ಮಹಲಿಂಗಪುರ

64ನೇ ವಾರ್ಷಿಕ ಸಭೆಯಲ್ಲಿ 35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

64ನೇ ವಾರ್ಷಿಕ ಸಭೆಯಲ್ಲಿ 35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಹಾಲಿಂಗಪುರ ಪಿಕೆಪಿಎಸ್ಗೆ 37 ಲಕ್ಷ ನಿವ್ವಳ ಲಾಭ

ಮಹಾಲಿಂಗಪುರ: ಸ್ಥಳೀಯ ಪಿಕೆಪಿಎಸ್ ಆವರಣದಲ್ಲಿ ಶುಕ್ರವಾರ ಸಂಜೆ ಪಿಕೆಪಿಎಸ್ನ 64ನೇ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯು ಜರುಗಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ ಸದಾ ರೈತರ ಹಿತ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘವು ಹಲವಾರು ರೈತಪರ ಯೋಜನೆ, ಸಹಾಯಧನ ಮತ್ತು ಸಾಲ ವಿತರಣೆಯ ನಂತರವೂ 2022-23ನೇ ಸಾಲಿನ ಅಂತ್ಯಕ್ಕೆ ಅಂದಾಜು 37.10 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದರು.

ನಮ್ಮ ಸಂಘಕ್ಕೆ 2342 ಸದಸ್ಯರನ್ನು ಹೊಂದಿದೆ. 20,30,05,148 ಕೋಟಿ ಸಂಘದ ಒಟ್ಟು ದುಡಿಯುವ ಬಂಡವಾಳ ಹೊಂದಿದೆ. ಸಂಘದಿಂದ ಟ್ರಾಕ್ಟರ್ ಸಾಲ, ನೇಕಾರಿಕೆ ಸಾಲ, ಬಿನ್ನಶೇತ್ಕಿ ಸಾಲ, ದ್ವೀಚಕ್ರ ವಾಹನ ಸಾಲ, ಮುದ್ದತ ಠೇವು ಸಾಲ, ಪೈಪಲೈನ್ ಸಾಲ, ವೇತನ ಸಾಲ, ಜಾಮೀನ ಸಾಲ, ತೋಟಗಾರಿಕೆ(ದ್ರಾಕ್ಷಿ) ಸಾಲ ಸೇರಿದಂತೆ ಒಟ್ಟು 1687 ಜನರಿಗೆ 13, 23,55,173 ಕೋಟಿ ಸಾಲವನ್ನು ವಿತರಿಸಲಾಗಿದೆ. ಸಂಘವು ಸ್ವಂತ ಬಂಡವಾಳದ ಮೂಲಕ 4,68,06,954 ರೂಗಳ ಸಾಲವನ್ನು ವಿತರಿಸಿದೆ ಎಂದರು.

ಸಾಲ ಪಡೆದ ಪ್ರತಿಯೊಬ್ಬ ರೈತರನ್ನು ಪಿಎಂಎಸ್ಬಿವೈ ಯೋಜನೆಯಡಿಯಲ್ಲಿ ವಾರ್ಷಿಕ 20 ರೂ ಪಾವತಿಯೊಂದಿಗೆ ಅಪಘಾತ ವಿಮೆಗೆ ಒಳಪಡಿಸಲಾಗಿದೆ. ಪ್ರಸಕ್ತ ವರ್ಷ 8% ಲಾಭಾಂಶವನ್ನು ವಿತರಿಸಲು ನಿರ್ಧರಿಸಲಾಗಿದೆ. ರೈತರು ಸಕಾಲಕ್ಕೆ ಸಾಲವನ್ನು ಮರುಪಾವತಿಸುವದು ಮತ್ತು ಹೆಚ್ಚಿನ ಠೇವಣಿಗಳನ್ನು ಇಡುವ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಿ ಎಂದರು.

ಮಹಾಲಿಂಗಪುರ ಭಾಗದ ಕೃಷಿ ಅಧಿಕಾರಿ ಟಿ.ಎಂ.ಡಾಂಗೆ ಮಾತನಾಡಿ ಪಿಎಂ ಕಿಸಾನ್ ಸಹಾಯಧನ ಪಡೆಯುವ ಪ್ರತಿಯೊಬ್ಬ ರೈತರು ಈಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ನಮ್ಮ ರೈತ ಸೇವಾಕೇಂದ್ರದಲ್ಲಿ  ಸುತ್ತಮುತ್ತಲಿನ 10 ಗ್ರಾಮಗಳ ರೈತರಿಗಾಗಿ ಮುಂಗಾರು ಹಂಗಾಮಿನ ಸೋಯಾಬಿನ್ ಮತ್ತು ಗೋವಿನಜೋಳ ಬೀಜಗಳು, ಪರಿಕರಗಳು ಲಭ್ಯವಿದ್ದು, ರೈತರು ಮಳೆಗಾಲ ಸ್ಥಿತಿಯನ್ನು ನೋಡಿಕೊಂಡು ಬಿತ್ತನೆ ಮಾಡಬೇಕು ಎಂದರು.

ಸಭೆಯಲ್ಲಿ 28ಕ್ಕೂ ಅಧಿಕ ವಿಷಯಗಳನ್ನು ಚರ್ಚಿಸಿ, ಸರ್ವಾನುಮತದ ಠರಾವು ಪಾಸ ಮಾಡಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಮತ್ತು ಜಾಣ ಬಡವಿದ್ಯಾರ್ಥಿಗಳು ಸೇರಿದಂತೆ ಸುಮಾರು 35 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ಶೈಕ್ಷನೀಕ ಸಹಾಯಧನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಿಕೆಪಿಎಸ್ ಮುಖ್ಯಕಾರ್ಯನಿರ್ವಹಣಾಧಾಕಾರಿ ಈರಣ್ಣ ಬೆಟಗೇರಿ ಸ್ವಾಗತಿಸಿ-ವಾರ್ಷಿಕ ವರದಿಯನ್ನು ವಾಚಿಸಿದರು. ಸರ್ಂದ ಉಪಾಧ್ಯಕ್ಷೆ ಸಾಂಯವ್ವ ಸಂಶಿ, ನಿರ್ದೇಶಕರಾದ ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಶಿವಲಿಂಗ ಘಂಟಿ, ಸಂಗಪ್ಪ ಡೋಣಿ, ವಿಷ್ಣುಗೌಡ ಪಾಟೀಲ, ಭೀಮಪ್ಪ ಉಳ್ಳಾಗಡ್ಡಿ, ಮಲ್ಲಿಕಾಜರ್ುನ ಕುಳ್ಳೋಳ್ಳಿ, ಅಲ್ಲಪ್ಪ ಪೂಜಾರಿ, ಬಸವರಾಜ ಅರಳಿಕಟ್ಟಿ, ಹಣಮಂತ ಬುರುಡ, ಶೈಲಾ ಪವಾರ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ತಿಮ್ಮಣ್ಣ ನಾಯಕ ಸೇರಿದಂತೆ ಸಿಬ್ಬಂದಿ ಹಾಗೂ ನೂರಾರು ರೈತರು ಇದ್ದರು.


ಸುದ್ದಿ ಓದಿ