ಭಾರತೀಯ ಪುರಾತನ ಸಂಸ್ಕೃತಿ ಮಹಿಳಾಮಯವಾದದ್ದು- ಹಾರಿಕಾ ಮಂಜುನಾಥ
ಚಿಕ್ಕೋಡಿ 12 : ಇಡೀ ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿ ಪುರಾತನವಾದದ್ದು ಮತ್ತು ಅದು ಮಹಿಳಾಮಯವಾಗಿದೆ ಎಂದು ಯುವ ವಕ್ತಾರರು ಹಾಗೂ ಲೇಖಕಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರುಪಟ್ಟಣದ ಸಿ.ಟಿ.ಇ. ಸಂಸ್ಥೆಯ ಎ.ಎ.ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದ ಕಾಲದಿಂದಲೂ ಮಹಿಳೆಯರು ಶಕ್ತಿ ಸ್ವರೂಪಿಣಿಯರಾಗಿ ಸಮಾಜದ ಪ್ರಗತಿಗೆ ಆಧಾರಸ್ತಂಭರಾಗಿದ್ದಾರೆ. ಆದರೆ ಪ್ರಸ್ತುತ ಕಾಲದಲ್ಲಿ ವಸಾಹತೀಕರಣದ ಪ್ರಭಾವದಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತಿದೆ. ಇದರ ಬಗ್ಗೆ ನಾವು ಚಿಂತನೆ ಮಾಡಬೇಕಾಗಿದೆ ಎಂದು ಅವರು ಪ್ರಶ್ನಿಸಿದರು.ಮಹಿಳಾ ಪರಂಪರೆ ನಮ್ಮ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಹಿರಿಯರ ಆದರ್ಶಗಳನ್ನು ನಾವು ಪಾಲಿಸಬೇಕು.
ಇಂದಿನ ಕಾಲದಲ್ಲಿ ಪರಂಪರೆಯನ್ನು ಕಾಪಾಡುವ ಜವಾಬ್ದಾರಿ ಮಹಿಳೆಯರ ಮೇಲಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತೃಪ್ತಿ ಎಸ್. ಕುಲಕರ್ಣಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯ ಮೇಲೆ ಭಾಗ್ಯಶ್ರೀ ಸಿ. ಕುಲಕರ್ಣಿ, ಶೋಭಾ ವ್ಹಿ. ಮಾಂಜರೇಕರ, ನೀಲಂ ಎಸ್. ಅಡಕೆ, ಕೀರ್ತಿ ವ್ಹಿ. ಕುಲಕರ್ಣಿ, ಸ್ವಾತಿ ಎಮ್. ದೇಶಪಾಂಡೆ, ಗೌರಿ ಎಸ್. ಮಾಂಜರೇಕರ, ರೇಖಾ ಎ. ಕುಲಕರ್ಣಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರತಿನಿಧಿ ಕುಮಾರಿ ಗಾಯತ್ರಿ ಪಟ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ. ಮಿಥುನ್ ದೇಶಪಾಂಡೆ ಹಾಗೂ ಪ್ರಾಚಾರ್ಯರಾದ ಡಾ. ಎಸ್.ಸಿ. ಜಕಾತಿ, ಬೋಧಕ-ಬೋಧಕೇತರ ಸಿಬ್ಬಂದಿ, ಚಿಕ್ಕೋಡಿ ಪಟ್ಟಣದ ಪ್ರತಿಷ್ಠಿತ ಮಹಿಳೆಯರು,ವಿದ್ಯಾರ್ಥಿನಿಯರ ಪಾಲಕರು, ಪತ್ರಕರ್ತರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಶೃತಿ ಪಾಟೀಲ ಸ್ವಾಗತಿಸಿದರು. ಕುಮಾರಿ ಪೂಜಾ ಬಾಣಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಖೋತ ಹಾಗೂ ಉಮಾ ಪತ್ತಾರ ಅತಿಥಿಗಳ ಹಾಗೂ ಅಧ್ಯಕ್ಷರ ಪರಿಚಯ ಮಾಡಿದರು. ವಿದ್ಯಾರ್ಥಿನಿಯರು ಈಶಸ್ತವನ ಹಾಗೂ ಮಹಿಳಾ ಗೀತೆಯನ್ನು ಹಾಡಿದರು. ಕುಮಾರಿ ಪ್ರಿಯಾಂಕಾ ಹಿರೇಮಠ ವಂದನಾರೆ್ಣ ಸಲ್ಲಿಸಿದರು. ಕುಮಾರಿ ರೋಹಿಣಿ ಕಂಬಾರ ಹಾಗೂ ಕಸ್ತೂರಿ ನಿಡೋಣಿ ಕಾರ್ಯಕ್ರಮವನ್ನು ನಿರೂಪಿಸಿದರು.