಹಾಘಟಬಂಧನಕ್ಕೆ ಮತದಾರರು ಬುದ್ಧಿವಾದ ಹೇಳಿದ್ದಾರೆ ಮತ್ತೊಂದು ಬಾರಿ ರಾಹುಲ್ ಗಾಂಧಿ ವೈಫಲ್ಯತೆ ಸ್ಪಷ್ಟವಾಗಿ ಕಂಡುಬಂದಿದೆ ಎನ್ನುವುದು ಚುನಾವಣೆ ಫಲಿತಾಂಶ ತೋರಿಸಿದೆ.    


ಸುದ್ದಿ ಓದಿ