ಬ್ಯಾಡ್ಗಿ

ತುಂತುರು ನೀರಾವರಿ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನ

ತುಂತುರು ನೀರಾವರಿ ಸೌಲಭ್ಯಕ್ಕೆ ರೈತರಿಂದ ಅರ್ಜಿ ಆಹ್ವಾನ

ಬ್ಯಾಡಗಿ 01: ಪ್ರಸಕ್ತ 2025-26 ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ತುಂತುರು ನೀರಾವರಿ ಘಟಕ (ಸ್ಪ್ರಿಂಕ್ಲರ್) ಸೌಲಭ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರು ಈಗಾಗಲೇ ಒಂದು ಹೆಕ್ಟೇರ್ ಪ್ರದೇಶಕ್ಕೆ (ಒಂದು ಎಕರೆ ಮೇಲ್ಪಟ್ಟು 2 ಎಕರೆ 20 ಗುಂಟೆ ಒಳಗೆ) ತುಂತುರು ನೀರಾವರಿ ಘಟಕ ಸವಲತ್ತು ಪಡೆದಿದ್ದಲ್ಲಿ, 2 ಎಕರೆ 20 ಗುಂಟೆಯಿಂದ 5 ಎಕರೆವರೆಗಿನ ಹೆಚ್ಚುವರಿ ವಿಸ್ತೀರ್ಣಕ್ಕೆ ಮತ್ತೊಮ್ಮೆ ಸ್ಪ್ರಿಂಕ್ಲರ್ ಸೌಲಭ್ಯ ಪಡೆಯಬಹುದು. ಅರ್ಹ ರೈತರು ತಮ್ಮ ಆಧಾರ್ ಕಾರ್ಡ, ಖಆ ನಂಬರ್ ಣಠಿಜಚಿಣಜ ಇರುವ ಜಾತಿ ಪ್ರಮಾಣ ಪತ್ರ, ಅ ಖಾತೆ ಉತಾರ, ಆರ್ ಟಿ ಸಿ, ಬೆಳೆ ಹಾಗೂ ನೀರಾವರಿ ಮೂಲದ ದೃಡೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ 3 ಪಾಸ್ ಪೋರ್ಟ್‌ ಸೈಜಿನ ಫೋಟೋದೊಂದಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಬ್ಯಾಡಗಿ/ಕಾಗಿನೆಲೆ ಕಚೇರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ್ ಕಮ್ಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ