ಡಿಸೆಂಬರ್ನಲ್ಲಿ 1.77 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ
ಡಿಸೆಂಬರ್ನಲ್ಲಿ 1.77 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ
ನವದೆಹಲಿ 01: ಸರಕು ಮತ್ತು ಸೇವಾ ತೆರಿಗೆ ಮೂಲಕ 2024ರ ಡಿಸೆಂಬರ್ನಲ್ಲಿ 1.77 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. 2023ರ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ 7.3ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಕೇಂದ್ರ ಜಿಎಸ್ಟಿ 32,836 ಕೋಟಿ, ರಾಜ್ಯ ಜಿಎಸ್ಟಿ 40,499 ಕೋಟಿ, ಸಮಗ್ರ ಜಿಎಸ್ಟಿ 47,783 ಕೋಟಿ ಹಾಗೂ ಸೆಸ್ ರೂಪದಲ್ಲಿ 11,471 ಕೋಟಿ ಸಂಗ್ರಹವಾಗಿದೆ.
ದೇಶೀಯ ವಹಿವಾಟು ಮೇಲಿನ ಜಿಎಸ್ಟಿ 1.32 ಲಕ್ಷ ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಶೇ 8.4ರಷ್ಟು ಏರಿಕೆಯಾಗಿದೆ. ಆಮದು ಮೇಲಿನ ಸಂಗ್ರಹದಲ್ಲಿ ಶೇ 4ರಷ್ಟು ಏರಿಕೆಯಾಗಿದ್ದು, 44,268 ಕೋಟಿ ಸಂಗ್ರಹವಾಗಿದೆ.ನವೆಂಬರ್ನಲ್ಲಿ 1.82 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. ಏಪ್ರಿಲ್ನಲ್ಲಿ 2.10 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದ್ದು, ದಾಖಲೆಯಾಗಿದೆ.
ಡಿಸೆಂಬರ್ನಲ್ಲಿ 22,490 ಕೋಟಿ ಮರುಪಾವತಿ ಮಾಡಲಾಗಿದೆ. 2023ರ ಇದೇ ಅವಧಿಗೆ ಹೋಲಿಸಿದರೆ ಶೇ 31ರಷ್ಟು ಹೆಚ್ಚಳವಾಗಿದೆ. ಮರುಪಾವತಿ ಬಳಿಕ ನಿವ್ವಳ ವರಮಾನ ಸಂಗ್ರಹವು 1.54 ಲಕ್ಷ ಕೋಟಿ ಆಗಿದೆ.