ರಿಕ್ಷಾ ನಿಲ್ದಾಣಕ್ಕೆ ಮಾಜಿ ಪುರಸಭಾಧ್ಯಕ್ಷ, ಹಾಲಿ ಸದಸ್ಯ ಅಂಗಡಿ ಚಾಲನೆ
ಲೋಕದರ್ಶನ ವರದಿ
ಮಹಾಲಿಂಗಪುರ 10: ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಸಾಯಿ ಸರ್ಕಲ್ ಬಳಿ ವಿನೂತನವಾಗಿ ರಿಕ್ಷಾ ನಿಲ್ದಾಣಕ್ಕೆ ಮಾಜಿ ಪುರಸಭಾಧ್ಯಕ್ಷ ಹಾಗೂ ಹಾಲಿ ಸದಸ್ಯ ಶೇಖರ ಅಂಗಡಿ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಅವರು ಮಹಾಲಿಂಗಪುರದ ಬಸ್ ನಿಲ್ದಾಣ, ಕೃಷಿ ಉತ್ಪನ್ನ ಮಾರುಕಟ್ಟೆ, ಮಂಗಳವಾರ ಹಾಗೂ ದಿನನಿತ್ಯ ಜರುಗುವ ಕಾಯಿಪಲ್ಲೆ ಮಾರುಕಟ್ಟೆಯ ಸಂತೆ ಪೇಟೆಗಳು, ಬಸವೇಶ್ವರ ವೃತ್ತ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ಪಟ್ಟಣದ ಮತ್ತು ಮಡ್ಡಿ ಮಹಾಲಿಂಗೇಶ್ವರ ದೇವಸ್ಥಾನಗಳು, ಬುದ್ನಿ ಪಿಡಿ ಅಲ್ಲದೇ ಶಾಲಾ-ಕಾಲೇಜುಗಳು ಅಂದಾಜು ಎರಡುವರೆ ಕಿಲೋಮೀಟರ್ ಗಳ ಅಂತರದಲ್ಲಿವೆ, ಕಾರಣ ಬೇರೆ ಊರಿನಿಂದ ಬರುವ ಸಾರ್ವಜನಿಕರು ಹಾಗೂ ಸ್ಥಳೀಯರಿಗೆ ಈ ರಿಕ್ಷಾ ನಿಲ್ದಾಣ ಸಮಯದ ಉಳಿತಾಯವನ್ನು ಒದಗಿಸಿ ವರದಾನವಾಗಲಿದೆ ಮತ್ತು ಆಟೋರಿಕ್ಷಾ ಮಾಲೀಕರಿಗೆ ಸಹಕರಿಸಿ ಸಹಕಾರ ನೀಡಬೇಕೆಂದು ಬಡಾವಣೆಯ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ಮಹಾಲಿಂಗ ಶಿವನಗಿ, ಲಕ್ಷ್ಮಣ ಪಾತ್ರೋಟ, ಮುತ್ತಪ್ಪ ಕುಂದ್ರಾಳ, ಗಂಗಪ್ಪ ದಿನ್ನಿಮನಿ, ಕಾಶಿಮ ಹಳಿಂಗಳಿ, ತಿಪ್ಪಣ್ಣ ಬಂಡಿವಡ್ಡರ, ರಾಘವೇಂದ್ರ ದಿನ್ನಿಮನಿ, ಮಲ್ಲಪ್ಪ ಕಂಪು, ಗೌಸ ತಹಶೀಲ್ದಾರ, ಚೆನ್ನಪ್ಪ ರಾಮೋಜಿ ಇನ್ನು ಮುಂತಾದವರಿದ್ದರು.