ವೈರಲ್ ಆಗುತ್ತಿರುವ ‘ಕೆಡಿ’ ಚಿತ್ರದ ‘ಶಿವ ಶಿವ ...’ ಸಾಂಗ್

ವೈರಲ್ ಆಗುತ್ತಿರುವ ‘ಕೆಡಿ’ ಚಿತ್ರದ ‘ಶಿವ ಶಿವ ...’ ಸಾಂಗ್

ವೈರಲ್ ಆಗುತ್ತಿರುವ ‘ಕೆಡಿ’ ಚಿತ್ರದ ‘ಶಿವ ಶಿವ ...’ ಸಾಂಗ್ 

ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ‘ಜೋಗಿ’ ಪ್ರೇಮ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹು ನೀರೀಕ್ಷಿತ ‘ಕೆಡಿ’ ಚಿತ್ರದ ‘ಶಿವ ಶಿವ ...’ ಎಂಬ ಮೊದಲ ಗೀತೆ ಬಿಡುಗಡೆ ಆಗಿದ್ದು, ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಲಿರಿಕಲ್ ಗೀತೆಯನ್ನು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಮಂಜುನಾಥ್ ಬಿ.ಎಸ್ ಸಾಹಿತ್ಯದ ಈ ಗೀತೆಯನ್ನು ‘ಜೋಗಿ’ ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕೆ.ವಿ.ಎನ್‌. ಪ್ರೋಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಅದ್ಭುತವಾದ ಶಿವ ಶಿವ ಗೀತೆಯಲ್ಲಿ ನಾಯಕನಾದ ಧ್ರುವ ಸರ್ಜಾ, ನಾಯಕಿ ರೀಷ್ಮಾ ನಾಣಯ್ಯ ಹಾಗೂ ನೃತ್ಯ ಕಲಾವಿದರು ಜಬರ್‌ದಸ್ತ್‌ ಹೆಜ್ಜೆ ಹಾಕಿದ್ದಾರೆ.. ಚಿತ್ರದ ತಾರಾಗಣದಲ್ಲಿ ವಿ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ತ, ಶಿಲ್ಪ ಶೆಟ್ಟಿ, ನೋರಾ ಫತೇಹಿ, ಯಶ್ ಶೆಟ್ಟಿ ಮುಂತಾದ ಸ್ಟಾರ್ ಕಲಾವಿದರಿದ್ದಾರೆ.  

ಅಂದಂಗೆ ಈ ಗೀತೆ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ರೀಲೀಸ್ ಆಗಿದೆ. ತೆಲುಗು ಹಾಡನ್ನು ನಿರ್ದೇಶಕ ಹರೀಶ್ ಶಂಕರ್, ತಮಿಳು ಗೀತೆಯನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಹಾಗೂ ಕನ್ನಡ ಗೀತೆಯನ್ನು ಬಾಲಿವುಡ್ ನಟ ಅಜಯ್ ದೇವಗನ್ ಬಿಡುಗಡೆ ಮಾಡಿದ್ದಾರೆ. 


ಸುದ್ದಿ ಓದಿ