ಮರುಮೌಲ್ಯಮಾಪನ: ಸೃಷ್ಟಿ ಕಾಲೇಜ್‌ಗೆ ಪ್ರಥಮ, ಜಿಲ್ಲೆಗೆ 5ನೇ ಸ್ಥಾನ

ಮರುಮೌಲ್ಯಮಾಪನ: ಸೃಷ್ಟಿ ಕಾಲೇಜ್‌ಗೆ ಪ್ರಥಮ, ಜಿಲ್ಲೆಗೆ 5ನೇ ಸ್ಥಾನ
ಮರುಮೌಲ್ಯಮಾಪನ: ಸೃಷ್ಟಿ ಕಾಲೇಜ್‌ಗೆ ಪ್ರಥಮ, ಜಿಲ್ಲೆಗೆ 5ನೇ ಸ್ಥಾನ

ಮರುಮೌಲ್ಯಮಾಪನ: ಸೃಷ್ಟಿ ಕಾಲೇಜ್‌ಗೆ ಪ್ರಥಮ, ಜಿಲ್ಲೆಗೆ 5ನೇ ಸ್ಥಾನ 

ಬೆಳಗಾವಿ 29: ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದ ನಂತರ ಬರಬೇಕಾಗಿದ್ದ ಅಂಕ ಬರಲಿಲ್ಲವೆಂದು ನಿರಾಶಳಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿಕೊಂಡ ಆರ್ ಎಲ್ ಎಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸೃಷ್ಟಿ ನಾರಾಯಣ ಅಪಟೇಕರ ಮರುಮೌಲ್ಯಮಾಪನದ ನಂತರ 6ಅಂಕ ಹೆಚ್ಚುವರಿಯಾಗಿ ಪಡೆದು ಕಾಲೇಜ್‌ಗೆ ಪ್ರಥಮ ಹಾಗೂ ಬೆಳಗಾವಿ ಜಿಲ್ಲೆಗೆ 5ನೇ ಸ್ಥಾನ ಪಡೆದುಕೊಂಡಿದ್ದಾಳೆ.      

ಮೊದಲ ಫಲಿತಾಂಶದಲ್ಲಿ ಆಕೆ 600ಕ್ಕೆ 588 ಅಂಕ ಪಡೆದಿದ್ದಳು. ಮರುಮೌಲ್ಯಮಾಪನದ ನಂತರ ಆಕೆ 600ಕ್ಕೆ 594 ಅಂಕ ಪಡೆದು ಯಶಸ್ವಿಯಾಗಿದ್ದಾಳೆ.         

ಮೊದಲ ಫಲಿತಾಂಶದಲ್ಲಿ ಬಯೋಲೋಜಿ ವಿಷಯಕ್ಕೆ 100ಕ್ಕೆ 96 ಅಂಕ ಪಡೆದಿದ್ದರೆ ಮರುಮೌಲ್ಯಮಾಪನದಲ್ಲಿ 4 ಅಂಕ ಹೆಚ್ಚು ಪಡೆದಿದ್ದಾಳೆ, ಅದೇ ರೀತಿ ಇಂಗ್ಲಿಷ್ ಭಾಷೆಯಲ್ಲಿ ಮೊದಲು 95 ಮತ್ತು ನಂತರ 97 ಅಂಕ ಪಡೆದಿದ್ದಾಳೆ. ಸೃಷ್ಟಿಯ ಈ ಸಾಧನೆಗೆ ಕಾಲೇಜ್ ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ಸುದ್ದಿ ಓದಿ