ರೈತರಿಗೆ ದಿನಾಲೂ 3 ಪಿಸ್ ವಿದ್ಯುತ್ ನಿಡುವಂತೆ ಆಗ್ರಹಿಸಿ ಮನವಿ
ಬ್ಯಾಡಗಿ 11 : ತಾಲೂಕಿನ ಶಿಡೇನೂರು ಕೊಲ್ಲಾಪುರ ಆಣೂರು ಮಾಸಣಗಿ ಕೆರವಡಿ ಚಿಕ್ಕಣಜಿ ಹಿರೇನಂದಿಹಳ್ಳಿ ಗುಂಗರುಕೊಪ್ಪ ಗ್ರಾಮಗಳ ರೈತರ ಬೆಳೆಗಳಿಗೆ ನೀರು ಪೂರೈಸಲು ಪಂಪ್ ಸೆಟ್ ಗೆ ಕಳೆದ 15ರಿಂದ 20 ದಿನಗಳಲ್ಲಿ ತಾವುಗಳು ಸಮರ್ಕವಾಗಿ ತ್ರಿಪೀಸ್ ವಿದ್ಯುತ್ ನೀಡುತ್ತಿಲ್ಲ ಆದ್ದರಿಂದ ರೈತರು ಸಂಕಷ್ಟಕ್ಕೆ ಸಿಲ್ಕಿದ್ದಾರೆ ಹಾಗಾಗಿ ಕೂಡಲೇ ಸಮರ್ಕವಾಗಿ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತ ಮುಖಂಡ ಕಿರಣ ಗಡಿಗೋಳ ಒತ್ತಾಯಿಸಿದರು.ಪಟ್ಟಣದ ವಿದ್ಯುತ್ ಪ್ರಸರಣ ಕೇಂದ್ರದ ಸಹಾಯಕ ಅಭಿಯಂತರರಿಗೆ ಮನವಿ ಪತ್ರವನ್ನು ನೀಡುವ ಮೂಲಕ ಮಾತನಾಡಿದವರು ರೈತ ರೈತರಿಗೆ ನೀವು ಸರಿಯಾಗಿ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಹಗಲು 4:00 ಗಂಟೆ ರಾತ್ರಿ 3:00 ಗಂಟೆ ವಿದ್ಯುತ್ ನೀಡುತ್ತಿದ್ದೀರಿ ರೈತರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಸಮರ್ಕ ತ್ರೀ ಪೀಸ್ ವಿದ್ಯುತ್ ನೀಡುತ್ತಿಲ್ಲ ಸದ್ಯದ ಪರಿಸ್ಥಿತಿಯಲ್ಲಿ ಹಗಲು-ನಾಲ್ಕು ಗಂಟೆ ರಾತ್ರಿ ನಿರಂತರವಾಗಿ ವಿದ್ಯುತ್ ನೀಡಬೇಕು.
ಆದರೆ ತಾವು ಮನಬಂದಂತೆ ವಿದ್ಯುತ್ ನೀಡುತ್ತಿದ್ದೀರಿ ಬೆಳೆ ಬೆಳೆಯಲು ರೈತರ ಲಕ್ಷಾಂತರ ರೂಪಾಯಿ ಸಾಲ ಮಾಡಿರುತ್ತಾರೆ ನೀವು ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಕಾರಣ ರೈತರು ಅತಂತ್ರ ಪರಿಸ್ಥಿತಿಯಲ್ಲಿದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಆದ್ದರಿಂದ ತಾವುಗಳು ಸರಿಯಾಗಿ ವಿದ್ಯುತ್ ನೀಡದಿದ್ದಲ್ಲಿ ಆಗುವ ನಷ್ಟವನ್ನು ನಿಮ್ಮ ಇಲಾಖೆಯವರು ತುಂಬಿಕೊಂಡು ಬೇಕಾಗುತ್ತದೆ ಕೊಡಲೇ ನಮ್ಮ ಮನವಿಗೆ ಸ್ಪಂದಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಣಿಸಿ ಎರಡು ದಿನಗಳಲ್ಲಿ ನಮ್ಮ ಸಮಸ್ಯೆಯನ್ನು ಸರಿಪಡಿಸಿ ಸಮರ್ಕವಾಗಿ ವಿದ್ಯುತ್ ನೀಡಬೇಕು ಇಲ್ಲವಾದರೆ ಕಚೇರಿ ಬಳಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತರುಗಳಾದ ಮಲ್ಲಪ್ಪ ಅರಳ್ಳಿಕಟ್ಟಿ. ಬಸವರಾಜ ಆಲರಕಟ್ಟಿ. ರೇವಣೇಶ್ ಗಾಣಿಗೇರ್. ಲಿಂಗರಾಜು ದೊಡ್ಮನಿ. ಶಿವಕುಮಾರ್ ಗಡಿಗೋಳ. ಚಂದ್ರ್ಪ ದೇಸಾಯಿ. ನಿಂಗಪ್ಪ ಯಳಗೇರ. ಮಹೇಶ್ ಕನಕಾಪುರ. ಹನುಮಂತಪ್ಪ ಮಳಿಗೆರ. ಬಸವರಾಜ್ ಹುಲ್ಲತ್ತಿ .ಪ್ರಭು ಬಿದರಿ ಹಾಗೂ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.