ನಡುರಸ್ತೆಯಲ್ಲಿ ಸಿನಿಮೀಯ ರೀತಿ ಹಾಡುಹಗಲೆ ವ್ಯಕಿಯ ಭೀಕರ ಹತ್ಯೆ : ಹಂತಕರು ಪರಾರಿ
ಬೆಳಗಾವಿ : ನಡುರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಹಂತಕರು ಪರಾರಿಯಾದ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಾಕಾ ಹತ್ತಿರ ಸೋಮವಾರ ಮಧ್ಯಾಹ್ನ ನಡೆದಿದೆ.
ಕೊಲೆಯಾದ ವ್ಯಕ್ತಿ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಮಲ್ಲಿಕಜಾನ ಎಂದು ತಿಳಿದುಬಂದಿದೆ. ಸೋಮವಾರ ಈ ಘಟನೆ ನಡೆದಿದ್ದು ಪೊಲೀಸರು ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನಡು ರಸ್ತೆಯ ಲ್ಲಿ ನಡೆದ ಈ ಭೀಕರ ಹತ್ಯೆ ಯಿಂದ ಭಯದ ವಾತಾವರಣದ ನಿರ್ಮಾಣ ವಾಗಿದೆ.