ಭವ್ಯ ದೇಗುಲದಂತೆ ನಿರ್ಮಾಣವಾದ ನಟಿ ಲೀಲಾವತಿ ಸ್ಮಾರಕ
ಭವ್ಯ ದೇಗುಲದಂತೆ ನಿರ್ಮಾಣವಾದ ನಟಿ ಲೀಲಾವತಿ ಸ್ಮಾರಕ
ಬೆಂಗಳೂರು 08 : ಹಿರಿಯ ನಟಿ ಡಾ.ಎಂ.ಲೀಲಾವತಿ ನಮ್ಮನ್ನು ಅಗಲಿ ಒಂದು ವರ್ಷ ಆಗಿದೆ. ಇದರನ್ವಯ ಅವರ ಪುತ್ರ ನಟ ವಿನೋದ್ ರಾಜ್ ಒಂದು ಕೋಟಿಗೂ ಹೆಚ್ಚು ವೆಚ್ಚ ಮಾಡಿ ಅಮ್ಮನ ನೆನಪಿನಲ್ಲಿ ‘ಡಾ.ಲೀಲಾವತಿ ದೇಗುಲ’ ನಿರ್ಮಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿಯಲ್ಲಿ ಇರುವ ತೋಟದಲ್ಲಿ ನಿರ್ಮಾಣಗೊಂಡಿರುವ ದೇಗುಲ ಮತ್ತು ದಾಸೋಹ ನಿಲಯವನ್ನು ಸಚಿವ ಕೆ.ಹೆಚ್.ಮುನಿಯಪ್ಪ, ಬಸವಣ್ಣ ದೇವರ ಮಠದ ಸಿದ್ದಲಿಂಗಸ್ವಾಮೀಜಿ ಮತ್ತು .ಡಾ. ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ಕಲಾವಿದರುಗಳಾದ ಎಂ.ಎಸ್.ಉಮೇಶ್, ಆದಿವಾನಿ ಲಕ್ಷೀದೇವಿ, ಶೈಲಜ ಸುದರ್ಶನ್, ಬ್ಯಾಂಕ್ ಜನಾರ್ಧನ್, ಗಿರಿಜಾ ಲೋಕೇಶ್, ಹೊನ್ನವಳ್ಳಿ ಕೃಷ್ಣ, ಪದ್ಮವಾಸಂತಿ, ಕೀರ್ತಿರಾಜ್, ಟೆನ್ನಿಸ್ ಕೃಷ್ಣ, ಅಭಿಜಿತ್, ಧರ್ಮ ಕೀರ್ತಿರಾಜ್ ಮುಂತಾದವರು ಆಗಮಿಸಿದ್ದರು. ನಟ ದೊಡ್ಡಣ್ಣ ದೇಗುಲದ ದರ್ಶನ ಮಾಡಲು ಪೋಷಕ ಕಲಾವಿದರಿಗಂತಲೇ ಎರಡು ಬಸ್ಸುಗಳ ಸೌಲಭ್ಯ ಕಲ್ಪಿಸಿದ್ದರು. ನಟಿ ಲೀಲಾವತಿ ನಟಿಸಿದ್ದ 70ಕ್ಕೂ ಹೆಚ್ಚು ಫೋಟೋಗಳು ಸ್ಮಾರಕದಲ್ಲಿ ಅಳವಡಿಸಿರುವುದು ಗಮನ ಸೆಳೆಯಿತು. ಅಲ್ಲದೆ ರಕ್ತದಾನ ಶಿಬರ ಏರಿ್ಡಸಲಾಗಿ, ಸುಮಾರು 80 ಯೂನಿಟ್ ರಕ್ತ ಸಂಗ್ರಹವಾಯಿತು.