ಢಪಳಾಪುರ ಶಾಲೆಯಲ್ಲಿ "ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಕಲಿಕೆಯ ಚಿಂತನೆ"
ಢಪಳಾಪುರ ಶಾಲೆಯಲ್ಲಿ "ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಕಲಿಕೆಯ ಚಿಂತನೆ"
ಮಹಾಲಿಂಗಪುರ 26: ನಗರದ ಢಪಳಾಪುರ ವಿದ್ಯಾ ವಿಹಾರ ಸಿ.ಬಿಎಸ್.ಸಿ ಶಾಲೆಯಲ್ಲಿ ಶುಕ್ರವಾರರಂದು ಸನದಿ ಇಂಟರ್ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ಮಹೇಶ ಕಡಕ್ಕಲಕಠ ಹಾಗೂ ಬೆಳಗಾವಿಯ ಲವ್ ಡೆಲ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ಲಕ್ಷ್ಮೀ ಇಂಚಲ್ ಅವರ ನೇತೃತ್ವದಲ್ಲಿ "ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಕಲಿಕೆಯ ಚಿಂತನೆಯ" ಕುರಿತು ಕಾರ್ಯಾಗಾರವು ನಡೆಯಿತು.
ಈ ಕಾರ್ಯಾಗಾರದಲ್ಲಿ ತರಬೇತಿದಾರರು ಶೈಕ್ಷಣಿಕವಾಗಿ ಯಾವ ರೀತಿಯಾಗಿ ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆಯನ್ನು ಶಿಕ್ಷಕರು ಒಳಗೊಂಡಿರಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
21ನೇ ಶತಮಾನದಲ್ಲಿನ ಬೋಧನೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಅನುಕೂಲವಾಗುವಂತಹ ಮಾರ್ಗದರ್ಶನವನ್ನು ನೀಡಿದರು. ಈ ಒಂದು ತರಬೇತಿಯಲ್ಲಿ ಮಹಾಲಿಂಗಪುರ,ಮುಧೋಳ, ಸಮೀರವಾಡಿ, ವಿಜಯಪುರ,ಲೋಕಪುರ ಹಾಗೂ ಇನ್ನಿತರ ಶಾಲೆಗಳಿಂದ ಶಿಕ್ಷಕರು ಆಗಮಿಸಿ ಕಾರ್ಯಗಾರ ತರಬೇತಿಯನ್ನು ಯಶಸ್ವಿಗೊಳಿಸಿದರು.
ಸ್ಥಳೀಯ ಶಾಲೆಯ ನಿರ್ದೇಶಕಿ ಯವರಾದ ಕವಿತಾ ಢಪಳಾಪುರ ಉಪಸ್ಥಿತರಿದ್ದು ಸ್ಪರ್ಧಾತ್ಮಕ ಕ್ಷೇತ್ರಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಪ್ರಸ್ತುತವಾಗಿ ನಮ್ಮ ವಿದ್ಯಾಲಯದಲ್ಲಿ ಹಮ್ಮಿಕೊಳ್ಳುತ್ತಿರುವ ಕಾರ್ಯಗಾರಗಳು ಯುವ ಶಿಕ್ಷಕರಲ್ಲಿ ಹೊಸ ಕಲಿಕೆಗೆ ಚೈತನ್ಯವನ್ನು ತುಂಬುತ್ತಿವೆ ಎಂದು ಹೇಳಿದರು.
ಮಾನಸ ಶಿಕ್ಷಕಿ ಕಾರ್ಯಕ್ರಮವನ್ನು ನಿರೂಪಿಸಿದರು, ವೀಣಾ ವಂದನಾರೆ್ಣ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಲೂಯಿಸ್ ಅವರು ಸ್ವಾಗತಿಸಿದರು ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕಿ,ಶಿಕ್ಷಕರು ಭಾಗಿಯಾಗಿದ್ದರು.