ಸರ್ ಸಿದ್ದಪ್ಪ ಕಂಬಳಿಯವರ 145 ನೇ ಜಯಂತ್ಯುತ್ಸವ
ಲೋಕದರ್ಶನ ವರದಿ
ಸರ್ ಸಿದ್ದಪ್ಪ ಕಂಬಳಿಯವರ 145 ನೇ ಜಯಂತ್ಯುತ್ಸವ
ಧಾರವಾಡ 12: ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ಹಾಗೂ ಕರ್ನಾಟಕ ಕಾಲೇಜು ಸಹಯೋಗದಿಂದ ಸರ್ ಸಿದ್ದಪ್ಪ ಕಂಬಳಿಯವರ 145 ನೇ ಜನುಮದಿನವನ್ನು ಕರ್ನಾಟಕ ಕಾಲೇಜು ಆವರಣದಲ್ಲಿರುವ ಸರ್ ಸಿದ್ದಪ್ಪ ಕಂಬಳಿಯವರ ಮೂರ್ತಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಲಾಯಿತು. ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಶ್ವನಾಥ ರವರು ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಕುರಿತು ಮಾತನಾಡಿದರು. ನಂತರ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾದ ಈರಣ್ಣ ಮುಳುಗುಂದ ರವರು ಸರ್.ಕಂಬಳಿಯವರ ಜೀವನ ಮತ್ತು ಸಾಧನೆ ಕುರಿತು ವಿವರವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಶಶಿಧರ ತೋಡಕರ ವಹಿಸಿದ್ದರು, ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಮರದ, ನಾಗರಾಜ ಪಟ್ಟಣಶೆಟ್ಟಿ, ಪ್ರದೀಪ ಎಂ.ಪಾಟೀಲ, ಬಸವರಾಜ ಶಿ.ಗೋಲಪ್ಪನವರ, ಡಾ.ಮಹಾಂತೇಶ ಕಮ್ಮಾರ, ಡಿ.ಎಂ.ನಿಡವಣಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಗೀರೀಶ ಕಾಂಬಳೆ, ವೀರಣ್ಣ ಒಡ್ಡಿನ, ಡಾ.ಸುವರ್ಣಾ ಎಲ್.ಬಿರಾದಾರ, ಪ್ರಕಾಶ ಭಾವಿಕಟ್ಟಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಮುಂತಾದವರು ಉಪಸ್ಥಿತರಿದ್ದರು.