ರೋಣ

86ನೇ ವರ್ಷದ ಆದಿ ಶಕ್ತಿ ಪುರಾಣ ಮಂಗಲ ಕಾರ್ಯಕ್ರಮ

86ನೇ ವರ್ಷದ ಆದಿ ಶಕ್ತಿ ಪುರಾಣ ಮಂಗಲ ಕಾರ್ಯಕ್ರಮ

ಲೋಕದರ್ಶನ ವರದಿ

ರೋಣ 09:  ದೇವಿಯ ಮೆರವಣಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು  ಬಸವಂತಪ್ಪ ಹೆಚ್ ತಳವಾರ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿ,ಜೆ,ಪಿ, ಎಸ್,ಟಿ,ಮೋರ್ಚಾ ಇವರು ನೇರವೆರಿಸಿ ಮಾತನಾಡಿ ಗ್ರಾಮೀಣ ಪ್ರದೇಶದ  ದೇವಾಲಯಗಳಲ್ಲಿ ನಡೆಯುವ ದೇವಿ ಪುರಾಣವು ಪ್ರವಚನವು ನಿರಂತರವಾಗಿ 86ವರ್ಷಗಳಿಂದ ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ನಡೆದು ಬಂದಿದೆ ಎಂದರು.                                           

              ಕರಕಿ ಕಟ್ಟಿಯ ಮಹಾಸ್ವಾಮಿಗಳು, ಅರಳಿಕಟ್ಟಿಯ ಅಜ್ಜನವರು ನಡೆಸಿಕೊಟ್ಟರು. ಅಂದಿನ ದೇವಿ ಪುರಾಣ ಹೆಚ್ಚಿನ ಪ್ರಾವೀಣ್ಯತೆ ಪಡೆದುದ್ದರಿಂದ ಕಾರ್ಯಕ್ರಮಗಳು ಜರುಗುತ್ತ ಬಂದಿದೆ.ಕಳೆದ 30 ವರ್ಷಗಳಿಂದ ಷಡಕ್ಷರಯ್ಯ ಸಾಲಿಮಠ ಶಾಸ್ತ್ರಿಗಳು ಪುರಾಣ ವಿವರಣೆ ಮಾಡುತಿದ್ದಾರೆ. ಅವರೊಂದಿಗೆ ಕಲ್ಲಯ್ಯ ಮಠದ ಶಾಸ್ತ್ರಿಗಳು ಪುರಾಣ ಪ್ರವಚನ ನೀಡುತ್ತಾ ಬಂದಿದ್ದಾರೆ. ಆರಂಭದ ದಿನ ದೇವಿ ಪುರಾಣ ಪುಸ್ತಕ ದೇವಿ ಭಾವಚಿತ್ರ ಮತ್ತು ಮೂರ್ತಿ ಗಳನ್ನು ಬಸಪ್ಪ ಬಡಿಗೇರ ಮನೆಯಿಂದ ಮೆರವಣಿಗೆ ಮಾಡುವ ಮೂಲಕ ದೇವಾಲಯಕ್ಕೆ ತರುತ್ತಾರೆ. ಬಡಿಗೇರ ಹಾಗೂ ರೇಷ್ಮಿ ಮನೆತನದವರು ದೇವಿ ಪುರಾಣವನ್ನು 9 ದಿನಗಳ ಕಾಲ ದೇವಿಗೆ ನೈವೇದ್ಯ ಅರ್ಪಿ ಸುತ್ತಾರೆ. 

ಹುನನುಂಡಿ ಗ್ರಾಮದಲ್ಲಿ ಬಹಳಷ್ಟು ಪುರಾಣಗಳು ಹಚ್ಚುತ್ತಾರೆ.ಇದರಿಂದ ಜನರಿಗೆ ಒಳ್ಳೆಯ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಲು ಸಹಾಯಕಾರಿ ಆಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ  ಷಡಕ್ಷರಯ್ಯ ಸಾಲಿಮಠ,ಕಲ್ಲಯ್ಯ ಮಠದ,ರಾಚಯ್ಯ ಎಸ್ ಹಿರೆಮಠ,ಜಂಭಯ್ಯ ರೇಷ್ಮಿ,ಎಸ್.ಎಚ್. ಮಂಡಸೊಪ್ಪಿ, ಎ.ಎಸ್.ಗೌಡರ, ಆರ್ ಬಿ ಗುಳಪ್ಪನವರ,ಎಸ್.ವಾಯ್ ಮಂಡಸೊಪ್ಪಿ, ಶಿವಾಜಿ ಎಚ್.ಮಂಡಸೊಪ್ಪಿ, ಸಂಗನಗೌಡ ದೊಡ್ಡಗೌಡ್ರ,ಎ.ಬಿ ಮಂಡಸೊಪ್ಪಿ, ಬಿ.ಎಸ್. ವಸ್ತ್ರದ ಭರಮಗೌಡ ಸೋಮನಗೌಡ್ರ ,ಎಂ ಎಚ್ ಜಂತಲಿ ಸೇರಿದಂತೆ ಗ್ರಾಮದ ಗುರು ಹಿರಿಯರು, ಯುವಕರು ಉಪಸ್ಥಿತಿತರಿದ್ದರು 

ಸುದ್ದಿ ಓದಿ