ಮಹಲಿಂಗಪುರ

ಕ್ಯಾಂಪಸ್ ಸಂದರ್ಶನದಲ್ಲಿ ಕೆಎಲ್‌ಇ ಪಾಲಿಟೆಕ್ನಿಕ್‌ನ 77 ವಿದ್ಯಾರ್ಥಿಗಳು ಆಯ್ಕೆ

ಕ್ಯಾಂಪಸ್ ಸಂದರ್ಶನದಲ್ಲಿ ಕೆಎಲ್‌ಇ ಪಾಲಿಟೆಕ್ನಿಕ್‌ನ 77 ವಿದ್ಯಾರ್ಥಿಗಳು ಆಯ್ಕೆ

ಮಹಾಲಿಂಗಪುರ 29: ಸ್ಥಳೀಯ ಕೆಎಲ್‌ಇ ಡಿಪ್ಲೋಮಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಲಿಯುವಾಗಲೇ ಉದ್ಯೋಗ ಪಡೆಯುವ ಸೌಭಾಗ್ಯ ಸಂಸ್ಕೃತಿ ಹೆಚ್ಚಾಗುತ್ತಿದೆ. 15 ವರ್ಷಗಳ ಹಿಂದೆ ಆರಂಭವಾಗಿ ಬೆಲ್ಲದ ನಾಡಿನಲ್ಲಿ ತಾಂತ್ರಿಕ ಶಿಕ್ಷಣದ ಕ್ರಾಂತಿ ಮಾಡಿದ್ದಲ್ಲದೇ ಉದ್ಯೋಗವಕಾಶಗಳನ್ನೂ ಸೃಷ್ಟಿಸಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ.  

ಪ್ರತಿ ವರ್ಷ ಒಂದಿಲ್ಲೊಂದು ಬಹುರಾಷ್ಟ್ರೀಯ ಕಂಪನಿಗಳು ಈ ಕಾಲೇಜಿಗೆ ಆಗಮಿಸಿ ಕ್ಯಾಂಪಸ್ ಸಂದರ್ಶನ ನಡೆಸುತ್ತವೆ. ಅದರಲ್ಲಿ ಭಾಗವಹಿಸಿದ ಶೆ.90 ರಷ್ಟು ವಿದ್ಯಾರ್ಥಿಗಳು ನೌಕರಿಗೆ ಆಯ್ಕೆಯಾಗುತ್ತಾರೆ. ಕೆಲವೊಮ್ಮೆ ಶೇ.100 ರಷ್ಟು ಆಯ್ಕೆಯಾಗಿದ್ದೂ ಉಂಟು.  

ಇತ್ತೀಚೆಗೆ ಜಪಾನ್ ಮೂಲದ ಫುಕೊಕು ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬಹುರಾಷ್ಟ್ರೀಯ ಕಂಪನಿಯೊಂದು ಬೆಳಗಾವಿ ಘಟಕಕ್ಕೆ ಉದ್ಯೋಗಿಗಳು ಬೇಕೆಂದು ಈ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಏರಿ​‍್ಡಸಿತ್ತು. ಅದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ಅಂತಿಮ ವರ್ಷದಲ್ಲಿ ಓದುತ್ತಿರುವ 77 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದೀಗ 5ನೇ ಸೆಮ್ ಪರೀಕ್ಷೆ ಮುಗಿಸಿ 6ನೇ ಸೆಮ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳು ಕಲಿಯುವಾಗಲೇ ನೌಕರಿ ಪಡೆದ ಸಂಭ್ರಮದಲ್ಲಿದ್ದಾರೆ.  

ಕೇಂದ್ರ ಸರಕಾರ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್‌ಪ್ ಇಂಡಿಯಾ ಎಂಬ ಸ್ವಾವಲಂಬಿ ಉತ್ತೇಜಿತ ಯೋಜನೆಗಳನ್ನು ಪರಿಚಯಿಸಿದ್ದರಿಂದ ಭವಿಷ್ಯತ್ತಿನಲ್ಲಿ ತಾಂತ್ರಿಕ ಶಿಕ್ಷಣದಿಂದ ಉಜ್ವಲ ಉದ್ಯೋಗವಕಾಶಗಳಿವೆ. ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡು ತಾಂತ್ರಿಕ ಶಿಕ್ಷಣ ಆಯ್ದುಕೊಂಡ ವಿದ್ಯಾರ್ಥಿಗಳು ಬೇಗ ನೌಕರಿಗೆ ಆಯ್ಕೆಯಾಗಿದ್ದು ಖುಷಿ ತಂದಿದೆ. ಉದ್ದುದ್ದ ಕಲಿತು ಉದ್ಯೋಗ ಸಿಗಲಿಲ್ಲ ಎಂದು ಅಡ್ಡಡ್ಡ ಮಲಗಬೇಡಿ, ಸ್ವಲ್ಪ ಟೆಕ್ನಿಕ್ ಯೂಸ್ ಮಾಡಿ ಟೆಕ್ನಿಕಲ್ ಲೈನ್‌ಗೆ ಬನ್ನಿ, ಡಿಪ್ಲೋಮಾ ಮಾಡಿ ಡಿಪ್ಲೋಮ್ಯಾಟಿಕ್ ಜೀವನ ನಡೆಸಿರಿ ಎಂದು  ಪ್ರಾಚಾರ್ಯ ಎಸ್‌.ಐ.ಕುಂದಗೋಳ ಯುವಕರಿಗೆ ಕರೆ ನೀಡಿದರು. 


ಸುದ್ದಿ ಓದಿ