ಮಹಲಿಂಗಪುರ

1992-1995 ನೇ ಸಾಲಿನ ಗುರುನಮನ, ಸ್ನೇಹಮಿಲನ ನಾಳೆ

1992-1995 ನೇ ಸಾಲಿನ ಗುರುನಮನ, ಸ್ನೇಹಮಿಲನ ನಾಳೆ

ಮಹಾಲಿಂಗಪುರ: ಪಟ್ಟಣದ ಎಸ್ಸಿಪಿ ಪ್ರೌಢಶಾಲೆಯ 1992-1995 ನೇ ಸಾಲಿನ ವಿದ್ಯಾರ್ಥಿಗಳು ಅ.8 ರಂದು ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಗುರುನಮನ, ಮತ್ತು ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಕಾರ್ಯಕ್ರಮದ ಹಿನ್ನೆಲೆ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಿದ್ಯಾರ್ಥಿಗಳು ಈ ಕುರಿತು ಮಾಹಿತಿ ನೀಡಿದರು.ಅ.7 ರಂದು ಸಂಜೆ 5 ಗಂಟೆಗೆ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 8 ರಂದು ಬೆಳಿಗ್ಗೆ 9 ಗಂಟೆಗೆ ತಮಗೆ ಕಲಿಸಿದ ಎಲ್ಲ ಶಿಕ್ಷಕರನ್ನು ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ವೇದಿಕೆವರೆಗೆ ವಾದ್ಯಗಳೊಂದಿಗೆ ಬರಮಾಡಿಕೊಳ್ಳಲಾಗುವುದು. 10.30ಕ್ಕೆ ಗುರುನಮನ ಹಾಗೂ ಸ್ನೇಹಮಿಲನ ಕಾರ್ಯಕ್ರಮ ನಡೆಯಲಿದೆ' ಎಂದು ಹೇಳಿದ್ದಾರೆ.ಬಸವರಾಜ ಚಮಕೇರಿ,ಮಹೇಶ ಸುಣಧೋಳಿ, ಸುದರ್ಶನ ಹಿಕಡಿ, ಮಲ್ಲಪ್ಪ ಯರಡ್ಡಿ, ಶಿವಾನಂದ ಉಳ್ಳಾಗಡ್ಡಿ, ಸಿದ್ದು ಚಿಂಚಲಿ, ಪ್ರವೀಣ ಹೆಗ್ಗಾಣಿ, ಶಂಕರಗೌಡ ಪಾಟೀಲ, ಮಹೇಶ ಹುಬ್ಬಳ್ಳಿ, ರವಿ ಬಿದರಿ ಇನ್ನು ಹಲವರು ಉಪಸ್ಥಿತರಿದ್ದರು.

ಸುದ್ದಿ ಓದಿ