‘ಕನ್ನಡದಲ್ಲಿ ಅನುವಾದಗೊಂಡ ಸೂಫಿ ಕಥೆಗಳ ಸ್ವರೂಪ’
‘ಕನ್ನಡದಲ್ಲಿ ಅನುವಾದಗೊಂಡ ಸೂಫಿ ಕಥೆಗಳ ಸ್ವರೂಪ’
ಹಂಪಿ 07: “ಸೂಫಿ ಸಾಹಿತ್ಯಕ್ಕೆ ತವರೆಂಬುದೇ ಇಲ್ಲ, ಅದು ದೇಶ ಭಾಷೆಗಳನ್ನು ಮೀರಿ ಜಗತ್ತಿನಾದ್ಯಂತ ವ್ಯಾಪಿಸಿದೆ’ ಎಂದು ಸಂಶೋಧಕರಾದ ಖಾಜಾಸಾಬ್ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯ, ಹಂಪಿ ಭಾಷಾಂತರ ಅಧ್ಯಯನ ವಿಭಾಗದಲ್ಲಿ 7ನೇ ಡಿಸೆಂಬರ್ 2024ರ ಶನಿವಾರದಂದು ಹಮ್ಮಿಕೊಂಡಿದ್ದ ‘ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ‘ಕನ್ನಡದಲ್ಲಿ ಅನುವಾದಗೊಂಡ ಸೂಫಿ ಕಥೆಗಳ ಸ್ವರೂಪ’ ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಮುಂದುವರೆದು ‘ಸೂಫಿ ಸಾಹಿತ್ಯ ಪ್ರಪಂಚದಾದ್ಯಂತ ಹಬ್ಬಿಕೊಂಡಿರುವ ಜಾಗಿತಿಕ ಸಾಹಿತ್ಯ ಪ್ರಕಾರ. ಹಾಗಾಗಿ ಈ ಕಥೆಗಳಿಗೆ ಮೂಲ ಎಂಬುದೇ ಇಲ್ಲ, ಇದರ ತವರು ಇಂಥಹ ನೆಲವೆಂದು ಹೇಳಲು ಸಾಧ್ಯವಿಲ್ಲ. ಈ ಕಥೆಗಳು ಹಾಸ್ಯಪ್ರಧಾನವಾಗಿದ್ದು ನೀತಿಬೋಧನೆಯ ಉದ್ದೇಶವನ್ನು ಹೊಂದಿರುತ್ತವೆ. ಜೊತೆಗೆ ಪ್ರಾದೇಶಿಕ, ಸಾಂಸ್ಕೃತಿಕ ಭಿನ್ನತೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುತ್ತವೆ. ಈ ಕಥೆಗನ್ನು ಮೊದಲ ಬಾರಿಗೆ ಡಿ.ವಿ.ಗುಂಡಪ್ಪವರು ಕನ್ನಡಕ್ಕೆ ತಂದರು. ಇದಲ್ಲದೆ ಸ್ವಾಹೀಲಿ ತೊಡರ್ ಅವರ ರೂಮಿಯ ಕಥೆಗಳು, ಪ್ರಿಯತಮ್ ಅವರ ಮುಲ್ಲಾ ನಸ್ರುದ್ದೀನ್ ಕಥೆಗಳು ಕನ್ನಡಕ್ಕೆ ಇತ್ತೀಚೆಗೆ ಬಂದಿವೆ. ಈ ಸಾಹಿತ್ಯದಲ್ಲಿ ಮುಲ್ಲ ನಸ್ರುದ್ದೀನನೇ ಮುಖ್ಯ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಒಟ್ಟಾರೆಯಾಗಿ ಈ ಕಥೆಗಳ ಮುಖ್ಯ ಉದ್ದೇಶ ಮನರಂಜನೆಯ ಮಾರ್ಗವಾಗಿ ನೀತಿಬೋಧನೆ ಮಾಡುವುದು” ಎಂದು ಅವರು ಹೇಳಿದರು.
ರೆಬೆಕ್ಕ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದರು, ಸಂಚಾಲಕರಾದ ವೀನೀತಾ ಜೆ.ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶ್ವೇತಾ ಬಾಳಿ ಪ್ರಾರ್ಥಿಸಿದರು, ಬೇರಿ್ಗ ಜಯಶ್ರೀ ನಿರೂಪಿಸಿದರು, ವಿಭಾಗದ ಮುಖ್ಯಸ್ಥರು ಮತ್ತು ಇತರ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.