‘ನಾ ನಿನ್ನ ಬಿಡಲಾರೆ’ ಬಿಡುಗಡೆಗೆ ಮುಹೂರ್ತ ನಿಗದಿ ನವೆಂಬರ್ 29ರಂದು ಪ್ರೇಕ್ಷಕರ ಮುಂದೆ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ
‘ನಾ ನಿನ್ನ ಬಿಡಲಾರೆ’ ಬಿಡುಗಡೆಗೆ ಮುಹೂರ್ತ ನಿಗದಿ ನವೆಂಬರ್ 29ರಂದು ಪ್ರೇಕ್ಷಕರ ಮುಂದೆ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ
ಉತ್ತರ ಕರ್ನಾಟಕ ಪ್ರತಿಭೆ ಅಂಬಾಲಿ ಭಾರತಿ ನಟಿಸಿ, ನಿರ್ಮಾಣ ಮಾಡಿರುವ ಚಿತ್ರ ‘ನಾ ನಿನ್ನ ಬಿಡಲಾರೆ’. ಅಂದು ಅನಂತ್‌ನಾಗ್ ಲಕ್ಷ್ಮೀ ಕಾಂಬಿನೇಷನ್‌ನಲ್ಲಿ ಬಂದ ಎವರ್ ಗ್ರೀನ್ ಚಿತ್ರ. ಇದೀಗ ಅದೇ ಟೈಟಲ್ ಇಟ್ಟೊಂಡು, ಈ ಕಾಲಕ್ಕೆ ತಕ್ಕ, ಸಸ್ಪೆನ್ಸ್, ಥ್ರಿಲ್ಲರ್ ಕಂಟೆಂಟ್‌ನ ಹೊಸ ತಂಡ ಹೊಸ ಆಯಾಮದಲ್ಲಿ ಕನ್ನಡ ಪ್ರೇಕ್ಷಕರೆದುರಿಗೆ ಬರ್ತಿದೆ. ಈಗಾಗಲೇ ಟೀಸರ್ ನಿಂದ ಕುತೂಹಲ ಮೂಡಿಸಿದ್ದ, ಈ ಚಿತ್ರತಂಡ ಸಿಂಗಲ್ ಟೀಸರ್‌ನಿಂದ್ಲೇ ನೀರೀಕ್ಷೆ ಹುಟ್ಟಿಸಿತ್ತು. ಅದ್ರಂತೆ ಇದೀಗ ಪ್ರೇಕ್ಷಕರೆದುರಿಗೆ ಬರೋದಕ್ಕೆ ದಿನಾಂಕ ನಿಗದಿ ಮಾಡಿದೆ. ಹೌದು ಇದೇ ನವೆಂಬರ್ 29ಕ್ಕೆ ‘ನಾ ನಿನ್ನ ಬಿಡಲಾರೆ’ ಚಿತ್ರ ಪ್ರೇಕ್ಷಕರೆದುರಿಗೆ ಬರ್ತಿದೆ. ಲೈಲಾಕ್ ಎಂಟರ್ಟೈನ್ಮೆಂಟ್‌ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸುತ್ತಿದ್ದಾರೆ.
ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ ನಿರ್ಮಿಸಿರೋ ‘ನಾ ನಿನ್ನ ಬಿಡಲಾರೆ’ ಚಿತ್ರವನ್ನ ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ. ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾ ರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಟೈಟಲ್ ಪೋಸ್ಟರ್ ಟೀಸರ್ ನಿಂದ್ಲೇ ಕನ್ನಡ ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ‘ನಾ ನಿನ್ನ ಬಿಡಲಾರೆ’ ಚಿತ್ರತಂಡ ಇದೀಗ ಪ್ರಚಾರ ಕಾರ್ಯ ಶುರು ಮಾಡಿದ್ದು, ಸದ್ಯದಲ್ಲೇ ಎರಡು ಹಾಡು ಹಾಗೂ ಚಿತ್ರ ಥಿಯೇಟರಿಕಲ್ ಟ್ರೇಲರ್‌ನ್ನು ರೀಲೀಸ್ ಮಾಡೋ ಪ್ಲಾನ್ ಮಾಡಿದೆ.