ಡೆಟ್ರಾಯ್ಟ್ ನಗರದಲ್ಲಿ ವಿಜೃಂಭಣೆಯಿಂದ 47ನೇ ವಿ.ಎಸ್.ಎನ್.ಎ ಮತ್ತು ಬಸವ ಜಯಂತಿ ಸಮಾವೇಶ
ಡೆಟ್ರಾಯ್ಟ್ ನಗರದಲ್ಲಿ ವಿಜೃಂಭಣೆಯಿಂದ 47ನೇ ವಿ.ಎಸ್.ಎನ್.ಎ ಮತ್ತು ಬಸವ ಜಯಂತಿ ಸಮಾವೇಶ
ದಾವಣಗೇರಿ 06 :.ಅಮೆರಿಕಾದ ಡೆಟ್ರಾಯ್ಟ್ ನಗರದಲ್ಲಿ ವೀರಶೈವ ಸಮಾಜ ಉತ್ತರ ಅಮೆರಿಕ (ಗಿಖಓಂ) ಆಯೋಜಿಸಿದ 47ನೇ ವಾರ್ಷಿಕ ಸಮಾವೇಶ ಹಾಗೂ ಪವಿತ್ರ ಬಸವ ಜಯಂತಿ ಮಹೋತ್ಸವ ಭಕ್ತಿ-ವೈಭವದಿಂದ ಜರುಗಿತು.ಈ ಮಹಾಸಮ್ಮೇಳನದಲ್ಲಿ ಪಂಚಮಸಾಲಿ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ತಮ್ಮ ದಿವ್ಯ ಸಾನ್ನಿಧ್ಯದಿಂದ ಸದ್ಭಕ್ತರಿಗೆ ಆತ್ಮಶಕ್ತಿಯ ಬಾಳಿನ ಬೋಧನೆ ನೀಡಿದರು. ಶ್ರೀಮನ್ ಕೆಎಲ್‌ಇ ಸಂಸ್ಥೆಯ ಚೈರ್ಮನ್ ಶ್ರೀ ಪ್ರಭಾಕರ್ ಕೋರೆ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಶ್ರೀ ಜಗದೀಶ ಶೆಟ್ಟರ್, ಮಾಜಿ ಸಚಿವ ಶ್ರೀ ಮುರುಗೇಶ ನಿರಾಣಿ, ಶ್ರೀ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರು ಶ್ರೀ ಪ್ರದೀಪ್ ಶೆಟ್ಟರ್, ಶ್ರೀ ಕೆ. ನವೀನ್, ಇತರ ಗಣ್ಯರು ಉಪಸ್ಥಿತರಿದ್ದರು.ಈ ಸಂತಸಪೂರ್ಣ ಸಂದರ್ಭದಲ್ಲಿ, ವಿ.ಎಸ್.ಎನ್.ಎ ಅಧ್ಯಕ್ಷ ತುಮಕೂರು ದಯಾನಂದ ಅವರು, ಸಮ್ಮೇಳನ ಅಧ್ಯಕ್ಷ ಶ್ರೀ ಮಹೇಶ ಪಾಟೀಲ ಹಾಗೂ ಸಾವಿರಾರು ವೀರಶೈವ-ಲಿಂಗಾಯತ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು. ಬಸವ ತತ್ತ್ವ, ಶರಣ ಸಂಸ್ಕೃತಿ ಮತ್ತು ಲಿಂಗಾಯತ ಪರಂಪರೆಯ ವಿಶಾಲತೆಯನ್ನು ವಿಶ್ವಮಟ್ಟದಲ್ಲಿ ಪಸರಿಸುವ ಉದ್ದೇಶದಿಂದ ಈ ಸಮಾವೇಶ ಅತ್ಯಂತ ಯಶಸ್ವಿಯಾಗಿ ನೆರವೇರಿತು