1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ  

ಬೀದರ್ 15 : ಜನರು ಮನವಿ ನೀಡಿದರೆ ಸಾಕು ಅದರೊಂದಿಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ಮಾಡುವುದಕ್ಕೆ  ಸದಾ ಬದ್ಧನಾಗಿದ್ದೇನೆ ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಧ್ಯೇಯ. ಸ್ವಚ್ಛ ಆಡಳಿತ ನೀಡುವುದೆ ನನ್ನ ಗುರಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ ಗ್ರಾಮದಿಂದ  ಮಲ್ಕಾಪುರ ವಾಯಾ ದೇವ ದೇವ ವನ ವರೆಗಿನ ಸುಮಾರು 1 ಕೋಟಿ ರೂ. ವೆಚ್ಚದ  ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.  


ನನ್ನ ಮತಕ್ಷೇತ್ರದಲ್ಲಿ  ಸರ್ಕಾರಿ ಶಾಲೆಗಳಲ್ಲಿ ಕೊಠಡಿ,  ಶೌಚಾಲಯ, ಕಾಂಪೌಂಡ್ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಭವನ, ಸಾರ್ವಜನಿಕ ಶೌಚಾಲಯ, ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಹೆಚ್ಚಿನ   ಆದ್ಯತೆ ನೀಡುತ್ತಿರುವೆ.  ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತವೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತದೆ ಎಂದರು.  ಬೀದರ್ ದಕ್ಷಿಣ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮುಖೇನ ಕ್ಷೇತ್ರದ ಜನರ  ತೀರಿಸುವಂತಹ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆಂದು ತಿಳಿಸಿ ಕಾಮಗಾರಿ ಉತ್ತಮವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 


ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಬಾಬುರಾವ ಮಲ್ಕಾಪುರೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಸುಲ್ತಾನಪುರ, ಗ್ರಾಪಂ ಸದಸ್ಯರಾದ ದಾವುದು ತೇಲಿ, ಮಲ್ಲಮ್ಮ ಹೂಗಾರ, ಸಚೀನ ಮಲ್ಕಾಪುರ, ಮುಖಂಡರಾದ ಸಂತೋಷ್ ಸಣ್ಣಗೊಂಡ, ಬಾಬು ಬರಿದಬಾದೆ,  ಓಂಕಾರ, ಸಂಜು ಭಂಡೆ, ಅನೀಲ ತಿಪ್ಪರಗಿ, ನಾಗಮ್ಮ ಹೂಗಾರ, ಸುಧಾಕರ,  ಗುಂಡಪ್ಪ,  ರಾಹುಲ್, ಸಂಗಮೇಶ ಹಳ್ಳಿ, ಶಿವಕುಮಾರ ನಾಗಲಗಿದ್ದಿ, ಕುಶಲರಾವ, ದೀಲಿಪ್ ಗುಮ್ಮಾ, ಶೇಖರ್ ಕೋಳಾರ, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ