ವಿವಾಹದಲ್ಲಿ ಸಂವಿಧಾನ ಪೀಠಿಕೆ ಹಂಚಿದ ಮುಸ್ಲಿಂ ಯುವಕ

ವಿವಾಹದಲ್ಲಿ ಸಂವಿಧಾನ ಪೀಠಿಕೆ ಹಂಚಿದ ಮುಸ್ಲಿಂ ಯುವಕ

ವಿವಾಹದಲ್ಲಿ ಸಂವಿಧಾನ ಪೀಠಿಕೆ ಹಂಚಿದ ಮುಸ್ಲಿಂ ಯುವಕ

ರಾಯಚೂರು 14: ಇಂದಿನ ಆಧುನಿಕ ಯುಗದಲ್ಲಿ ವಿವಾಹವೂ ಅದ್ಧೂರಿತಕ್ಕೆ ಹಾಗೂ ದುಂದುವೆಚ್ಚಕ್ಕೆ ಆಸ್ಪದ ನೀಡುವ ಮಧ್ಯೆ ಮುಸ್ಲಿಂ ಯುವಕನೊಬ್ಬ ತನ್ನ ವಿವಾಹವನ್ನು ವಿಭಿನ್ನವಾಗಿ ನೆರವೇರಿಸಿಕೊಳ್ಳಲು ತನ್ನ ಮದುವೆಯಲ್ಲಿ ಸಂವಿಧಾನದ ಪೀಠಿಕೆ ಹಂಚಿ ಗಮನ ಸೆಳೆದಿದ್ದಾನೆ. 

ಹೌದು ರಾಯಚೂರಿನ ಇಬ್ರಾಹಿಂ ವಲಿ ಎಂಬ ಯುವಕ ಇಂದು ನಗರದ ಸಂಗಮ್ ಪ್ಯಾಲೇಸ್ ಫಂಕ್ಷನ್ ಹಾಲ್ ನಲ್ಲಿ ನಡೆದ ವಿವಾಹ ರೆಸೆಪ್ಶನ್( ವಲೀಮಾ)ದಲ್ಲಿ ತನನ ಮದುವೆಗೆ ಬಂದ ಗೆಳೆಯರಿಗೆ ಹಾಗೂ ಸಂಬಂಧಿಕರಿಗೆ ಅಂಗೈ ಅಗಲದಷ್ಟು ಸೈಜಿನ ಸಂವಿಧಾನ ಪೀಠಿಕೆ ವಿತರಿಸಿ ವಿನೂತನವಾಗಿ ವಿವಾಹವಾಗಿ ದೇಶ ಭಕ್ತಿ ಮೆರೆದಿದ್ದಾನೆ.ಇಬ್ರಾಹಿಂ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಸಂವಿಧಾನದ ಬಗ್ಗೆ ಗೊತ್ತಿರಲಿಲ್ಲ.  

ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಕೈಯಲ್ಲಿ ಸಂವಿಧಾನದ ಹಿಡಿದು ಪ್ರಚಾರ ಮಾಡುತ್ತಿದ್ದನ್ನು ಟಿವಿ ಚಾನೆಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಿದ್ದ ಈತ ತಮ್ಮ ಸುತ್ತಮುತ್ತಲಿನ ಪ್ರಗತಿಪರರಿಗೆ ಹಾಗೂ ಹೋರಾಟಗಾರರಿಗೆ ಕೇಳುತ್ತಿದ್ದ ಹಾಗೂ ಯಾಕೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಸಂವಿಧಾನದ ಪ್ರಸ್ತಾವನೆಯಲ್ಲಿನ ವಿಷಯ ಇಷ್ಟವಾಗಿ ತನ್ನ ಗೆಳೆಯರೊಂದಿಗೆ ಚರ್ಚಿಸಿದ್ದಾನೆ. ಅನೇಕರು ಈತನ ನಿರ್ಧಾರಕ್ಕೆ ಬೆಂಬಲ ನೀಡಿದ್ದರಿಂದ ಆಯ್ದ 120 ಜನರಿಗೆ ಪ್ರಸ್ತಾವನೆ ಹಂಚಿದ್ದಾನೆ.  

ಇಬ್ರಾಂಹಿನ ಈ ನಿರ್ಧಾರದಿಂದ ಸಂತಸರಾದ ಕೆಲ ಗೆಳೆಯರು ಈತನಿಗೆ ದೊಡ್ಡದಾದ  ಸಂವಿಧಾನದ ಪ್ರಸ್ತಾವನೆಗೆ ಫೋಟೋ ಫ್ರೇಮ್ ನೀಡಿದ್ದಾರೆ.ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೋರಾಟಗಾರ ಅಜೀಜ್ ಜಾಗೀರದಾರ್, ರವಿಚಂದ್ರ, ಪ್ರಾಣೇಶ ಹಾಗೂ ಲಾರಿ, ಟ್ಯಾಕ್ಸಿ ಚಾಲಕರು ಶುಭ ಕೋರಿ ಮೆಚ್ಚುಗೆ ವ್ಯಕ್ತಪಡಿಸಿದರು. 


ಸುದ್ದಿ ಓದಿ