ಚಿನ್ನಾರಿ ಮುತ್ತನ ‘ರಿಪ್ಪನ್ ಸ್ವಾಮಿ'ಯಲ್ಲಿ ವೈದ್ಯೆಯಾದ ಅಶ್ವಿನಿ

ಚಿನ್ನಾರಿ ಮುತ್ತನ ‘ರಿಪ್ಪನ್ ಸ್ವಾಮಿ'ಯಲ್ಲಿ ವೈದ್ಯೆಯಾದ ಅಶ್ವಿನಿ

ಚಿನ್ನಾರಿ ಮುತ್ತನ ‘ರಿಪ್ಪನ್ ಸ್ವಾಮಿ'ಯಲ್ಲಿ ವೈದ್ಯೆಯಾದ ಅಶ್ವಿನಿ 

ಗಾಂಧಿನಗರದಲ್ಲಿ ಸದ್ಯ ‘ರಿಪ್ಪನ್ ಸ್ವಾಮಿ’ಯ ಸದ್ದು ಜೋರಾಗಿದೆ. ಹೌದು ಫಸ್ಟ್‌ ಲುಕ್ ಪೋಸ್ಟರ್ ನಿಂದಾನೇ ಕುತೂಹಲ ಹುಟ್ಟು ಹಾಕಿದೆ ‘ರಿಪ್ಪನ್ ಸ್ವಾಮಿ’ ಸಿನಿಮಾ. ಪಂಚಾಂನನ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ ನಿರ್ದೇಶಿಸಿದ್ದಾರೆ. ವಿಭಿನ್ನ ಕಂಟೆಂಟ್ ನೊಂದಿಗೆ ಚಂದನವನದ ಅಂಗಳದಲ್ಲಿ ಚಂದದ ಚಿತ್ರ ಬಿಡಿಸಲು ಸಜ್ಜಾಗಿರುವ ಕಿಶೋರ್ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಮುಖ್ಯ ಪಾತ್ರ ನಿರ್ವಯಿಸಿದ್ದಾರೆ. ಇವರೊಂದಿಗೆ ‘ರಿಪ್ಪನ್ ಸ್ವಾಮಿ’ಯಲ್ಲಿ ಅಶ್ವಿನಿ ಚಂದ್ರಶೇಖರ್ ಕೂಡ ಅಷ್ಟೇ ತೂಕದ ಪಾತ್ರ ಮಾಡಿದ್ದಾರೆ. ಮೂಲತಃ ಶಿವಮೊಗ್ಗದವರಾದ ನಟಿ ಅಶ್ವಿನಿ ಚಂದ್ರಶೇಖರ್ ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಇಂಜಿನಿಯರಿಂಗ್ ಮುಗಿಸಿದ ಅಶ್ವಿನಿ ಅವರಿಗೆ ಸೆಳೆದಿದ್ದು ಚಿತ್ರೋದ್ಯಮ. ಸೀದಾ ಈ ಕಡೆ ಬಂದ ಇಂಜಿನಿಯರ್ ತಮ್ಮ ನಟನಾ ಕೌಶಲ್ಯದಿಂದ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಪಡೆದರು. ಅಶ್ವಿನಿ ಅವರು ಒಳ್ಳೆಯ ಡ್ಯಾನ್ಸರ್ ಕೂಡ. ಅದರಲ್ಲೂ ಡ್ಯಾನ್ಸ್‌ ನಲ್ಲಿ ವಿದ್ವತ್ ಮುಗಿಸಿದ್ದಾರೆ. ಈಗಾಗಲೇ ನಟಿ ಅಶ್ವಿನಿ ಚಂದ್ರಶೇಖರ್ ಕನ್ನಡದಲ್ಲಿ ‘ಪ್ರೇಮ ಪಲ್ಲಕ್ಕಿ’, ‘ಒಂದು ರೋಮ್ಯಾಂಟಿಕ್ ಪ್ರೇಮ ಕತೆ’, ‘ಆಕ್ಟೋಪಸ್‌’ ಸಿನಿಮಾಗಳಲ್ಲಿ ನಟಿಸಿದ್ದು, ತೆಲುಗಿನಲ್ಲಿ ‘ಪ್ರೇಮ್ ಕಹಾನಿ’, ‘ಮಧ್ಯಲೋ ಪ್ರಭಾಸ್ ಪಳ್ಳಿ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ತಮಿಳಿನಲ್ಲೂ ಸೈ ಎನಿಸಿಕೊಂಡಿರುವ ಅಶ್ವಿನಿ ‘ಮೆರ್ಲಿನ್‌’, ‘ಪರಂಜು ಸೆಲ್ಲವ’, ‘ಕಾಲ್ ಟ್ಯಾಕ್ಸಿ’, ‘ಜಿವಿ2’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಜಿವಿ2’ಗೆ ಬೆಸ್ಟ್‌ ಡಿಬೇಟ್ ಅವಾರ್ಡ್‌ ಕೂಡ ಪಡೆದಿದ್ದಾರೆ. ಸದ್ಯ ಇವರ ‘ಜಿ3’ ಸಿನಿಮಾದ ಶೂಟಿಂಗ್ ಶುರುವಾಗಬೇಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಅಶ್ವಿನಿ ಬಹುಭಾಷಾ ನಟಿಯಾಗಿ ಬ್ಯುಸಿ ಆಗುತ್ತಿದ್ದು, ಸದ್ಯಕ್ಕೆ ತಮಿಳಿನಲ್ಲಿ ಎರಡು ಸಿನಿಮಾ ರೀಲೀಸ್‌ಗೆ ರೆಡಿ ಇವೆ. ಇನ್ನು ಮಲಯಾಳಂನಲ್ಲಿ ಎರಡು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ‘ರಿಪ್ಪನ್ ಸ್ವಾಮಿ’ ರೀಲೀಸ್ ಆಗಬೇಕಿದೆ. ಅಂದಂಗೆ ‘ರಿಪ್ಪನ್ ಸ್ವಾಮಿ’ಯಲ್ಲಿ ಅಶ್ವಿನಿ ವಿಜಯ್ ರಾಘವೇಂದ್ರ ಅವರ ಹೆಂಡತಿ ಪಾತ್ರ ನಿರ್ವಹಿಸಿದ್ದಾರೆ. ಡಾಕ್ಟರ್ ಪಾತ್ರವಾಗಿದ್ದರು, ಕೌಟುಂಬಿಕ ಪಾತ್ರದ ಮಹತ್ವ ಸಾರುವಂಥ ಪಾತ್ರವದು. ‘ರಿಪ್ಪನ್ ಸ್ವಾಮಿ’ ಸಿನಿಮಾದಲ್ಲಿ ಹೀರೋಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಹೀರೋಯಿನ್‌ಗು ಇದೆ. ಎರಡು ಕೂಡ ಸಮಾನವಾಗಿರುವಂಥ ಪಾತ್ರವದು. ಹೀಗಾಗಿ ಅಶ್ವಿನಿ ಅವರ ಪಾತ್ರದ ಬಗ್ಗೆನೀರೀಕ್ಷೆಗಳು ಹೆಚ್ಚಿವೆ. ಸದ್ಯ ‘ರಿಪ್ಪನ್ ಸ್ವಾಮಿ’ ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು, ಶೀಘ್ರವೇ ರೀಲೀಸ್ ಆಗಲಿದೆ. 


ಸುದ್ದಿ ಓದಿ