ಅಪ್ಪು 50ನೇ ಪುಣ್ಯಾರಾಧನೆ ಪುನೀತ್ ಸ್ಮರಣೆಯಲ್ಲಿ ಪುನೀತನಾದ ಅಭಿಮಾನಿ ಶಾಲಾ ಮಕ್ಕಳಿಗೆ ಹೋಳಿಗೆ ಊಟ ಹಾಕಿಸಿದ
ಲೋಕದರ್ಶನ ವರದಿ
ಅಪ್ಪು 50ನೇ ಪುಣ್ಯಾರಾಧನೆ
ಪುನೀತ್ ಸ್ಮರಣೆಯಲ್ಲಿ ಪುನೀತನಾದ ಅಭಿಮಾನಿ ಶಾಲಾ ಮಕ್ಕಳಿಗೆ ಹೋಳಿಗೆ ಊಟ ಹಾಕಿಸಿದ
ಮಹಾಲಿಂಗಪುರ, 19 : ಹುಟ್ಟುಹಬ್ಬಕ್ಕೆ ವರುಷಗಳು ಬದಲಾದರೂ ವ್ಯಕ್ತಿ ಹಾಗೆ ಉಳಿಯುವುದು ತುಂಬಾ ಅಪರೂಪ. ಅಂಥಾ ಅಪರೂಪದಲ್ಲಿ ನೀನು ಒಬ್ಬ, ನೀನೇ ಒಬ್ಬ. ಮಗುವಲ್ಲಿ ನಿನ್ನ ಎತ್ತಿ ಮುದ್ದಾಡುವಾಗ ಇದ್ದ ನಿನ್ನ ನಗು ಇಂದಿಗೂ ಮಾಸದೆ ನಿನ್ನಲ್ಲಿ ಹಾಗೆ ಉಳಿದಿದೆ.ಇಡೀ ಪ್ರಪಂಚಕ್ಕೆ ನಗು ಮಾಸದ ರಾಜಕುಮಾರ ಅವರೇ ಪುನೀತರಾಜಕುಮಾರ. ಇನ್ನೂ ನೂರು ವರ್ಷವಾದರೂ ಅದು ಬದಲಾಗದು.
ಯುವಕರ ಪಾಲಿನ ಕಣ್ಮಣಿ ಕನ್ನಡ ಚಿತ್ರರಂಗದ ಪವರ ಸ್ಟಾರ ಅಣ್ಣಾವ್ರ ಮುದ್ದಿನ ಮಗ ಪುನೀತ ರಾಜಕುಮಾರ ಅವರ ಸಮಾಜಮುಖಿ ಕೆಲಸಕ್ಕೆ ರಾಜ್ಯದ ಜನತೆ ಮನಸೋತು ಅವರ ಹುಟ್ಟುಹಬ್ಬವನ್ನು ಸ್ವಯಂ ಪ್ರೇರಿತರಾಗಿ ನಾಡಿನಾದ್ಯಂತ ಆಚರಿಸುತ್ತಿರುವುದೇ ಅವರು ಜನರ ಮನಸ್ಸಿನಲ್ಲಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.
ಅವರು ಆರು ತಿಂಗಳು ಮಗುವಿದ್ದಾಗಲೇ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿ ಅಚ್ಚರಿ ಮೂಡಿಸಿದರು. ಬಾಲ ನಟನಾಗಿ ಅಭಿನಯಿಸಿ ನಾಯಕ ನಟನಾಗಿ 32 ಚಿತ್ರಗಳಲ್ಲಿ ನಟಿಸಿ ಕರುನಾಡ ಜನರ ಮನಸುರೆಗೊಂಡ ಅದ್ಭುತ ಕಲಾವಿದ. ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಾಲ್ಕು ಕರ್ನಾಟಕ ರಾಜ್ಯಚಲನಚಿತ್ರ ಪ್ರಶಸ್ತಿಗಳು, ಆರು ಫಿಲ್ಮಫೇರ್ ಪ್ರಶಸ್ತಿಗಳು, ಮತ್ತು ಐದು ಟಚಿ ಪ್ರಶಸ್ತಿಗಳು ಅವರ ಮೂಡಿಗೆರಿವೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ.ಕರ್ನಾಟಕ ಸರ್ಕಾರ ನವೆಂಬರ್ 1 2022 ರಂದು ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ "ಕರ್ನಾಟಕ ರತ್ನ" ನೀಡಿ ಗೌರವಿಸಿದೆ.
ಹಿನ್ನಲೆ ಗಾಯಕ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ, ಲೋಕೋಪಕಾರಿ, ಪ್ರಸಿದ್ಧ ನಟ,ಮ್ಯಾಟಿನಿ ಆರಾಧ್ಯ
ನಟ ಪುನೀತ ರಾಜಕುಮಾರ ಅವರ 50 ನೇ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಿ ಅಭಿಮಾನದ ಪರಾಕಾಸ್ಟೇ ಮೆರೆದ ಅಪ್ಪಟ ಅಪ್ಪು ಅಭಿಮಾನಿ ಸಮೀಪದ ಕೆಸರಗೋಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸರಗೋಪ್ಪದ ಎಸ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಪುನೀತ ರಾಜಕುಮಾರ ಅವರ ಅಪ್ಪಟ ಅಭಿಮಾನಿಯಾದ ಶ್ರೀ ಮುತ್ತು ವಾಸಪ್ಪ ಪೂಜಾರಿ, ಅವರು ಅಪ್ಪು ಅವರ ಹುಟ್ಟುಹಬ್ಬ ಆಚರಿಸಿದರು.
ಪವರ್ ಸ್ಟಾರ್ ಪುನೀತ ರಾಜಕುಮಾರ ಅವರ 50 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಶಾಲೆಯ ಸುಮಾರು 200 ಮಕ್ಕಳಿಗೆ ಮತ್ತು ಎಲ್ಲ ಸಿಬ್ಬಂದಿಗೆ ಹೋಳಿಗೆ ಊಟ ಮಾಡಿಸಿದ್ದರು. ಮಕ್ಕಳು ಖುಷಿಯಿಂದ ಹೋಳಿಗೆ ರುಚಿಯನ್ನು ಸವಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಚೆನ್ನು ದೇಸಾಯಿ, ವಿಠ್ಠಲ ಢವಳೇಶ್ವರ, ಎಸ್ ಡಿ ಎಮ್ ಸಿ ಪದಾಧಿಕಾರಿಗಳು, ಮುಖ್ಯ ಗುರುಗಳು, ಸಿಬ್ಬಂದಿ ವರ್ಗ ಹಾಗೂ ಅಡುಗೆ ಸಿಬ್ಬಂದಿ ಹಾಜರಿದ್ದರು.