ಕರಾಳ ದಿನ ಹೆಸರಲ್ಲಿ ಶಾಂತಿ ಕದಡುವವರಿಗೆ ತಕ್ಕ ಪಾಠ : ರಾಜ್ಯೋತ್ಸವಕ್ಕೆ 1 ಕೋಟಿ ಹಣಕ್ಕಾಗಿ ಸರಕಾರಕ್ಕೆ ಮನವಿ : ಡಿಸಿ ನಿತೇಶ ಪಾಟೀಲ
ಬೆಳಗಾವಿ : ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆ ಹೆಸರಲ್ಲಿ ಬೆಳಗಾವಿಯಲ್ಲಿ ಶಾಂತಿ ಕದಡುವ ಕರ‍್ಯ ಮಾಡುವವರಿಗೆ ತಕ್ಕ ಪಾಠ ಕಲಿಸುವ ಮೂಲಕ ಹೊರ ರಾಜ್ಯದಿಂದ ಬೆಳಗಾವಿಗೆ ಆಗಮಿಸುವವರನ್ನು ಹದ್ದುಬಸ್ತಿನಲ್ಲಿ ಇಡಲು ಬೆಳಗಾವಿ ಪೊಲೀಸ ಇಲಾಖೆ ಹಾಗೂ ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಹೇಳಿದರು.
ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ಕರ್ನಾಟಕ ರಾಜ್ಯೋತ್ಸವ ಹಿನ್ನಲೆಯಲ್ಲಿ ಎಲ್ಲ ಕನ್ನಡ ಸಂಘಟನೆಗಳ ಜೊತೆ ಗುರುವಾರ ಪೂರ್ವಬಾವಿ ನಡೆಸಿದರು. ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಕರಾಳ ದಿನ ಆಚರಣೆಯ ಅನುಮತಿಗಾಗಿ ಜಿಲ್ಲಾಡಳಿತಕ್ಕೆ ಯಾವದೇ ಮನವಿ ಬಂದಿಲ್ಲ. ಕಳೆದ ಬಾರಿ ಕೂಡಾ ಕರಾಳ ದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತವು ಅವಕಾಶ ನೀಡಿಲ್ಲ. ಈ ಬಾರಿ ಕೂಡಾ ಸರಕಾರದ ನಿರ್ದೇಶನದಂತೆ ಪೊಲೀಸ ಇಲಾಖೆ ಶಾಂತಿ ಹಾಳು ಮಾಡುವವರನ್ನು ಹದ್ದು ಬಸ್ತನಿನಲ್ಲಿ ಇಡುವ ಕೆಲಸ ನಿರ್ವಹಿಸಲಿದೆ ಎಂದು ನುಡಿದರು.
ಅದೇ ರೀತಿಯಾಗಿ ಎಲ್ಲ ಕನ್ನಡ ಸಂಘಟನೆಗಳ ಒತ್ತಾಯದ ಮೇರೆಗೆ ಬೆಳಗಾವಿ ರಾಜ್ಯೋತ್ಸವಕ್ಕೆ ಒಂದು ಕೋಟಿ ಹಣ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವದು. ರಾಜ್ಯದಲ್ಲಿಯೇ ಅದ್ದೂರಿಯ ಹಾಗೂ ಮಾದರಿ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಆಚರಣೆ ಮಾಡಲಾಗುತ್ತದೆ. ರಾಜ್ಯೋತ್ಸವದ ಹಿನ್ನೆಲೆ ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ 10 ಜನ ಮಹನಿಯರಿಗೆ ಸ್ಮರಣ ಸಂಚಿಕೆ ನೀಡುವ ಮೂಲಕ ಸನ್ಮಾನ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಮೂಲಕ ಸಂಪನ್ಮೂಲ ಕ್ರೂಡಿಕರಣ ಮಾಡಲಾಗುವದು. ರಾಜ್ಯೋತ್ಸವ ಆಚರಣೆಯಲ್ಲಿ ಲಕ್ಷಾಂತರ ಜನ ಸೇರುವದರಿಂದ ಕುಡಿಯುವ ನೀರಿನ ವ್ಯವಸ್ಥೆ, ರೂಪಕಗಳ ಮೆರವಣಿಗೆಯ ವೀಕ್ಷಣೆಗಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಗ್ಯಾಲರಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕ್ರಿಡಾಂಗಣದಲ್ಲಿ ಪರೇಡ ಮಾಡುವ ಮೂಲಕ ಧ್ವಜಾರೋಹಣ ಮಾಡಲಾಗುತ್ತದೆ. ಅದ್ದೂರಿ ಹಾಗೂ ಮಾದರಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಎಲ್ಲ ಕನ್ನಡ ಸಂಘಟನೆಗಳ ಮತ್ತು ಹೋರಾಟಗಾರರ ಮತ್ತು ಎಲ್ಲ ಇಲಾಖೆಗಳ ಸಹಕಾರ ನೀಡಲಿದ್ದಾರೆ, ಈ ಕುರಿತು ಇಂದು ಕರೆಯಲಾದ ರಾಜ್ಯೋತ್ಸವ ಪೂರ್ವಬಾವಿ ಸಭೆಯಲ್ಲಿ ತೀರ್ಮಾಣಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾದ ಅಶೋಕ್ ಚಂದರಗಿ, ಕರವೇ ಕರವೇ ರಾಜ್ಯ ಸಂಚಾಲಕರಾದ (ರೈತ ಸಂಘಟನೆ) ಸುರೇಶ್ ಗವನ್ನವರ, ಕನ್ನಡಪರ ಹೋರಾಟ ಮೈನುದ್ದಿನ್ ಮಕಾನದಾರ, ಯಲ್ಲಪ್ಪ ಹುದಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.