ಶಿರೂರು ಗುಡ್ಡ ಕುಸಿತದಿಂದ ಮೃತ ಪಟ್ಟು ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ
ಶಿರೂರು ಗುಡ್ಡ ಕುಸಿತದಿಂದ ಮೃತ ಪಟ್ಟು ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ
ಶಿರೂರು 11 : ನಾಪತ್ತೆಯಾದ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಣೆ ಶಿರೂರು ಗುಡ್ಡ ಕುಸಿತದಿಂದ ಮೃತ ಪಟ್ಟು, ಶವ ಸಿಗದ ಎರಡು ಕುಟುಂಬ ಗಳ ವಾರಸುದಾರರಿಗೆ ತಲಾ 5 ಲಕ್ಷ ಪರಿಹಾರ ವಿತರಿಸಿದ ಕ್ಷಣಕಾರವಾರ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಗ್ರಾಮದ ಬಳಿ ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದ ಲೋಕೇಶ್‌ನಾಯ್ಕ ಮತ್ತು ಜಗನ್ನಾಥ ನಾಯ್ಕ ಕುಟುಂಬದವರಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಲಾ ರೂ.5 ಲಕ್ಷ ಪರಿಹಾರವನ್ನು ವಿತರಿಸಿದರು.ಈ ದುರಂತದಲ್ಲಿ ಮಡಿದ ಎಲ್ಲಾ 11 ಜನರ ವಾರಸುದಾರರಿಗೆ ಈಗ ಪರಿಹಾರ ವಿತರಿಸಿದಂತಾಗಿದೆ.ಇಬ್ಬರ ಶವ ಸಿಗದ ಕಾರಣ ಪರಿಹಾರ ವಿತರಣೆ ಎರಡು ಕುಟುಂಬಕ್ಕೆ ಕಾನೂನು ತೊಡಕು ಎದಿರಾಗಿತ್ತು. ಹೈಕೋರ್ಟ್ ಸೂಚನೆ ಹಾಗೂ ಸರ್ಕಾರದ ವಿಶೇಷ ಆಸಕ್ತಿ ಯಿಂದ ಪರಿಹಾರ ಈಗ ನೀಡಿದಂತಾಗಿದೆ. 9 ಜನರ ಶವ ಸಿಕ್ಕ ತಕ್ಷಣ ತಲಾ 5 ಲಕ್ಷ ದಂತೆ 45 ಲಕ್ಷ ಪರಿಹಾರ ಮೊದಲೇ ವಿತರಿಸಲಾಗಿತ್ತು. ಇಂದು ಜಗನ್ನಾಥ ನಾಯ್ಕ ಕುಟುಂಬಕ್ಕೆ ಐದು ಲಕ್ಷ, ಲೋಕೇಶ್ ನಾಯ್ಕ ಸಹೋದರ ನಿಗೆ 5 ಲಕ್ಷ ಪರಿಹಾರ ನೀಡಲಾಯಿತು. ಜಗನ್ನಾಥ ನಾಯ್ಕನ ಇಬ್ಬರು ಹೆಣ್ಣು ಮಕ್ಕಳಿಗೆ ಸರ್ಕಾರಿ ನೌಕರಿ ಸಹ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕೈಗಾ ದಲ್ಲಿ ಜಗನ್ನಾಥ ನಾಯ್ಕ ಮಕ್ಕಳು ನೌಕರಿ ಪಡೆದಿದ್ದಾರೆ ಎಂಬುದು ಗಮನಾರ್ಹ.ಜಗನ್ನಾಥ ನಾಯ್ಕ ಪತ್ನಿ ಹಾಗೂ ಲೋಕೇಶ್ ನಾಯ್ಕ ಸಹೋದರ ತಲಾ ಐದು ಲಕ್ಷ ಪರಿಹಾರ ಪಡೆಯುವಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಉಪಸ್ಥಿತರಿದ್ದರು.......